Home Posts tagged V4News (Page 373)

ಬೈಂದೂರು: ಪ್ರಧಾನಿ ಮೋದಿ ಹುಟ್ಟಿಹಬ್ಬದ ಪ್ರಯುಕ್ತ ಬಿಜೆಪಿಯಿಂದ ವಿವಿಧ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನದ ಪ್ರಯುಕ್ತ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬಿಜೆಪಿ ಬೈಂದೂರು ಮಂಡಲ ವತಿಯಿಂದ ದೇಶದಾದ್ಯಂತ ನಡೆಯುತ್ತಿರುವ ಸೇವಾ ಪಾಕ್ಷಿಕ ದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಬೈಂದೂರಿನ ಅಂಬಿಕಾ ಇಂಟರ್ನ್ಯಾಷನಲ್ ಹೋಟೆಲ್ ನ ಶಾರದಾ

ಕುಂದಾಪುರ|| ಗೋಪಾಡಿ ಅಂಬೇಡ್ಕರ್ ಭವನ ನಿರ್ಮಾಣದ ತನಿಖೆಯಾಗಲಿ: ಗೋಪಾಡಿ ಗ್ರಾಮಸಭೆಯಲ್ಲಿ ದಲಿತ ಮುಖಂಡರ ಆಗ್ರಹ

ಕುಂದಾಪುರ: ದಲಿತ ಸಮುದಾಯದ ಮನೆಗಳೇ ಇಲ್ಲದ ಇಕ್ಕಟ್ಟಿನ ಸ್ಥಳದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗಿದ್ದು, ದಲಿತರು ಭವನವನ್ನು ಬಳಸಬಾರದು ಎನ್ನುವ ದೃಷ್ಠಿಯಲ್ಲಿ ನಿರ್ಮಿಸಿದಂತಿದೆ. ಅಂಬೇಡ್ಕರ್ ಭವನ ನಿರ್ಮಾಣದ ಹಿಂದಿನ ಉದ್ದೇಶವೇನು? ಯಾರ ಲಾಭಕ್ಕಾಗಿ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ ಎನ್ನುವುದರ ಕುರಿತು ಸಮಗ್ರ ತನಿಖೆ ನಡೆಯಲಿ ಎಂದು ದಸಂಸ ಮುಖಂಡ ರಾಜು ಬೆಟ್ಟಿನಮನೆ ಆಗ್ರಹಿಸಿದ್ದಾರೆ. ಗೋಪಾಡಿ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಜರುಗಿದ ಗ್ರಾಮ ಸಭೆಯಲ್ಲಿ ಮಾತನಾಡಿದ

ಮಂಗಳೂರು: ಯೆನೆಪೊಯದಿಂದ ಶ್ರೀಮತಿ ಶೈಸಿಲ್ ಮ್ಯಾಥ್ಯೂ ಅವರಿಗೆ ಪಿಎಚ್‌ಡಿ ಪ್ರದಾನ

ಕಮ್ಯುನಿಟಿ ಹೆಲ್ತ್ ನರ್ಸಿಂಗ್ ವಿಭಾಗದ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‌ನ ಸಹಾಯಕ ಪ್ರಾಧ್ಯಾಪಕರಾದ ಶೈಸಿಲ್ ಮ್ಯಾಥ್ಯೂ ಇವರು “ಜೀವನಶೈಲಿ ಅಭ್ಯಾಸಗಳು, ಹದಿಹರೆಯದವರ ಬಾಡಿ ಮಾಸ್ ಇಂಡೆಕ್ಸ್ನಿಂದ ಅಧಿಕ ತೂಕ ಮತ್ತು ಸ್ಥೂಲಕಾಯದ ಬಗ್ಗೆ ಪೋಷಕರನ್ನು ಒಳಗೊಂಡಿರುವ ಬಹು-ಘಟಕ ಮಧ್ಯಸ್ಥಿಕೆ ಕಾರ್ಯಕ್ರಮ” ಎಂಬುದರ ಬಗ್ಗೆ ತಮ್ಮ ತನ್ನ ಪಿಎಚ್‌ಡಿ ಪ್ರಬಂಧವನ್ನು ಮಂಗಳವಾರ, ಸೆಪ್ಟೆಂಬರ್ 12, 2023 ರಂದು ಮಂಡಿಸಿದ್ದರು. ಇದು ಜೀವನಶೈಲಿಯ ಅಭ್ಯಾಸಗಳ

ದುಬಾಯಿ: ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕಣ್ತುಂಬಿಕೊಂಡ ಭಕ್ತ ಸಮೂಹ

