ಕಟ್ಟಡ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಮಿನಿ ಗೂಡ್ಸ್ ಟೆಂಪೋವೊಂದು ಹೆದ್ದಾರಿಗೆ ಅಡ್ಡವಾಗಿ ಮಗುಚಿ ಬಿದ್ದ ಘಟನೆ ಕೊಪ್ಪಲಂಗಡಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿ ಬಳಿ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಮಿನಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಅಡ್ಡ ಬಿದ್ದಿದ್ದು ಇದರಿಂದಾಗಿ ಟೆಂಪೋದಲ್ಲಿದ್ದ ಸಾಮಾಗ್ರಿಗಳು ರಸ್ತೆಗೆ ಅಡ್ಡ
ಪಡುಬಿದ್ರಿ ಸಮೀಪದ ಯುಪಿಸಿಎಲ್ ಕಂಪನಿಯಿಂದ ಕೇರಳಕ್ಕೆ ವಿದ್ಯುತ್ ಸರಬರಾಜು ನಡೆಸಲು ಟವರ್ ನಿರ್ಮಾಣಕ್ಕೆ ಜಿಲ್ಲಾಡಳಿತದ ನಿರ್ದೇಶನದಂತೆ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಆಗಮಿಸಿದ ಅಧಿಕಾರಿಗಳ ತಂಡವನ್ನು ಗ್ರಾಮಸ್ಥರು ವಾಪಾಸು ಕಳುಹಿಸಿದ ಘಟನೆ ಇನ್ನಾ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ ಇನ್ನಾ ಗ್ರಾ.ಪಂ.ಸದಸ್ಯ ದೀಪಕ್ ಕೋಟ್ಯಾನ್, ಜನರ ವಿರೋಧದ ನಡುವೆಯೂ ಜನರಿಗೆ ಯಾವುದೇ ಮಾಹಿತಿ ನೀಡದೆ ಇನ್ನಾ ಪ್ರೌಢಶಾಲಾ ಬಳಿ ಯುಪಿಸಿಎಲ್ ನಿಂದ ಕೇರಳಕ್ಕೆ ವಿದ್ಯುತ್
ಅಕ್ರಮವಾಗಿ ಕೋಳಿಯಂಕ ನಡೆಯುತ್ತಿದ್ದ ಕಾಪು ಮಲ್ಲಾರಿನ ಗರಡಿ ಪ್ರದೇಶಕ್ಕೆ ದಾಳಿ ಮಾಡಿದ ಕಾಪು ಪೊಲೀಸರು ಒಂಭತ್ತು ಕೋಳಿ ಸಹಿತ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಬಲೆಗೆ ಬಿದ್ದವರು ಕೈಪುಂಜಾಲು ನಿವಾಸಿಗಳಾದ ವಿಜಿಸ್ಟನ್(42), ಫೆಡ್ರಿಕ್ ಅನ್ಮಣ್ಣ(32), ಕಟ್ ಹೌಸ್ ಮಲ್ಲಾರು ನಿವಾಸಿ ಸಂದೇಶ್(37), ಬೆಳಪು ನಿವಾಸಿ ನಿತಿನ್(30), ಇನ್ನಂಜೆ ನಿವಾಸಿ ಅಭಿಷೇಕ್ (21), ಉಡುಪಿ ಕೊಡವೂರು ನಿವಾಸಿ ಸಚಿನ್ ಕೋಟ್ಯಾನ್ (26) ಹಾಗೂ ಮಲ್ಲಾರು ನಿವಾಸಿ
