ಉಡುಪಿ: ಮಧುರಂ ರೆಸ್ಟೋರೆಂಟ್‍ನಲ್ಲಿ ಡಿನ್ನರ್ ಬಫೆಟ್
ಉಡುಪಿಯ ಮಧುರಂ ರೆಸ್ಟೋರೆಂಟ್‍ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಡಿನ್ನರ್ ಬಫೆಟ್ ಆಯೋಜಿಸಿದ್ದರು.
ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು,
ಉಡುಪಿಯ ಪ್ರತಿಷ್ಠಿತ ಹೋಟೆಲ್‍ಗಳಲ್ಲಿ ಒಂದಾದ ಮಧುರಂ ರೆಸ್ಟೋರೆಂಟ್‍ನಲ್ಲಿ ಡಿನ್ನರ್ ಬಫೆಟ್ ಆಯೋಜಿಸಿದ್ದಾರೆ. ವೆಲ್‍ಕಮ್ ಡ್ರಿಂಕ್ಸ್‍ನಲ್ಲಿ ಪಂಚಾಮೃತ, ಸ್ಟಾರ್ಟರ್ಸ್‍ನಲ್ಲಿ ಬಿಂದಿ ಜೈಪುರ್, ಜೋದ್‍ಪುರಿ ಮಿರ್ಚಿ ವಡ, ಪೊಟೆಟೊ ಚೀಸ್ ಬಲ್ಸ್, ಚಾಟ್ಸ್‍ನಲ್ಲಿ ದಹಿ ಬಲ್ಲಾ, ಮಸಾಲ ಪುರಿ, ಸೇವ್ ಪುರಿ, ಪಾಪ್ಡಿ ಚಾಟ್, ಮೈನ್ ಕೋರ್ಸ್‍ನಲ್ಲಿ ಗೋಪಾಲ್ ಕಲಾ, ಪನೀರ್ ಮಖಾನಿ, ಅಮೃತಸರಿ ಪಿಂಡಿ ಚೋಲೆ, ಗೋವಿಂದ ಗತ್ತಾ, ದಾಲ್ ತಡ್ಕಾ ಹಾಗೂ ವಿವಿಧ ರೀತಿಯ ಸಿಹಿ ತಿಂಡಿಗಳನ್ನು ಗ್ರಾಹಕರಿಗೆ ಉಣ ಬಡಿಸಿದ್ದಾರೆ.
ವಿವಿಧ ರೀತಿಯ ಖಾದ್ಯಗಳ ಜೊತೆಗೆ ಭಜನಾ ಕಾರ್ಯಕ್ರಮಗಳು ಗ್ರಾಹಕರನ್ನು ಸೆಳೆಯುವಂತಿತ್ತು.