ಉಪ್ಪಳ: ಕಲಾವಿದ, ನಿರ್ದೇಶಕ, ಅಧ್ಯಾಪಕ ನವೀನ್ ಚಂದ್ರ ಐಲ ನಿಧನ

ಉಪ್ಪಳ: ಕಲಾವಿದ, ನಿರ್ದೇಶಕ, ಪ್ರಸ್ತುತ ಅಧ್ಯಾಪಕರಾಗಿರುವ ಮೂಲತಃ ಉಪ್ಪಳ ಐಲ ನಿವಾಸಿಯೂ ಇದೀಗ ಮಂಗಳೂರು ಬಿಕರ್ಣಕಟ್ಟೆಯಲ್ಲಿ ವಾಸಿಸುತಿದ್ದ ನವೀನ್ ಚಂದ್ರ ಐಲ (54) ಹೃದಯಾಘಾತಗೊಂಡು ರಾತ್ರಿ ಸ್ವ-ಗೃಹದಲ್ಲಿ ನಿಧನರಾದರು. ಉಪ್ಪಳ, ಐಲ ಬೋವಿ ಶಾಲಾ ಬಳಿಯ ಶ್ರೀ ಗುತ್ಯಮ್ಮ ಭಗವತೀ ಕ್ಷೇತ್ರ ಸಮೀಪ ನಿವಾಸಿಯಾಗಿರುವ ದಿ.ಕಣ್ಣ ಪೂಜಾರಿ – ದಿ. ಲಕ್ಷ್ಮಿ ದಂಪತಿ ಪುತ್ರರಾಗಿರುವ ನವೀನ್ ಚಂದ್ರ ಐಲರವರು ಮಂಗಳೂರಿನ ಬಿಕರ್ಣಕಟ್ಟೆಯಲ್ಲಿ ಕಳೆದ 9 ವರ್ಷಗಳಿಂದ ವಾಸಿಸುತ್ತಿದ್ದಾರೆ. ಎಡಪದವು ಸ್ವಾಮಿ ವಿವೇಕಾನಂದ ಪಿ.ಯು ಕಾಲೇಜಿನಲ್ಲಿ ಹಿಂದಿ ಅಧ್ಯಾಪಕರಾಗಿ ಕಳೆದ 28 ವರ್ಷಗಳಿಂದ ಸೇವೆಯನ್ನ ಸಲ್ಲಿಸುತ್ತಿರುವ ಇವರು ಈ ಮೊದಲು ಐಲದಲ್ಲಿ ವಾಸಿಸುತ್ತಿರುವಾಗ ಉಪ್ಪಳ ರಚನಾ ಸಾಂಸ್ಕೃತಿಕ ಕಲಾ ಸಂಸ್ಥೆಯಲ್ಲಿ ಹಿರಿಯ ಸದಸ್ಯರಾಗಿ, ಸಂಸ್ಥೆಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅಲ್ಲದೇ ಇವರು ನಿರ್ದೇಶಿಸಿ, ವಿಲನ್ ಪಾತ್ರದಲ್ಲಿ ಅಭಿಯಿಸಿದ ’ಕಡಿರ ಮಗೆ” ಮತ್ತು “ಭೂತದ ಇಲ್ಲ ” ನಾಟಕವು ಅಂದಿನ ಕಾಲದಲ್ಲಿ ಭಾರೀ ಹಿಟ್ ಪಡೆದಿತ್ತು. ಬಳಿಕ ಹಲವು ನಾಟಕಗಳಲ್ಲಿ ವಿಲನ್ ಪಾತ್ರದಲ್ಲಿಯೇ ಪಾತ್ರ ವಹಿಸುತ್ತಿರುವ ನವೀನ್ ಚಂದ್ರರು ಜನ ಮೆಚ್ಚುಗೆ ಪಡೆದಿದ್ದರು. ಐಲ ಶ್ರೀ ಭಗವತಿ ಆರ್ಟ್ಸ್ ಕ್ಲಬ್ಬಿನ ಸದಸ್ಯರಾಗಿರುವ ನವೀನ್ ಚಂದ್ರರವರು ಪತ್ನಿ: ವಿನಯ (ಕೇರಳ ಸಮಾಜ ಶಾಲಾ ಅಧ್ಯಾಪಕಿ), ಮಕ್ಕಳಾದ ತನಿಷ್, ಮನಿತ್ ಹಾಗೂ ಮೂವರು ಸಹೋದರರು ಹಾಗೂ ಒರ್ವೆ ಸಹೋದರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಇಂದು ಸಂಜೆ 4:00ಗೆ ಮಂಗಳೂರಿನಲ್ಲಿ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ ಮೃತರ ನಿಧನಕ್ಕೆ ರಚನಾ ಸಾಂಸ್ಕೃತಿಕ ಸಂಸ್ಥೆ (ರಿ.) ಉಪ್ಪಳ, ಶ್ರೀ ಭಗವತಿ ಆರ್ಟ್ಸ್ ಕ್ಲಬ್ (ರಿ.) ಐಲ ಗಾಢವಾದ ಸಂತಾಪ ಸೂಚಿಸಿದ್ದಾರೆ.

Related Posts

Leave a Reply

Your email address will not be published.