ಪಡುಬಿದ್ರಿ: ಕಾಪು ಬಿರುವೆರ್ ಸೇವಾ ಸಮಿತಿ ಆಶ್ರಯದಲ್ಲಿ ಅವಳಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಕೂಟ ಸಮಾಜ ಸೇವಾ ಹಿತದೃಷ್ಟಿಯಿಂದ ಡಿ.30 ಮತ್ತು 31ಕ್ಕೆ ಕಾಪು ದಂಡತೀರ್ಥ ಮೈದಾನದಲ್ಲಿ ನಡೆಯಲಿದೆ ಎಂಬುದಾಗಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್ ಹೇಳಿದ್ದಾರೆ. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯ ತಿಳಿಸಿದ್ದಾರೆ. ಪಂದ್ಯಾಕೂಟ ಬಿಲ್ಲವ ಸಮಾಜದ ಯುವಕರಿಗಾಗಿ ನಡೆಯಲಿದ್ದು, ಹತ್ತು ತಂಡಗಳು ಭಾಗವಹಿಸಲಿದೆ. ಸಮಾಜದ 160 ಸದಸ್ಯರು
ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿ ರಸ್ತೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ನಡೆಸುತ್ತಿರುವ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲ್ಲಗುಜ್ಜಿ ಕಾಪು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಕಟಪಾಡಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯಾವುದೇ ಮೂಲಾಜಿ ಇಲ್ಲದೆ ಟಿಪ್ಪರಲ್ಲಿ ಕ್ಯಾಬಿನ್ ಎತ್ತರಕ್ಕೆ ಮಣ್ಣು ತುಂಬಿಸಿಕೊಂಡು ಯಾವುದೇ ಟರ್ಪಾಲು ಹೊದಿಕೆಯನ್ನು ಹಾಕದೆ ದೂಳೆಬ್ಬಿಸುತ್ತಾ ಸಾಲುಗಟ್ಟಿ
ಕಾನೂನು ಬಾಹಿರವಾಗಿ ಮಣ್ಣು ಸಾಗಾಟ ನಡೆಸುತ್ತಿದ್ದ ಟಿಪ್ಪರನ್ನು ತಡೆದ ಸಾರ್ವಜನಿಕರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಪಡುಬಿದ್ರಿಯ ಇಕ್ಕಟ್ಟಾದ ಸರ್ವಿಸ್ ರಸ್ತೆಯಲ್ಲಿ ಸಾಲುಗಟ್ಟಿ ಟಿಪ್ಪರ್ ಗಳು ಮಣ್ಣಿಗೆ ಹೊದಿಕೆಯನ್ನೇ ಹಾಕದೆ ಕಾನೂನು ಬಾಹಿರವಾಗಿ ಸಾಗಾಟ ನಡೆಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಬಹಳಷ್ಟು ಬಾರಿ ಎಚ್ಚರಿಕೆಯನ್ನು ನೀಡಿದರೂ ಮಾನ್ಯತೆ ನೀಡದೆ ತಮ್ಮ ಚಾಲಿ ಮುಂದುವರಿಸಿದ್ದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪಡುಬಿದ್ರಿ ಗ್ರಾ.ಪಂ.
ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯ ನಯಾತ್ ಕಟ್ಟಡದ ಮುಂಭಾಗ ಕದ್ದು ಅಕ್ರಮವಾಗಿ ಸಾಗಿಸುತ್ತಿದ್ದ ಟಿಪ್ಪರ್, ಮರಳು ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.ಆರೋಪಿಗಳಾದ ಮಂತ್ರದೇವತೆ ಹೆಸರಿನ ಟಿಪ್ಪರ್ ಮಾಲಕ ಗುರುಪುರದ ರಾಜೇಶ್ ಹಾಗೂ ಅದರ ಚಾಲಕ ನಂದಿಕೂರು ದೇವಸ್ಥಾನ ಬಳಿಯ ನಿವಾಸಿ ಸರ್ಫ್ರಾಜ್ ಆರೋಪಿಗಳು.ಟಿಪ್ಪರ್ ಮಾಲಿಕನ ಸೂಚನೆಯಂತೆ ವಾಹನದಲ್ಲಿ ಮರಳು ತುಂಬಿಸಿ ಪಡುಬಿದ್ರಿ ಬೀಚ್ ಕಡೆ ಸಾಗಿಸಲು ಹೋಗುತ್ತಿದ್ದ ಟಿಪ್ಪರನ್ನು ಪಡುಬಿದ್ರಿ ಪಿಎಸ್ ಐ
ದೇವರ ಸೃಷ್ಠಿಯಲ್ಲಿ ಎಲ್ಲಾರಿಗೂ ಬದುಕುವ ಸಮಾನ ಅವಕಾಶವಿದ್ದು, ಮೇಲು ಕೀಳು ಎಂಬ ಬೇಧ ಸಲ್ಲದು, ಅದರಲ್ಲೂ ವಿಶೇಷ ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಅವರನ್ನು ಸಂತೋಷವಾಗಿಡುವ ಜವಾಬ್ದಾರಿ ನಮ್ಮದಾಗಿದೆ ಎಂಬುದಾಗಿ ಪಡುಬಿದ್ರಿ ಇನ್ನರ್ ವೀಲ್ಹ್ ಕ್ಲಬ್ ಅಧ್ಯಕ್ಷೆ ನಮೃತ ಮಹೇಶ್ ಅಭಿಪ್ರಾಯಪಟ್ಟರು. ಅವರು ಉಡುಪಿಯ ಸಾಲ್ಮರ ಉಪ್ಪೂರು ಔದ್ಧಿಕ ದಿವಾಂಗರ ವಸತಿ ಕೇಂದ್ರಕ್ಕೆ ತಮ್ಮ ತಂಡದೊಂದಿಗೆ ಭೇಟಿ ಮಾಡಿ ಅಲ್ಲಿನ ಸಾಧಕ ಭಾದಕಗಳನ್ನು ಅರಿತು ಬಳಿಕ ನಡೆದ ಸರಳ
ಬದುಕಿನ ಬಂಡಿ ಸಾಗಿಸುವ ನಿಟ್ಟಿನಲ್ಲಿ ಜೊಳಿಗೆ ಹಾಕಿಕೊಂಡು ಉದ್ಯೋಗ ಹರಸಿ ಹೊರ ದೇಶ ಹೊರ ರಾಜ್ಯಕ್ಕೆ ವಲಸೆ ಹೋದವರು ಅದೆಷ್ಟೋ ಮಂದಿ… ಆದರೆ ಕೊರೋನ ಎಂಬ ರೋಗ ನಮ್ಮನ್ನು ತಾತ್ಕಾಲಿಕವಾಗಿ ಹತ್ತಿರ ತಂದರೂ ಮತ್ತೆ ಅದೇ ಸ್ಥಿತಿ, ಇದೀಗ ಇಂಥಹ ಕೃಷಿ ಮೇಳಗಳನ್ನು ಆಯೋಜಿಸುವ ಮೂಲಕ ಕೃಷಿ ಬದುಕು ಮತ್ತೆ ಹತ್ತಿರವಾಗಲು ಸಾಧ್ಯ ಎಂಬುದಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಅವರು ಪಡುಬಿದ್ರಿಯಲ್ಲಿ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದರು. ಇದೇ
ಬಹಳಷ್ಟು ವರ್ಷಗಳಿಂದ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಎಎಸ್ಸೈ ದಿವಾಕರ್ ಸುವರ್ಣ ವಯೋ ಸಹಜ ನಿವೃತ್ತಿ ನಮಗೆ ತುಂಬಲಾರದ ನಷ್ಟ ಎಂಬುದಾಗಿ ಪಡುಬಿದ್ರಿ ಠಾಣಾ ಎಸ್ಸೈ ಪ್ರಸನ್ನ ಎಂ.ಎಸ್. ಬಹಳ ಬೇಸರ ವ್ಯಕ್ತ ಪಡಿಸಿದ್ದಾರೆ. ಅವರು ಪಡುಬಿದ್ರಿಯ ಖಾಸಗಿ ಸಭಾಂಗಣದಲ್ಲಿ ನಡೆದ ಸರಳ ಬೀಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾನೂನಿನ ವಿಚಾರದಲ್ಲಿ ಯಾರೂ ಪರಿಪೂರ್ಣರಲ್ಲ ನಿಮ್ಮೊಂದಿಗೆ ಸೇವೆ