Home Posts tagged V4News (Page 360)

ಕಿನ್ನಿಗೋಳಿ: ಮೆನ್ನಬೆಟ್ಟುವಿನ ಜಮೀನಿನಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ವಿರೋಧ, ಗ್ರಾಮಸ್ಥರಿಂದ ಪ್ರತಿಭಟನೆ

ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯ ವಸ್ತುಗಳನ್ನು ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದಲ್ಲಿರುವ 17 ಗೋಮಾಳ ಜಮೀನಿನಲ್ಲಿ ಹಾಕಿ ಘಟಕ ನಿರ್ಮಾಣ ಮಾಡುವುದನ್ನು ವಿರೋಧಿಸಿ ಹಾಗೂ ಜಮೀನಿನಲ್ಲಿ ದಾಖಲು ಆಗಿರುವ ಮಂಜುರಾತಿಯನ್ನು ರದ್ದು ಮಾಡುವ ಬಗ್ಗೆ ಗ್ರಾಮಸ್ಧರಿಂದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಂಭಾಗ ಬೃಹತ್ ಪ್ರತಿಭಟನೆ

ನೆಲ್ಯಾಡಿ: ಶಿಶಿಲ ಪೇಟೆಯಲ್ಲಿ “ಸ್ವಚ್ಛತಾ ಹಿ ಸೇವಾ” ; ಪ್ರತಿಜ್ಞಾವಿಧಿ ಬೋಧನೆ

ಕೊಕ್ಕಡ : ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಯಾದ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದಡಿ ಶಿಶಿಲ ಪೇಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಶಿಶಿಲ ಗ್ರಾ.ಪಂ. ಅಧ್ಯಕ್ಷ ಸುಧೀನ್ ಡಿ., ಉಪಾಧ್ಯಕ್ಷ ಯತೀಶ್ ಯಳಚಿತ್ತಾಯ, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು, ಸಂಜೀವಿನಿ ಒಕ್ಕೂಟದ ಸದಸ್ಯರು, ಪಂಚಾಯತ್ ಆಟೋ ಚಾಲಕ ವೃಂದ, ಶೌರ್ಯ ವಿಪತ್ತು ನಿರ್ವಹಣಾ ತಂಡ, ಅಂಗಡಿ ಮಾಲಕರು, ಹಾಗೂ ಸ್ಥಳೀಯ ನಿವಾಸಿಗಳು ಸ್ವಚ್ಛತಾ ಕಾರ್ಯದಲ್ಲಿ

ನೆಲ್ಯಾಡಿ: ವಿದ್ಯುತ್ ಕಂಬದ ಮೇಲೆ ಬಿದ್ದ ಮರ: ಶೌರ್ಯ ತಂಡದಿಂದ ತೆರವು

ಭಾರೀ ಮಳೆ ಸುರಿದ ಪರಿಣಾಮ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು ಮರ ಮತ್ತು ವಿದ್ಯುತ್ ಕಂಬ ರಸ್ತೆಗೆ ಉರುಳಿ ಕೆಲ ಸಮಯ ವಿದ್ಯುತ್ ವ್ಯತ್ಯಯ ಉಂಟಾದ ಘಟನೆ ನಿಡ್ಲೆಯಿಂದ ಪಟ್ರಮೆಗೆ ಸಂಪರ್ಕಿಸುವ ರಸ್ತೆಯ ಸುರ್ಯತ್ತಾವು ಸಮೀಪ ಸಂಭವಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕಳೆಂಜ ಶೌರ್ಯ ತಂಡದ ಸ್ವಯಂಸೇವಕರು ಮರವನ್ನು ತೆರವುಗೊಳಿಸಿ ಮೆಸ್ಕಾಂ ಇಲಾಖೆಗೆ ಸಹಕರಿಸಿ ವಿದ್ಯುತ್ ಪೂರೈಕೆಗೆ ಸಹಕರಿಸಿದರು. ಕಾರ್ಯಾಚರಣೆಯಲ್ಲಿ ಕಳೆಂಜ ವಲಯದ ಸಂಯೋಜಕ ಗಿರೀಶ್, ಸದಸ್ಯರಾದ

