Home Posts tagged V4News (Page 378)

ನನ್ನಜ್ಜ ಕಣ್ಣಪ್ಪ ನನ್ನ ಬರವಣಿಗೆಗೆ ಪ್ರಥಮ ಪ್ರೇರಣೆ – ಶ್ಯಾಮಲಾ ಮಾಧವ

“ನಾವೆಲ್ಲರೂ ಕಾನಾಟಿ (ಅರ್ಥಾತ್ ದಪ್ಪ ಕನ್ನಡಕ ಧರಿಸುವ) ಅಜ್ಜ ಎಂದೇ ಕರೆಯುತಿದ್ದ ನಮ್ಮಜ್ಜ ಲೂವಿಸ್ ಕಣ್ಣಪ್ಪನವರಿಂದಲೇ ನನ್ನ ಬರವಣಿಗೆಗೆ ಮೊದಲ ಪ್ರೇರಣೆ ದೊರೆಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್‌ವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಮ್.ಎ. ಮತ್ತು ಎಲ್. ಟಿ. ಪದವಿ ಪಡೆದಿದ್ದ ಲೂವಿಸ್ ಕಣ್ಣಪ್ಪನವರು ಮಂಗಳೂರು ಹಂಪನಕಟ್ಟೆಯ ಸರಕಾರಿ

ಉಡುಪಿ: ಮಧುರಂ ರೆಸ್ಟೋರೆಂಟ್‍ನಲ್ಲಿ ಡಿನ್ನರ್ ಬಫೆಟ್

ಉಡುಪಿಯ ಮಧುರಂ ರೆಸ್ಟೋರೆಂಟ್‍ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಡಿನ್ನರ್ ಬಫೆಟ್ ಆಯೋಜಿಸಿದ್ದರು.ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಉಡುಪಿಯ ಪ್ರತಿಷ್ಠಿತ ಹೋಟೆಲ್‍ಗಳಲ್ಲಿ ಒಂದಾದ ಮಧುರಂ ರೆಸ್ಟೋರೆಂಟ್‍ನಲ್ಲಿ ಡಿನ್ನರ್ ಬಫೆಟ್ ಆಯೋಜಿಸಿದ್ದಾರೆ. ವೆಲ್‍ಕಮ್ ಡ್ರಿಂಕ್ಸ್‍ನಲ್ಲಿ ಪಂಚಾಮೃತ, ಸ್ಟಾರ್ಟರ್ಸ್‍ನಲ್ಲಿ ಬಿಂದಿ ಜೈಪುರ್, ಜೋದ್‍ಪುರಿ ಮಿರ್ಚಿ ವಡ, ಪೊಟೆಟೊ

ಉಡುಪಿ: ಕಾನೂನು ಹೋರಾಟಕ್ಕಿಂತ ರಾಜಿಸಂಧಾನ ಸವಾಲಿನ ಕೆಲಸ-ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್

ಉಡುಪಿ: ಕಾನೂನು ಹೋರಾಟ ನಡೆಸಬಹುದು. ಅದು ವಕೀಲರಿಗೂ ಕಕ್ಷಿದಾರರಿಗೂ ಸುಲಭ. ಆದರೆ ರಾಜಿ ಸಂಧಾನ ಕಷ್ಟ ಮತ್ತು ಸವಾಲಿನ ಕೆಲಸವಾಗಿದೆ. ಅಂತಹ ಸವಾಲಿನ ಕೆಲಸವನ್ನು ಉಡುಪಿ ನ್ಯಾಯಾಲಯ ಮೆಟ್ಟಿನಿಂತು, ಸಹಸ್ರಾರು ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಹೇಳಿದರು. ಅವರು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಮೂರನೇ ಲೋಕ ಅದಾಲತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಲೋಕ ಅದಾಲತ್

ಮಂಗಳೂರು: ಡಾ.ಶಂಸುಲ್ ಇಸ್ಲಾಂ ಉಪನ್ಯಾಸಕ್ಕೆ ವಿರೋಧ-ಎಬಿವಿಪಿ ಕಾರ್ಯಕರ್ತರ ಬಂಧನ

ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಬಿ.ವಿ ಕಕ್ಕಿಲ್ಲಾಯ ಪ್ರತಿಷ್ಠಾನ ಆಯೋಜಿಸಿರುವ ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಶಂಸುಲ್ ಇಸ್ಲಾಂ ಅವರ ಉಪನ್ಯಾಸ ಕಾರ್ಯಕ್ರಮವನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಹೊರತಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಕಾರ್ಯಕ್ರಮದ ವಿರುದ್ಧ ಘೋಷಣೆ ಕೂಗಿದ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜೆಪ್ಪು : ನಾಲ್ಕು ವಾಹನಗಳ ಸರಣಿ ಅಪಘಾತ – ಪ್ರಯಾಣಿಕರು ಪಾರು

ಉಳ್ಳಾಲ: ಕಾರು ಚಾಲಕನೊರ್ವ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಇತರ ಮೂರು ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದ ಘಟನೆ ರಾ.ಹೆ. 66ರ ಜೆಪ್ಪುವಿನ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಮೀಪದಲ್ಲಿ ನಡೆದಿದ್ದು ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸಿಯಾಝ್ ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿದ್ದ ಲಾರಿ ಸಿಯಾಝ್ ಕಾರು

ಮಂಗಳೂರು: ಸ್ಟಾರ್ ಸುವರ್ಣದಲ್ಲಿ “ಸರ್ಕಸ್” ತುಳು ಚಿತ್ರದ ಪ್ರಸಾರ

ತುಳು ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಬರೆದ ಸರ್ಕಸ್ ಸಿನಿಮಾ ಸೆಪ್ಟಂಬರ್ 10ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರಗೊಳ್ಳಲಿದೆ. ಕೋಸ್ಟಲ್‌ವುಡ್‌ನಲ್ಲಿ ಸಿನಿ ಪ್ರೇಕ್ಷಕರನ್ನು ಮೋಡಿ ಮಾಡಿದ ಸಿನಿಮಾ ಎಂದರೆ ಅದು ಸರ್ಕಸ್ ಸಿನಿಮಾ. ಬಿಗ್‌ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಅಭಿನಯದ ತುಳು ಸಿನಿಮಾವಾಗಿದ್ದು, ಯಶಸ್ವಿಯನ್ನು ಕಂಡಿದೆ. ಇದೀಗ ಅದೇ ಸಿನಿಮಾ ಟೀವಿಯಲ್ಲೂ ಪ್ರಸಾರ ಆಗುತ್ತಿದೆ. ಈ ಚಿತ್ರದ ಹಕ್ಕನ್ನು ಸ್ಟಾರ್ ಸುವರ್ಣ ಚಾನೆಲ್

ಕಡಬ: ಪಂಚಾಯತ್ ಸಂಪರ್ಕ ರಸ್ತೆ ಬಂದ್ ಮಾಡಿ ದಿಗ್ಬಂಧನ: ತಹಶೀಲ್ದಾರರಿಂದ ತೆರವು

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಬದನೆ ಎಂಬಲ್ಲಿ ಪಂಚಾಯತ್ ರಸ್ತೆಗೆ ಸಂಪರ್ಕಿಸುವ ರಸ್ತೆಯನ್ನು ವೆಂಕಪ್ಪ ಪೂಜಾರಿ ಮತ್ತು ರೂಪೇಶ್ ಕುಮಾರ್ ಅವರು ಬಂದ್ ಮಾಡಿರುವ ಬಗ್ಗೆ ಇಚ್ಲಂಪಾಡಿ ಗ್ರಾಮದ ಬದನೆ ನಿವಾಸಿ ಶ್ರೀನಿವಾಸ್ ಪೂಜಾರಿಯವರು, ಪುತ್ತೂರು ಸಹಾಯಕ ಆಯುಕ್ತರು, ಕಡಬ ತಹಶೀಲ್ದಾರರು, ಗ್ರಾಮ ಪಂಚಾಯತ್ ಹಾಗೂ ಪೋಲಿಸ್ ಇಲಾಖೆಗೆ ದೂರು ನೀಡಿದ್ದಾರೆ. ಕಡಬ ತಹಶೀಲ್ದಾರರಾದ ಪ್ರಭಾಕರ ಕಜುರೆ, ಕಂದಾಯ ನಿರೀಕ್ಷಕರಾದ ಪೃಥ್ವಿರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ

ಮೂಡುಬಿದಿರೆ: ಮೊಸರು ಕುಡಿಕೆ ಉತ್ಸವದಲ್ಲಿ ಗುಣಪಾಲ ಕಡಂಬರಿಗೆ “ಶ್ರೀ ಕೃಷ್ಣ ಪ್ರಶಸ್ತಿ” ಪ್ರದಾನ

ಮೂಡುಬಿದಿರೆ: ಮೂಡುಬಿದಿರೆಯಲ್ಲಿ ಕರ್ಮ ಜೀವನ ಆರಂಭಿಸಿ 50 ವರ್ಷ ತುಂಬಿರುವ ಈ ಸುಸಂದರ್ಭದಲ್ಲಿ ತನ್ನ ಅಧ್ಯಾಪನ, ಆಡಳಿತ, ಕಂಬಳ, ಕೃಷಿ, ಧಾರ್ಮಿಕ ಸೇವಾನುಭವವನ್ನು ಗುರುತಿಸಿ ನೀಡಿರುವ ಗೌರವವನ್ನು ಸಂತೃಪ್ತಿ, ಸಂತೋಷದಿಂದ ಸ್ವೀಕರಿಸಿದ್ದೇನೆ, ಎಲ್ಲ ರಂಗಗಳಲ್ಲೂ ಪ್ರಾಮಾಣಿಕ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟವರೆಲ್ಲರನ್ನೂ ಕೃತಜ್ಞತಪೂರ್ವಕ ನೆನೆಯುತ್ತೇನೆ ಎಂದು ಜೈನ ಪ.ಪೂ. ಕಾಲೇಜಿನ ನಿವೃತ್ತ ಪ್ರಾಚಾರ್ಯ, ಕಂಬಳ ವಿದ್ವಾಂಸ ಕೆ. ಗುಣಪಾಲ ಕಡಂಬ ಹೇಳಿದರು.

ಜನಾರ್ದನ ಪೂಜಾರಿ ಅವರನ್ನು ಭೇಟಿಯಾದ ಸಚಿವ ಬೋಸರಾಜು

ಸಣ್ಣ ನೀರಾವರಿ ಸಚಿವ ಭೋಸರಾಜು ಅವರು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮನೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ಹಿರಿಯ ಮುಖಂಡ ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುವುದಾಗಿ ಎನ್.ಎಸ್. ಬೋಸರಾಜು ತಿಳಿಸಿದರು.

ಮಂಗಳೂರು: ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ

ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವು ನಗರದ ಡಾ. ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾಸಕರಾದ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು. ತದ ಬಳಿಕ ಮಾತನಾಡಿ ಅವರು, ಮಕ್ಕಳಿಗೆ ಶಿಕ್ಷಣದ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸುವ ಕೆಲಸ ಸಾಕ್ಷರತೆಯ ಮೂಲಕ ನಡೆಯುತ್ತಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಡಯೆಟ್‍ನಾ ಪ್ರಾಂಶುಪಾಲಾರದ ರಾಜಲಕ್ಷ್ಮಿ, ಜನ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಶೀನ ಶೆಟ್ಟಿ, ವಯಸ್ಕರ ಶಿಕ್ಷಣಧಿಕಾರಿ