ದುಬಾಯಿಯಲ್ಲಿ ಗೀಸೈಸ್‌ನ ಮದಿನ ಹೈಪರ್ ಮಾರುಕಟ್ಟೆ ಸಮೀಪದಲ್ಲಿರುವ ಆಕ್ಸ್‌ಫರ್ಡ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ಗಂಟೆ 9.೦೦ ಕ್ಕೆ ಪೂಜಾ ಸಂಕಲ್ಪದಿಂದ ಆರಂಭವಾಗಿ ಸಂಜೆ 5.೦೦ ಗಂಟೆಗೆ ತನಕ, ಭಜನೆ, ವಿಷ್ಣು ಸಹಸ್ರನಾಮ, ಶ್ರೀಕೃಷ್ಣ ವೇಷ ಸ್ಪರ್ಧೆ, ಜಾನಪದ ಆಟೋಟಗಳು, ಮುಂತಾದ ಅನೇಕ ವೈಶಿಷ್ಯಗಳ ಜೊತೆ ಮಹಾಮಂಗಳಾರತಿ, ವೈಭವದ ವಿಠಲ ಪಿಂಡಿ, ಮೊಸುರುಕುಡಿಕೆ, ಮೆರವಣಿಗೆ ಹೀಗೆ

ಉಪ್ಪಳ: ಕಲಾವಿದ, ನಿರ್ದೇಶಕ, ಅಧ್ಯಾಪಕ ನವೀನ್ ಚಂದ್ರ ಐಲ ನಿಧನ

ಉಪ್ಪಳ: ಕಲಾವಿದ, ನಿರ್ದೇಶಕ, ಪ್ರಸ್ತುತ ಅಧ್ಯಾಪಕರಾಗಿರುವ ಮೂಲತಃ ಉಪ್ಪಳ ಐಲ ನಿವಾಸಿಯೂ ಇದೀಗ ಮಂಗಳೂರು ಬಿಕರ್ಣಕಟ್ಟೆಯಲ್ಲಿ ವಾಸಿಸುತಿದ್ದ ನವೀನ್ ಚಂದ್ರ ಐಲ (54) ಹೃದಯಾಘಾತಗೊಂಡು ರಾತ್ರಿ ಸ್ವ-ಗೃಹದಲ್ಲಿ ನಿಧನರಾದರು. ಉಪ್ಪಳ, ಐಲ ಬೋವಿ ಶಾಲಾ ಬಳಿಯ ಶ್ರೀ ಗುತ್ಯಮ್ಮ ಭಗವತೀ ಕ್ಷೇತ್ರ ಸಮೀಪ ನಿವಾಸಿಯಾಗಿರುವ ದಿ.ಕಣ್ಣ ಪೂಜಾರಿ – ದಿ. ಲಕ್ಷ್ಮಿ ದಂಪತಿ ಪುತ್ರರಾಗಿರುವ ನವೀನ್ ಚಂದ್ರ ಐಲರವರು ಮಂಗಳೂರಿನ ಬಿಕರ್ಣಕಟ್ಟೆಯಲ್ಲಿ ಕಳೆದ 9 ವರ್ಷಗಳಿಂದ

ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯಿಂದ ವಾಗ್ದಾನ ಹಸ್ತಾಂತರ

ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ(ರಿ) ಮಂಜೇಶ್ವರ ಇದರ 75ನೇ ಯೋಜನೆಯ ವಾಗ್ದಾನ ಹಸ್ತಾಂತರವು ಫಲಾನುಭವಿಗಳ ಮನೆಯಲ್ಲಿ ಜರಗಿತು.ಕಳೆದ 8 ತಿಂಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ತಲಪಾಡಿ ನಿವಾಸಿ ಸುಜಾತಾ ಶೆಟ್ಟಿ ಇವರಿಗೆ 75ನೇ ಯೋಜನೆಯ ವಾಗ್ದಾನವನ್ನು ನ್ಯಾಯವಾದಿ ನವೀನ್ ರಾಜ್ ಹಸ್ತಾಂತರ ಮಾಡಿದರು. ಈ ವೇಳೆ ಪ್ರಸಾದ್ ಶೆಟ್ಟಿ ಭಗವತಿ, ನವೀನ್ ಬೇಕುರು, ಉದಯ ಕೊಡೆ಼, ಶರತ್ ಅರಿಮಲೆ, ಸುಕೇಶ್ ಬೆಜ್ಜ, ಅಂಕಿತ್ ಪಾವೂರ್, ಉದಯ ಶಾಂತಿಗುರಿ, ಪ್ರದೀಪ್

ಕುಂದಾಪುರ: ಚಟುವಟಿಕೆಗಳಿಲ್ಲದೇ ಪಾಳು ಬಿದ್ದಿದೆ ಗೋಪಾಡಿ ಅಂಬೇಡ್ಕರ್ ಭವನ: ತನಿಖೆಗಾಗಿ ದಸಂಸ ಆಗ್ರಹ

