ಬ್ರಹ್ಮಾವರ : ಉಡುಪಿ ಜಿಲ್ಲೆ ಬಾರ್ಕೂರು ಮೂಲದ ಸ್ವೀಝಲ್ ಫುರ್ಟಾಡೊ ಅವರು ಸೌತ ಅಮೇರಿಕಾ ಪೆರುವಿನಲ್ಲಿ ನಡೆದ ಮಿಸ್ ಟೀನ್ ಇಂಟರ್‍ನ್ಯಾಶನಲ್ ಸ್ಪರ್ಧೆಯಲ್ಲಿ ಮಿಸ್ ಟೀನ್ ಯೂನಿವರ್ಸಲ್ ಇಂಟರ್‍ನ್ಯಾಷನಲ್ ಪ್ರಿನ್ಸಸ್ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಸ್ವೀಜಲ್ ಅವರು ‘ಮಿಸ್ ಟೀನ್ ಯೂನಿವರ್ಸಲ್
ಉಳ್ಳಾಲ: ರಾ.ಹೆ 66ರ ಸಂಕೊಳಿಗೆ ಸಮೀಪ ತಡರಾತ್ರಿ ಬೈಕ್‍ಗೆ ