Home Posts tagged #padubidri (Page 5)

ಪಡುಬಿದ್ರಿ ಇನ್ನರ್ ವ್ಹೀಲ್ ಕ್ಲಬ್‍ನಿಂದ, ನಿಟ್ಟೂರು ಅನಾಥ ಧಾಮದ ಮಕ್ಕಳಿಗೆ ಅಗತ್ಯ ವಸ್ತುಗಳ ಪೂರೈಕೆ

ಪಡುಬಿದ್ರಿ ಇನ್ನರ್ ವ್ಹೀಲ್ ಕ್ಲಬ್ ತನ್ನ ಸದಸ್ಯರೊಡಗೂಡಿ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ನಿಟ್ಟೂರಿನ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖಾ ಆಶ್ರಯದ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿನೀಡಿ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಡೆಸುವ ಮೂಲಕ ಇತರ ಸಂಘ ಸಂಸ್ಥೆಗಳಿಗೆ ಪ್ರೇರಣೆಯಾಗಿದ್ದಾರೆ

ರಸ್ತೆ ದಾಟಲು ನಿಂತಿದ್ದ ಬಾಲಕಿ ಮೇಲೆ ಹರಿದ ಖಾಸಗಿ ಬಸ್ – ಬಾಲಕಿ ಮೃತ್ಯು

ಬಹಳಷ್ಟು ಅಮಾಯಕರ ಬಲಿ ಪಡೆದ ರಾಷ್ಟ್ರೀಯ ಹೆದ್ದಾರಿ ಇದೀಗ ರಸ್ತೆ ದಾಟಲು ನಿಂತಿದ್ದ, ಬಾಲಕಿ ಮೇಲೆ ತಡೆರಹಿತ ಖಾಸಗಿ ಬಸ್ ಹರಿದು ಮೃತಪಟ್ಟ ಘಟನೆ ನಡೆದಿದೆ. ಸ್ಥಳೀಯ ದಂಢತೀರ್ಥ ಶಾಲಾ ಎಂಟನೇ ತರಗತಿ ಬಾಲಕಿ ವರ್ಷೀತಾ ಶೇರ್ವೇಗಾರ್(13) ಎಂಬಾಕೆ ಮೃತಪಟ್ಟ ಬಾಲಕಿ. ಗಂಭೀರ ಗಾಯಗೊಂಡ ಬಾಲಕಿಯನ್ನು ಉಡುಪಿ ಆಸ್ಪತ್ರೆಗೆ ಸಾಗಿಸಿದರೂ ಫಲಕಾರಿಯಾಗದೆ ಬಾಲಕಿ ಮೃತ ಪಟ್ಟಿದ್ದಾಳೆ. ರಾಷ್ಟ್ರೀಯ ಹೆದ್ದಾರಿ ಅಗೆದು ಹಾಕಿ ನಿರ್ಲಕ್ಷ್ಯದಿಂದ ಆಮೆಗತಿಯ ಕಾಮಗಾರಿ ನಡೆಸುತ್ತಿದ್ದರಿಂದ

ನಶಿಸಿ ಹೋಗುತ್ತಿರುವ ಕಂಗೀಲು ಧಾರ್ಮಿಕ ಆಚರಣೆ ಹೆಜಮಾಡಿಯಲ್ಲಿ ಇಂದಿಗೂ ಜೀವಂತ

ತೆರೆಮರೆಯ ಕಡೆ ವಾಲುತ್ತಿರುವ ಧಾರ್ಮಿಕ ಆಚರಣೆಯಲ್ಲಿ ಕಂಗೀಲು ಕೂಡಾ ಒಂದು..ಬಹುತೇಕ ಕಡೆ ಇಲ್ಲವಾಗಿರುವ ಕಂಗೀಲು ಹೆಜಮಾಡಿಯಲ್ಲಿ ಇಂದೂ ಜೀವಂತ ಎಂಬುದು ಸಂತೋಷ.. ಹೆಜಮಾಡಿ ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಮೂಲಕ ಹತ್ತು ಸಮಸ್ತರನ್ನು ಸೇರಿಸಿ ವರ್ಷಂಪ್ರತಿಯಂತೆ ಹೆಜಮಾಡಿ ಆಲಡೆ ಜಾತ್ರೆಯ ಮರುದಿನ ಮಾಯಿ ಹುಣ್ಣುಮೆ ದಿನದಂದ್ದು, ಶ್ರೀದೈವಸ್ಥಾನಕ್ಕೆ ಸಂಬಂಧಿಸಿದ ಮಂದಿ ಸೇರಿ ಹಿರಿಯರು ನಡೆದು ಕೊಂಡು ಬಂದ ಧಾರ್ಮಿಕ ವಿಧಿವಿಧಾನಗಳಂತೆ ಹತ್ತು ಸಮಸ್ತರನ್ನು

