ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆ : ಕುಸಿತದ ಭೀತಿಯಲ್ಲಿ ಸಾಣೂರಿನ ಪಶು ಚಿಕಿತ್ಸಾಲಯ

ಕಾರ್ಕಳ-ಮೂಡಬಿದಿರೆ, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವಾಗ ಇಲಾಖಾ ಹಾಗೂ ಪ್ರಾಧಿಕಾರವು ಯಾವುದೇ ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷ ತೋರಿದ ಪರಿಣಾಮವಾಗಿ ಸಾಣೂರು ಗ್ರಾಮದ ಏಕೈಕ ಪಶು ಚಿಕಿತ್ಸಾಲಯ ಸದ್ಯದಲ್ಲೇ ನೆಲಕ್ಕೆ ಉರುಳುವ ಸಂಭವವಿದೆ.

ಸಾಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಸಾದ್ ರವರು ಮಾಧ್ಯಮದೊಂದಿಗೆ ಮಾತನಾಡಿ, ಯಾವುದೇ ಮುಂಜಾಗ್ರತೆ ಕ್ರಮ ವಹಿಸದೆ ಸಾಣೂರು ಪರಿಸರದಲ್ಲಿ ಗುಡ್ಡವನ್ನು ಜೆಸಿಬಿ ಯಂತ್ರದ ಮೂಲಕ ಮನಬಂದಂತೆ ಅಗೆದ ಪರಿಣಾಮ ಪಶು ಚಿಕಿತ್ಸಾಲಯ ಸದ್ಯದಲ್ಲೇ ಧಾರಾಶಾಹಿಯಾಗುವ ಎಲ್ಲ ಸಂಭವವಿದೆ ಎಂದು ಹೇಳಿದರು. ಈ ಸಮಸ್ಯೆ ಬಗ್ಗೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳ ಬಳಿ ವಿನಂತಿಸಿದಾಗ ನಮಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಈ ಕಟ್ಟಡ ನೆಲಕ್ಕೆ ಉಳಿದರೆ ಇದರ ಹೊಣೆ ಯಾರು ಎಂದು ಪ್ರಸಾದ್ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು.