ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಲಯವಾರು ನೀಟ್ ಫಲಿತಾಂಶ ಪ್ರಕಟವಾಗಿದ್ದು ರಾಜಸ್ತಾನ, ಗುಜರಾತ್ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳು ಉತ್ತಮ ಸಾಧನೆ ಮಾಡಿವೆ. ಹರಿಯಾಣದ 720ಕ್ಕೆ 720 ಪಡೆದಿದ್ದ ಒಬ್ಬರು ಕೂಡ ಮತ್ತೆ ಆ ಸಾಧನೆ ಪಡೆದಿಲ್ಲ. 700ಕ್ಕೆ ಮೇಲೆ ಅಂಕ ಗಳಿಸಿದವರಿಗೆ ಮರು ಪರೀಕ್ಷೆ ನಡೆಸಲಾಗಿತ್ತು. ನೀಟ್ ಫಲಿತಾಂಶದಂತೆ 2,250 ಮಂದಿ ಸೊನ್ನೆ ಅಂಕ
ಕರ್ನಾಟಕದ ವಶ ಇರುವ ದಿವಂಗತ ಜಯಲಲಿತಾರಿಗೆ ಸೇರಿದ ಚಿನ್ನಾಭರಣಗಳನ್ನು ತಮಿಳುನಾಡು ಸರಕಾರಕ್ಕೆ ಒಪ್ಪಿಸುವುದಕ್ಕೆ ಹೈಕೋರ್ಟ್ ಮಧ್ಯಾವಧಿ ತಡೆ ನೀಡಿತು. ಇವುಗಳಲ್ಲಿ ಹೆಚ್ಚಿನ ಆಭರಣಗಳು ನನ್ನ ಅಜ್ಜಿ ನಟಿ ಸಂಧ್ಯಾರಿಗೆ ಸೇರಿದ್ದು ಎಂದು ಜಯಲಲಿತಾರ ಸಹೋದರನ ಮಗಳು ಜೆ. ದೀಪಾ ತಕರಾರು ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಪಿ. ಎಂ. ನವಾಜ್ ಅವರು ಚಿನ್ನಾಭರಣ ಹಸ್ತಾಂತರಕ್ಕೆ ತಾತ್ಕಾಲಿಕ ತಡೆ ನೀಡಿದರು.
ಭಾರತದಲ್ಲಿ ಚಿರತೆಗಳ ಸಂಖ್ಯೆ ವಾರ್ಷಿಕ 1.08 ಶೇಕಡಾ ಏರಿಕೆ ಕಾಣುತ್ತಿದೆ. ಸದ್ಯ ಭಾರತದಲ್ಲಿ 13,874 ಚಿರತೆಗಳು ಇರುವುದಾಗಿ ಒಕ್ಕೂಟ ಸರಕಾರದ ಪರಿಸರ ಮಂತ್ರಿ ಭೂಪೇಂದ್ರ ಯಾದವ್ ಬಿಡುಗಡೆ ಮಾಡಿರುವ ಚಿರತೆ ಸ್ಥಿತಿಗತಿ ವರದಿಯಲ್ಲಿ ಇದೆ. ಈ ಚಿರತೆ ಎನ್ನುವುದು ಲೆಪರ್ಡ್. ಇದನ್ನು ತುಳುವಿನಲ್ಲಿ ಚಿಟ್ಟೆ ಪಿಲಿ, ನೆಯ್ಪಿಲಿ ಎಂದೆಲ್ಲ ಕರೆಯುತ್ತಾರೆ. ಇದಕ್ಕೆ ನೆಯ್ಪಿಲಿ ಹೆಸರು ಬಂದುದು ಅದರ ಬೇಟೆಯಿಂದ. ಲೆಪರ್ಡ್ ಚಿರತೆಯು ನಾಯಿ ಹಿಡಿಯುವುದರಲ್ಲಿ ಎಕ್ಸ್‍ಪರ್ಟ್.
ಬಂಗಾಳ ಕೊಲ್ಲಿಯಲ್ಲಿ ಹುಟ್ಟಿದ ಮಿಚುಂಗ್ ಚಂಡಮಾರುತವು ತಮಿಳುನಾಡನ್ನು ಹೊಕ್ಕು 16 ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯನ್ನು ಸುರಿಸತೊಡಗಿದೆ. ಕಾಂಚೀಪುರಂ, ಚೆಂಗಲ್ ಪಟ್ಟು ಮೊದಲಾದ ಜಿಲ್ಲಾಡಳಿತಗಳು ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ನೀಡಿದೆ. ಮಳೆಯಿಂದಾಗಿ ಜನಜೀವನವು ಅಸ್ತವ್ಯಸ್ತಗೊಂಡಿದೆ. ಚೆನ್ನೈ ಸಹಿತ, ತಿರುವಳ್ಳೂರು ಕರ್ನಾಟಕದೊತ್ತಿನ ಧರ್ಮಪುರಿಯವರೆಗೆ 16 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ
ಸರಕಾರಿ ನೌಕರರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಪಡೆಯುತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿ ಅಂಕಿತ್ ತಿವಾರಿ ಅವರನ್ನು ತಮಿಳುನಾಡು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದವರು ಡಿಂಡಿಗಲ್‍ನಲ್ಲಿ ವಶಕ್ಕೆ ಪಡೆದರು. ಸ್ಥಳೀಯ ಕೋರ್ಟು ತಿವಾರಿಯನ್ನು ಡಿಸೆಂಬರ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರ ಬೆನ್ನಿಗೇ ಮಧುರೈಯಲ್ಲಿರುವ ಇಡಿ- ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿಗೆ ಭ್ರಷ್ಟಾಚಾರ ನಿಗ್ರಹ ದಳದವರು ಜಾರಿ ಮಾಡಿದರು. ಹಾಗೆಯೇ