ಸುಳ್ಯ : ಸುಳ್ಯ ಪೇಟೆಯಲ್ಲಿ ಮಳೆಗೆ ಧರೆಗುರುಳಿದ ಟ್ರಾನ್ಸ್ ಫಾರ್ಮರ್
ಸುಳ್ಯ ಪೇಟೆಯಲ್ಲಿ ಭಾರಿ ಮಳೆಗೆ ಭೂಕುಸಿತ ಉಂಟಾಗಿ ಟ್ರಾನ್ರ್ಸ್‍ಫಾರ್ಮರ್ ಧರೆಗುರುಳಿರುವ ಘಟನೆ ನಡೆದಿದೆ ಸುಳ್ಯ ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಗುಡುಗು ಸಹಿತ ಭಾರಿ ಮಳೆಯಾಗುತ್ತಿದು ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದಾಗಿ ಸುಳ್ಯ ತಾಲೂಕಿನ ಹಲವೆಡೆ ಭೂ ಕುಸಿತ ಉಂಟಾಗಿದೆ. ಏಕಾಏಕಿ ಭೂ ಕುಸಿತ ಉಂಟಾಗಿ ಟ್ರಾನ್ರ್ಸ್‍ಫಾರ್ಮರ್ ಧರಾಶಾಹಿಯಾಗಿರುವ ಘಟನೆ ಸುಳ್ಯ ಪೇಟೆಯಲ್ಲಿ ನಡೆದಿದೆ.