ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯಿಂದ ವಾಗ್ದಾನ ಹಸ್ತಾಂತರ
ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ(ರಿ) ಮಂಜೇಶ್ವರ ಇದರ 75ನೇ ಯೋಜನೆಯ ವಾಗ್ದಾನ ಹಸ್ತಾಂತರವು ಫಲಾನುಭವಿಗಳ ಮನೆಯಲ್ಲಿ ಜರಗಿತು.
ಕಳೆದ 8 ತಿಂಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ತಲಪಾಡಿ ನಿವಾಸಿ ಸುಜಾತಾ ಶೆಟ್ಟಿ ಇವರಿಗೆ 75ನೇ ಯೋಜನೆಯ ವಾಗ್ದಾನವನ್ನು ನ್ಯಾಯವಾದಿ ನವೀನ್ ರಾಜ್ ಹಸ್ತಾಂತರ ಮಾಡಿದರು. ಈ ವೇಳೆ ಪ್ರಸಾದ್ ಶೆಟ್ಟಿ ಭಗವತಿ, ನವೀನ್ ಬೇಕುರು, ಉದಯ ಕೊಡೆ಼, ಶರತ್ ಅರಿಮಲೆ, ಸುಕೇಶ್ ಬೆಜ್ಜ, ಅಂಕಿತ್ ಪಾವೂರ್, ಉದಯ ಶಾಂತಿಗುರಿ, ಪ್ರದೀಪ್ ಮೊರತ್ತನೆ ಉಪಸ್ಥಿತರಿದ್ದರು