Home Posts tagged V4News (Page 210)

Subramanya : ಭಾರೀ ಮಳೆಗೆ ಮುಳುಗಡೆಯಾದ ಸುಬ್ರಹ್ಮಣ್ಯ ಕುಮಾರಧಾರ ಸ್ನಾನಘಟ್ಟ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ಕುಮಾರ ಧಾರ ನದಿ ಉಕ್ಕಿ ಹರಿಯುತ್ತಿದೆ. ನದಿಯಲ್ಲಿ ರಭಸದಿಂದ ನೀರು ಹರಿಯುತ್ತಿರುವುರಿಂದ ಪವಿತ್ರ ಸ್ನಾನ ಘಟ್ಟ ಮುಳುಗಡೆಯಾಗಿದೆ.ಹೀಗಾಗಿ ಭಕ್ತಾದಿಗಳಿಗೆ ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ದ.ಕ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಹಾನಿಯಾಗಿರುವ ಬಗ್ಗೆಯೂ

ಪುರಸಭೆಯ ನಿರ್ಲಕ್ಷ್ಯ ಕೃಷಿ ಚಟುವಟಿಕೆಗಳಿಗೆ ಅಡ್ಡಿ: ಮಾಹಿತಿ ನೀಡಿದರೂ ಮೌನವಾದ ಅಧಿಕಾರಿಗಳು

ಕೃಷಿ ಚಟುವಟಿಕೆ ನಡೆಸಲು ಉತ್ತೇಜನ ನೀಡಬೇಕಾಗಿದ್ದ ಕಾಪು ಪುರಸಭೆಯಿಂದಲೇ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತಿದ್ದು, ಈ ಬಗ್ಗೆ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದರ, ಅವರು ಮೌನಕ್ಕೆ ಶರಣಾಗಿದ್ದಾರೆ ಎಂಬುದಾಗಿ ಕಾಪುವಿನ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಾಪು-ಮಲ್ಲಾರು ಮುಖ್ಯ ರಸ್ತೆ ಇಕ್ಕೆಲುಗಳನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಗಿಡಗಂಟಿಗಳನ್ನು, ಮಣ್ಣ ದಿಬ್ಬಗಳನ್ನು ತೆಗೆದ್ದರೂ ಅಲ್ಲಿಂದ ತೆರವು ಮಾಡದೆ ರಸ್ತೆ ಅಂಚಿನಲ್ಲೇ ಬಿಟ್ಟು ಹೋದ ಪರಿಣಾಮ,

ಹೊಸಂಗಡಿ-ವರ್ಕಾಡಿ-ಆನೆಕಲ್ಲು ರಸ್ತೆ ಬದಿ ಅಪಾಯಕಾರಿ ಮರಗಳು

ಮಂಜೇಶ್ವರ: ಹೊಸಂಗಡಿ – ವರ್ಕಾಡಿ – ಆನೆಕಲ್ಲು ರಸ್ತೆಯ ವಿವಿಧ ಕಡೆ ರಸ್ತೆ ಬದಿ ಬೃಹತ್ ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ಇದ್ದು, ಇನ್ನು ಕೆಲವು ಕೊಂಬೆಗಳು ಮುರಿದು ಬೀಳುವ ಹಂತದಲ್ಲಿವೆ. ಮಳೆಗಾಲ ಆರಂಭಗೊಂಡ ಬಳಿಕ ಈಗಾಗಲೇ ಹಲವಾರು ಅನಾಹುತಗಳು ಸಂಭವಿದೆ. ಇಲಾಖೆ ಈ ಬಗ್ಗೆ ಎಚ್ಚರ ವಹಿಸದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಮಂಜೇಶ್ವರದ ಬಹುತೇಕ ಪ್ರದೇಶಗಳಲ್ಲೂ ಒಣಗಿದ, ರೋಗಗ್ರಸ್ತ ಮತ್ತು ಬೃಹತ್ ಮರಗಳು, ರೆಂಬೆಗಳನ್ನು ಮಳೆಗಾಲಕ್ಕೆ