ಫೆ. 22-25,ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ-ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಸಿರಿ ಸಿಂಗಾರದ ನೇಮ

ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ವೇ| ಮೂ| ಬೆಟ್ಟಿಗೆ ವೆಂಕಟರಾಜ ತಂತ್ರಿಗಳ ನೇತೃತ್ವದಲ್ಲಿ ಫೆ. ೨೨ರಿಂದ ಮೊದಲ್ಗೊಂಡು ಫೆ. ೨೫ರವರೆಗೆ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಸಿರಿ ಸಿಂಗಾರದ ನೇಮ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಶ್ರೀಕ್ಷೇತ್ರದಲ್ಲಿ ನಡೆಸಿದ

ಹೆಜಮಾಡಿಕೋಡಿ ವಿದ್ಯಾಪ್ರಸಾರ ವಿದ್ಯಾ ಮಂದಿರ : ಪ್ರತಿಭಾನ್ವೇಷಣಾ ಕಾರ್ಯಕ್ರಮ-2023

ಹೆಜಮಾಡಿಕೋಡಿ ವಿದ್ಯಾ ಪ್ರಸಾರ ವಿದ್ಯಾ ಮಂದಿರದಲ್ಲಿ ಪ್ರತಿಭಾನ್ವೇಷಣೆ ಕಾರ್ಯಕ್ರಮವು ಜರುಗಿತು. ಸ್ಥಳೀಯ 6 ವರ್ಷದ ಒಳಗಿನ ಪುಟಾಣಿ, ಮಕ್ಕಳ ಪ್ರತಿಭೆಯನ್ನು ವ್ಯಕ್ತ ಪಡಿಸಲು ವೇದಿಕೆಯನ್ನು ನಿರ್ಮಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಮೋಜಿನ ಆಟಗಳನ್ನು ಅಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅದ್ರಷ್ಟಶಾಲಿ ಮಗುವನ್ನು ಆಯ್ಕೆ ಮಾಡಿ, ಆ ಮಗುವಿಗೆ ಒಂದು.. ವರ್ಷದ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ವೈಧ್ಯಾಧಿಕಾರಿ ಡಾ.ಕ್ರಷ್ಣ

ಶರಣ್ ಪಂಪ್‌ವೆಲ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ: ಗುಲಾಂ ಮುಹಮ್ಮದ್

ಪಡುಬಿದ್ರಿ: ಫಾಝಿಲ್ ಹತ್ಯೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಕೂಡಲೇ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಗುಲಾಂ ಮುಹಮ್ಮದ್ ಹೆಜಮಾಡಿ ಒತ್ತಾಯಿಸಿದ್ದಾರೆ. ತುಮಕೂರು ಹಾಗೂ ಉಳ್ಳಾಲದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಇಲಾಖೆಗೆ ಶರಣ್ ಪಂಪ್‌ವೆಲ್ ಸಾವಾಲೆಸಿದ್ದಿದ್ದಾನೆ. ಇಲಾಖೆ ಇಂತಹವರ ವಿರುದ್ಧ ಯಾವುದೇ ರೀತಿಯಲ್ಲಿ ಸರ್ಕಾರದ ಒತ್ತಡಕ್ಕೆ ಮಣಿಯದೆ

ಪಡುಬಿದ್ರಿಯಲ್ಲಿ ಸರಣಿ ಕಳ್ಳತನ, ಕಳವು ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಳೆದ ರಾತ್ರಿ ಪಡುಬಿದ್ರಿ ಮುಖ್ಯ ಮಾರುಕಟ್ಟೆಯ ಸೂಪರ್ ಮಾರ್ಕೆಟ್ ಹಾಗೂ ಕಾರ್ಕಳ ರಸ್ತೆಯಲ್ಲಿರುವ ಬಟ್ಟೆಯಂಗಡಿಯಲ್ಲಿ ಕಳ್ಳತನ ನಡೆದಿದ್ದು ಸಹಸ್ರಾರು ರೂಪಾಯಿ ಬೆಲೆಬಾಳುವ ವಸ್ತುಗಳು ಹಾಗೂ ನಗದು ಕಳವಾಗಿದ್ದು ಕಳ್ಳ ಸಿಸಿ ಕ್ಯಾಮಾರದಲ್ಲಿ ಸೆರೆ ಸಿಕ್ಕಿದ್ದಾನೆ.ಮುಖ್ಯ ಮಾರುಕಟ್ಟೆಯಲ್ಲಿರುವ ಕೆ.ಎಸ್. ಬಜಾರ್‍ನ ಬೀಗ ಮುರಿದ ಕಳ್ಳ ಒಳ ಹೊಕ್ಕು ಒಂದು ಲ್ಯಾಪ್‍ಟಾಪ್ ಹಾಗೂ ಒಂದು ಬೊಬೈಲ್ ಕಳವು ನಡೆಸಿದ್ದಾನೆ. ಕಾರ್ಕಳ ರಸ್ತೆಯಲ್ಲಿರುವ ಬಟ್ಟೆಯಂಗಡಿಯ

