ತಮಿಳುನಾಡು ಹೊಕ್ಕ ಮಿಚುಂಗ್ ಚಂಡಮಾರುತ
ಬಂಗಾಳ ಕೊಲ್ಲಿಯಲ್ಲಿ ಹುಟ್ಟಿದ ಮಿಚುಂಗ್ ಚಂಡಮಾರುತವು ತಮಿಳುನಾಡನ್ನು ಹೊಕ್ಕು 16 ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯನ್ನು ಸುರಿಸತೊಡಗಿದೆ. ಕಾಂಚೀಪುರಂ, ಚೆಂಗಲ್ ಪಟ್ಟು ಮೊದಲಾದ ಜಿಲ್ಲಾಡಳಿತಗಳು ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ನೀಡಿದೆ. ಮಳೆಯಿಂದಾಗಿ ಜನಜೀವನವು ಅಸ್ತವ್ಯಸ್ತಗೊಂಡಿದೆ. ಚೆನ್ನೈ ಸಹಿತ, ತಿರುವಳ್ಳೂರು ಕರ್ನಾಟಕದೊತ್ತಿನ ಧರ್ಮಪುರಿಯವರೆಗೆ 16 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