ಬೆಳ್ಮಣ್ : ಬೈಕ್ ಮೇಲೆ ಉರುಳಿದ ಬೃಹತ್ ಗಾತ್ರದ ಮರ

ಬೃಹತ್ ಗಾತ್ರ ಮರವೊಂದು ರಸ್ತೆಗೆ ಉರುಳಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಬೆಳ್ಮಣ್ ಪೇಟೆಯಲ್ಲಿ ನಡೆದಿದೆ. ಪಿಲಾರು ನಿವಾಸಿ ಪ್ರವೀಣ್ ಮೃತ ದುರ್ದೈವಿ. ಘಟನೆಯಲ್ಲಿ ಬೈಕ್ ಸವಾರ ಮರದಡಿಯಲ್ಲಿ ಸಿಲುಕಿಕೊಂಡಿದ್ದು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ.ಹಲವು ಗಂಟೆಗಳ ಕಾಲ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಬಳಿಕ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನು ತೆರವುಗೊಳಿಸುವ ಕಾರ್ಯ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆ : ಕುಸಿತದ ಭೀತಿಯಲ್ಲಿ ಸಾಣೂರಿನ ಪಶು ಚಿಕಿತ್ಸಾಲಯ

ಕಾರ್ಕಳ-ಮೂಡಬಿದಿರೆ, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವಾಗ ಇಲಾಖಾ ಹಾಗೂ ಪ್ರಾಧಿಕಾರವು ಯಾವುದೇ ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷ ತೋರಿದ ಪರಿಣಾಮವಾಗಿ ಸಾಣೂರು ಗ್ರಾಮದ ಏಕೈಕ ಪಶು ಚಿಕಿತ್ಸಾಲಯ ಸದ್ಯದಲ್ಲೇ ನೆಲಕ್ಕೆ ಉರುಳುವ ಸಂಭವವಿದೆ. ಸಾಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಸಾದ್ ರವರು ಮಾಧ್ಯಮದೊಂದಿಗೆ ಮಾತನಾಡಿ, ಯಾವುದೇ ಮುಂಜಾಗ್ರತೆ ಕ್ರಮ ವಹಿಸದೆ ಸಾಣೂರು ಪರಿಸರದಲ್ಲಿ ಗುಡ್ಡವನ್ನು ಜೆಸಿಬಿ ಯಂತ್ರದ ಮೂಲಕ

ಪುತ್ತೂರು : ನೋಡು ನೋಡುತ್ತಿದ್ದಂತೆ ಪಾತಾಳಕ್ಕೆ ಕುಸಿದ ಬಾವಿ

ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪುತ್ತೂರಿನಲ್ಲಿ ಭಾರೀ ಭೂಕುಸಿತ ಉಂಟಾದ ಘಟನೆ ನಡೆದಿದೆ. ಮನೆ ಮಂದಿ ನೋಡು ನೋಡುತ್ತಿದ್ದಂತೆ ಪಾತಾಳಕ್ಕೆ ಬಾವಿ ಕುಸಿದಿದ್ದು, ಪುತ್ತೂರು ನಗರಸಭಾ ವ್ಯಾಪ್ತಿಯ ಬಪ್ಪಳಿಕೆ ಎಂಬಲ್ಲಿ ಘಟನೆ ನಡೆದಿದೆ. ಬಾವಿ ಕುಸಿದ ಹಿನ್ನಲೆಯಲ್ಲಿ ಹೊಸ ಮನೆಯೂ ಕುಸಿಯುವ ಅಪಾಯದಲ್ಲಿದೆ. ಬಪ್ಪಳಿಕೆ ನಿವಾಸಿ ಸುಶೀಲ ಎಂಬವರಿಗೆ ಸೇರಿದ ಮನೆಯಾಗಿದ್ದು, ಭೂ ಕುಸಿತದಿಂದಾಗಿ ಪರಿಸರದ ಜನ ಆತಂಕದಲ್ಲಿದ್ದಾರೆ. ಅಗ್ನಿಶಾಮಕ ದಳ ದವರು ಮನೆ ಮಂದಿಯನ್ನು