ಮಂಗಳೂರು: ತಾಲ್ಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ

ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಾವೂರು ಇದರ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಮಂಗಲಾ ರಾವ್ ವಹಿಸಿ ಮಾತನಾಡಿ, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದಲ್ಲಿ ಅಂಗನವಾಡಿ ಕೇಂದ್ರದ ಪ್ರಾಮುಖ್ಯತೆಯ ಬಗ್ಗೆ

ನಿಟ್ಟೆ ವಿವಿಯಿಂದ ಡಬ್ಲ್ಯುಎಫ್‌ಎಂಇ ಅಧ್ಯಕ್ಷರಿಗೆ ಸನ್ಮಾನ

ಮಂಗಳೂರು – ಅಮೆರಿಕದ ವಿಶ್ವ ವೈದ್ಯಕೀಯ ಶಿಕ್ಷಣ ಒಕ್ಕೂಟದ (ಡಬ್ಲ್ಯುಎಫ್‌ಎಂಇ) ಅಧ್ಯಕ್ಷ ಪ್ರೊ.ರಿಕಾರ್ಡೊ ಲಿಯಾನ್-ಬೋರ್ಕ್ವೆಜ್ ಅವರನ್ನು ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ವತಿಯಿಂದ ಸನ್ಮಾನಿಸಲಾಯಿತು. ಪ್ರೊ.ರಿಕಾರ್ಡೊ ಲಿಯಾನ್-ಬೋರ್ಕ್ವೆಜ್ ಅವರನ್ನು ಜಾಗತಿಕ ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿರುವ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಪ್ರೊ. ರಿಕಾರ್ಡೊ

ಮಂಗಳೂರು: ಶಿವಮೊಗ್ಗದಲ್ಲಿ ನಡೆದ ದಾಳಿ ಪ್ರಕರಣಕ್ಕೆ ನಳಿನ್ ಕುಮಾರ್ ಕಟೀಲ್ ಖಂಡನೆ

ಶಿವಮೊಗ್ಗದಲ್ಲಿ ಮೀಲಾದ್ ಮೆರವಣಿಗೆ ಹೆಸರಿನಲ್ಲಿ ಹಿಂದೂ ಧರ್ಮೀಯರ ಅಂಗಡಿಗಳ, ಮನೆಗಳಿಗೆ ದಾಳಿ ನಡೆದಿದ್ದು, ಇದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ವಿಜಯೋತ್ಸವದ ಮೆರವಣಿಗೆಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿದ್ದು, ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿತ್ತು. ಆ ಸಂದರ್ಭ ಯಾವುದೇ ರೀತಿಯ

ಯುವರಾಜ ಜೈನ್ ಗೆ ಗ್ಲೋಬಲ್ ಎಂಬಾಸಿಡೆರ್ ಆಫ್ ಎಜುಕೇಶನ್ ಎಕ್ಸಲೆನ್ಸ್ ಪ್ರಶಸ್ತಿ

ಮೂಡುಬಿದಿರೆ : “ಅಂತಾರಾಷ್ಟ್ರೀಯ ಎಜುಕೇಶನ್ ಎಂಡ್ ಮ್ಯಾನೇಜ್ಮೆಂಟ್ ಸಂಸ್ಥೆ”ಕೊಡಮಾಡುವ ಪ್ರತಿಷ್ಠಿತ “ಗ್ಲೋಬಲ್ ಎಂಬಾಸಿಡೆರ್ ಆಫ್ ಎಜುಕೇಶನ್ ಎಕ್ಸಲೆನ್ಸ್ ಪ್ರಶಸ್ತಿ ಯನ್ನು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಇವರಿಗೆ ನೀಡಿ ಗೌರವಿಸಿತು. ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ಕಳೆದ ಮೂರು ದಶಕಗಳಿಂದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಮೂಲಕ ಗುರುಕುಲ ಮಾದರಿಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ

ಭಾವನೆಯ ಬಂಧದಿಂದ ಧರ್ಮ ಬೆಳೆಸೋಣ : ಕೊಂಡೆವೂರು ಶ್ರೀಗಳು

ದಿ.28.09.2023 ಗುರುವಾರ ಕೊಂಡೆವೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 20 ನೇ ಚಾತುರ್ಮಾಸ್ಯದ ಮಂಗಲೋತ್ಸವ ತದಂಗವಾಗಿ ನಡೆದ 48 ಗಂಟೆಗಳ ಅಖಂಡ ಭಜನೆಯ ಮಂಗಲ ಕಾರ್ಯಕ್ರಮಗಳು ವಿಜೃಂಭಣೆಯಿAದ ನಡೆದವು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳವರು ಆಶೀರ್ವಚನಗೈಯುತ್ತಾ “ ಮಠದ ಬೆಳವಣಿಗೆಗೆ ಭಕ್ತಿ,ಜೊತೆಗೆ ಭಾವನೆಗಳ ಹೃದಯ ಬಂಧ ಕಾರಣ. ಹೆತ್ತ ಮಾತೆಯಿಂದ ಅನೇಕ ಸಜ್ಜನ ಬಂಧುಗಳ ಭಾವನಾತ್ಮಕ ಮತ್ತು ಸರ್ವ ರೀತಿಯ ನೆರವಿನಿಂದ ಅನೇಕ ಚಟುವಟಿಕೆಗಳು

ಪಡುಬಿದ್ರಿ: ಬೀಚ್‌ನಲ್ಲಿ ಸ್ವಚ್ಚತಾ ಪಕ್ವಾಡ ಅಭಿಯಾನ ಕಾರ್ಯಕ್ರಮ

ಪಡುಬಿದ್ರಿಯ ಮುಖ್ಯ ಬೀಚ್‌ನಲ್ಲಿ ವಿಶ್ರುದ್ ಕೋಸ್ಟಲ್ ಡೆವಲಪರ್ಸ್ ವತಿಯಿಂದ  ಸ್ವಚ್ಚತಾ ಪಕ್ವಾಡ್ ಅಭಿಯಾನ ಕಾರ್ಯಕ್ರಮ ನಡೆಯಿತು. ಪಡುಬಿದ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಸಿ.ಎಸ್.ಬಿ ಸಿಬ್ಬಂದಿಗಳು ಸಹಿತ ಸಾರ್ವಜನಿಕರ ಸಹಕಾರದಿಂದ ಕಾರ್ಯಕ್ರಮ ಉತ್ತಮವಾಗಿ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕ ಕುಮಾರ ಪಿ.ಯು., ಸ್ವಚ್ಚತೆ ಎಂಬುದು ನಮ್ಮೆಲ್ಲಾರ ಜವಾಬ್ದಾರಿ,

ಮಂಗಳೂರು: ಬಿಎನ್‍ಐ ಮಂಗಳೂರು ಬಿಗ್ ಬ್ರ್ಯಾಂಡ್ಸ್ ಎಕ್ಸ್ ಪೋ – 2023ಕ್ಕೆ ಚಾಲನೆ

ಬಿಎನ್‍ಐ ಮಂಗಳೂರು ವತಿಯಿಂದ ಆಯೋಜಿಸಲಾಗಿರುವ ಬಿಗ್ ಬ್ರ್ಯಾಂಡ್ ಎಕ್ಸ್‍ಪೋ-2023 ಕ್ಕೆ ನಗರದ ಟಿಎಂಎಪೈ ಕನ್ವೆನ್ಷನ್ ಸೆಂಟರ್‍ನಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಬಿಎನ್‍ಐ ಮಂಗಳೂರು ಬಿಸ್‍ನೆಸ್ ನೆಟ್ವರ್ಕ್‍ನ ಒಂದು ಭಾಗವಾಗಿದೆ. ಇದು ವಿಶ್ವದಾದ್ಯಂತ 79 ದೇಶಗಳಲ್ಲಿ 3.11 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಉದ್ಯಮಿಗಳಿಗೆ ನೆಚ್ಚಿನ ವ್ಯಾಪಾರ ಜಾಲವಾಗಿದೆ. ಮಂಗಳೂರಿನ ಆಯ್ದ ವ್ಯವಹಾರಗಳಿಗೆ