ದಲಿತರಿಗಾಗಿಯೇ ಆಳುವ ಸರ್ಕಾರಗಳು ತರುತ್ತಿರುವ ಹೊಸ-ಹೊಸ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ ಎಂಬ ಆರೋಪಗಳು ಆಗಾಗೆ ಕೇಳಿ ಬರುತ್ತಲೇ ಇವೆ. ಗೋಪಾಡಿಯಲ್ಲಿ ಕಳೆದ ಆರು ವರ್ಷಗಳ ಹಿಂದೆ ನಿರ್ಮಾಣಗೊಂಡ ಅಂಬೇಡ್ಕರ್ ಭವನ ಈ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಈ ಕುರಿತಾದ ಸ್ಪೆಶಲ್ ರಿಪೋರ್ಟ್ ನೋಡಿ. ದಲಿತರ ಸಬಲೀಕರಣಕ್ಕಾಗಿ ಸರ್ಕಾರ ನಾನಾ ಯೋಜನೆಗಳನ್ನು ಹೊರತರುತ್ತಿದೆ. ಅತ್ಯಂತ ತೀರ ಹಿಂದುಳಿದ ದಲಿತ ಸಮಾಜದ ಕಾರ್ಯ ಚಟುವಟಿಕೆಗಳಿಗೆ ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ

ಮಂಗಳೂರು: ಮಾನಸ ವಾಟರ್ ಪಾರ್ಕ್‍ನಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಸ್ಕೈ ಸೈಕ್ಲಿಂಗ್

ಮಂಗಳೂರಿನ ವಾಮಂಜೂರಿನಲ್ಲಿರುವ ಮಾನಸ ವಾಟರ್ ಪಾರ್ಕ್ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿತರನ್ನಾಗಿಸುತ್ತಿದೆ. ಇದೀಗ ಹೊಸದಾಗಿ ಸ್ಕೈ ಸೈಕ್ಲಿಂಗ್‍ನ್ನು ಪರಿಚಯಿಸುತ್ತಿದ್ದಾರೆ. ಈಗಾಗಲೇ ಮಾನಸ ವಾಟರ್ ಪಾರ್ಕ್‍ನಲ್ಲಿ ವಿವಿಧ ಪ್ರಕಾರಗಳ ನೀರಾಟದ ಮೂಲಕ ಜನರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ವಾಟರ್ ರೈಡ್, ಮ್ಯೂಸಿಕಲ್ ಫೌಂಟೇನ್, ರೈನ್ ಡ್ಯಾನ್ಸ್, ಸೇರಿದಂತೆ ವಿವಿಧ ಪ್ರಕಾರಗಳ ನೀರಾಟಗಳು ಜನಮನಸೂರೆಗೊಂಡಿದೆ. ಇದೀಗ ಹೊಸದಾಗಿ ಸ್ಕೈ

ಮೂಲ್ಕಿ: ಬೈಕ್-ಕಾರು ನಡುವೆ ಅಪಘಾತ ಯುವತಿ ಮೃತ್ಯು

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು ಹೊರ ವಲಯದ ಮೂಲ್ಕಿ “ವಿಜಯ ಸನ್ನಿಧಿ” ಜಂಕ್ಷನ್ ಬಳಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹ ಸವಾರೆ ಕೊನೆಯುಸಿರೆಳೆದು, ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಮೃತಪಟ್ಟವರನ್ನ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಬಾಕ್ರಬೈಲು ಕೊರುಂಗ್ ಮನೆ ನಿವಾಸಿ ಪ್ರಗತಿಪರ ಕೃಷಿಕರೂ, ಪಾತೂರಿನಲ್ಲಿ ಅಕ್ಕಿಯ ಮಿಲ್ ಮಾಲಕರಾಗಿರುವ, ಜಯರಾಮ ಶೆಟ್ಟಿ ಮತ್ತು ಸುಭಿತಾ ದಂಪತಿಯ

ಮೂಡುಬಿದಿರೆ: ನೀರುಡೆ ನಿವಾಸಿ ಓಲ್ವಿನ್ ಪಿಂಟೋ ನಾಪತ್ತೆ

ಮೂಡುಬಿದಿರೆ: ತಾಲೂಕಿನ ನಿಡ್ಡೋಡಿ ಗ್ರಾ. ಪಂ ವ್ಯಾಪ್ತಿಯ ನೀರುಡೆ ನಿವಾಸಿ ಓಲ್ವಿನ್ ಪಿಂಟೋ(59) ಅವರು ಸೆ.8ರಿಂದ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 3 ವರ್ಷಗಳ ಹಿಂದೆ ಮಂಗಳೂರು ತಲಪಾಡಿಯಲ್ಲಿ ಹಾಸ್ಟೇಲ್ ಒಂದರಲ್ಲಿ ಕೆಲಸ ಮಾಡುಕೊಂಡಿದ್ದವರು, ಇತ್ತೀಜೆಗೆ ಮನೆಗೆ ಬಂದು ಕೃಷಿ ಕೆಲಸ ಮಾಡುತ್ತಿದ್ದರು. ಸೆ.8 ರಂದು ಸಂಜೆ 4.30 ಕ್ಕೆ ಮನೆಯಲ್ಲಿ ತನ್ನ ಮೊಬೈಲ್ ಬಿಟ್ಟು ಮನೆಯಿಂದ ಹೊರಗೆ ಹೋದವರು ಮತ್ತೆ ಮರಳಿ ಮನೆಗೆ ಬಾರದೇ