ಇರುವೈಲು ಗ್ರಾ.ಪಂ.ನ ಪುದ್ದರಕೋಡಿಯಲ್ಲಿ ಅಪಾಯಕಾರಿ ಕಾಲು ಸಂಕ

ಮೂಡುಬಿದಿರೆ : ಅಡಿಕೆ ಮರವನ್ನು ಬಳಸಿ ನಿರ್ಮಿಸಿರುವ ಅಪಾಯಕಾರಿ ಕಾಲು ಸಂಕದಲ್ಲಿ ಅಂಗನವಾಡಿ, ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಸಹಿತ ಸಾರ್ವಜನಿಕರು ಜೀವ ಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾ.ಪಂ ವ್ಯಾಪ್ತಿಯ ತೋಡಾರು ಗ್ರಾಮದ ಪುದ್ದರಕೋಡಿ ಜಯ ಶೆಟ್ಟಿ ಎಂಬವರ ಮನೆ ಬಳಿ ಎದುರಾಗಿದೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದ ಕಾಲು ಸಂಕವು ಕಳೆದ ವರ್ಷ ಮನೆಯ ರಭಸಕ್ಕೆ ಕುಸಿದು ಹೋಗಿತ್ತು. ಆಗ ಅಡಿಕೆ ಮರಗಳನ್ನು ಬಳಸಿ ತಾತ್ಕಾಲಿಕ

ಪುತ್ತಿಗೆ ಕಾಯರ್ ಪುಂಡ್‍ನಲ್ಲಿ ಜಲಾವೃತ : ಸಾರ್ವಜನಿಕರ ದೂರಿಗೆ ಎಚ್ಚೆತ್ತುಕೊಂಡ ಪಂಚಾಯತ್

ಮೂಡುಬಿದಿರೆ : ನಿರಂತರ ಸುರಿದ ಮನೆಯಿಂದಾಗಿ ತಾಲೂಕಿನ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಯರ್ ಪುಂಡ್ ನಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ತೋಟಕ್ಕೆ ನುಗ್ಗಿದೆ. ಕಾಯರ್ ಪುಂಡ್ ಕಾಲನಿಯಲ್ಲಿ ಮಳೆಯ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆಯಲ್ಲಿ ತುಂಬಿಕೊಂಡು ತೋಟಗಳಲ್ಲಿ ತುಂಬಿಕೊಂಡಿತ್ತು. ಈ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಪುತ್ತಿಗೆ ಪಂಚಾಯತ್ ತಕ್ಷಣ ಎಚ್ಚೆತ್ತುಕೊಂಡಿದೆ.ಪಂಚಾಯತ್ ಅಭಿವೃದ್ಧಿ

ಮಳೆನೀರಿಗೆ ಬಿದ್ದ ಮೃತರ ಮನೆಗೆ ಸಹಾಯಕ ಆಯುಕ್ತ ಭೇಟಿ

ಉಳ್ಳಾಲ: ಪ್ರಾಕೃತಿಕ ವಿಕೋಪದಡಿ ಜು. 04 ರಂದು ಮೃತಪಟ್ಟ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿನ ನಿವಾಸಿ ಸುರೇಶ್ ಗಟ್ಟಿ ಮನೆಗೆ ಸಹಾಯಕ ಆಯುಕ್ತರಾದ ರಾಜು.ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತರ ಪತ್ನಿಗೆ ವೃದ್ಧಾಪ್ಯ ವೇತನ ಹಾಗೂ ಹೆಚ್ಚುವರಿ ರೂ. 20,000 ಅನುದಾನವನ್ನು ಸರಕಾರದ ವತಿಯಿಂದ ಒದಗಿಸುವ ಪ್ರಯತ್ನ ಮಾಡುವ ಭರವಸೆ ನೀಡಿದರು ಈ ಸಂದರ್ಭ ಕಂದಾಯ ನಿರೀಕ್ಷಕ ಮಂಜುನಾಥ್ , ಸೋಮೇಶ್ವರ ಪುರಸಭೆ ಗ್ರಾಮಕರಣಿಕೆ ಲಾವಣ್ಯ, , ಮೃತರ ಸಂಬಂಧಿ ಸುರೇಶ್ ಗಟ್ಟಿ,

ಕ.ಸಾ.ಪ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆ.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಕಾರ್ಯಕಾರಿ ಸಮಿತಿಯ ಸಭೆ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ಘಟಕದ ಅಧ್ಯಕ್ಷ ಡಾ.ಮಂಜುನಾಥ್ ಎಸ್. ರೇವಣಕರರವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ರತ್ನಾವತಿ ಜೆ. ಬೈಕಾಡಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗೌರವ ಕಾರ್ಯದರ್ಶಿ ಎನ್.ಗಣೇಶ್ ಪ್ರಸಾದ್ ಜೀ ಸ್ವಾಗತಿಸಿ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ಶ್ರೀ ಸುಬ್ರಾಯ ಭಟ್ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