ಪಡುಹಿತ್ಲು ಜಾರಂದಾಯ ಸನ್ನಿಧಿಗೆ ಸ್ವರ್ಣ ಖಡ್ಸಲೆ ಹಾಗೂ ಬೃಹತ್ ಕಾಲುದೀಪ ಅರ್ಪಣಾ ಮೆರವಣಿಗೆ

ಪಡುಬಿದ್ರಿ ಪಡುಹಿತ್ಲು ಜಾರಂದಾಯ ಬಂಟ ದೈವಸ್ಥಾನಕ್ಕೆ ಊರ ಪರವೂರ ಭಕ್ತಾಧಿಗಳು ನೀಡಿದ ಸುಮಾರು 60ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಖಡ್ಸಲೆ ಹಾಗೂ ಬೃಹತ್ ಕಾಲು ದೀಪವನ್ನು ಅದ್ಧೂರಿಯಾಗಿ ನೂರಾರು ಮಂದಿ ಭಕ್ತರು ಸೇರಿದ ಮೆರವಣಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ಅರ್ಪಿಸಲಾಯಿತು. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಧಾನದಿಂದ ಹೊರಟ ಭವ್ಯ ಮೆರವಣಿಗೆಯಲ್ಲಿ ಅವಳಿ ಕುದುರೆಗಳು, ಭಜನಾ ಕುಣಿತ, ಕುದುರೆ ರಥ, ಚೆಂಡೆ, ವಾದ್ಯ ವಾದನ ಮುಂತಾದವುಗಳು ಗಮನ ಸೆಳೆದವು. ಈ ಬಗ್ಗೆ

ಪಡುಬಿದ್ರಿ: ಹೆದ್ದಾರಿಯಲ್ಲಿ ಆಂಧ್ರ ಮೂಲದ ಯುವತಿಯ ರಕ್ಷಣೆ

ಪಡುಬಿದ್ರಿಯ ಠಾಣಾ ವ್ಯಾಪ್ತಿಯ ರಾ.ಹೆದ್ದಾರಿಯಲ್ಲಿ ರಾತ್ರಿ ಹೊತ್ತು ಒಬ್ಬಂಟಿಗಳಾಗಿ ನಡೆದುಕೊಂಡು ಹೋಗುತ್ತಿದ್ದ ಆಂಧ್ರದ ನೆಲ್ಲೂರು ನಿವಾಸಿ ಹನು (29) ಎಂಬ ಯುವತಿಯನ್ನು ಸಮಾಜ ಸೇವಕ ವಿಶುಶೆಟ್ಟಿ ಅವರು ಸ್ಥಳೀಯ ಪೊಲೀಸರ ಸಹಾಯದಿಂದ ರಕ್ಷಿಸಿ ಚಿಕಿತ್ಸೆಗಾಗಿ ಉಡುಪಿಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾನು ನಡೆದುಕೊಂಡೇ ತನ್ನೂರನ್ನು ಸೇರುತ್ತೇನೆ ಎಂದು ಮೊಂಡು ಹಠ ಮಾಡಿದ ಯುವತಿಯನ್ನು ಉಡುಪಿಯ ಸಖಿ ಸೆಂಟರ್‍ಗೆ ದಾಖಲಿಸಲು ಅವರು

ಕಟಪಾಡಿ: ಪೊಲೀಸರಿಂದ ವಾಹನ ಸವಾರರಿಗೆ ಜಾಗೃತಿ ಕಾರ್ಯಕ್ರಮ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ನಲ್ಲಿ ಪ್ರತಿದಿನ ಅಪಘಾತ ಸಂಭವಿಸುತ್ತಿದ್ದು, ಕಾಪು ಪೊಲೀಸರಿಂದ ವಾಹನ ಸವಾರರನ್ನು ಜಾಗೃರನ್ನಾಗಿ  ಮಾಡುವ ಸಂದೇಶ ಸಾರಲಾಯಿತು. ಅಪಘಾತ ಸಂಭವಿಸಲು ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು ಕಾರಣವಾಗಿದೆ. ಇದಕ್ಕಾಗಿ  ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮವಾಗಿ ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಸೂಚನಾ ಫಲಕವನ್ನು ಕಟಪಾಡಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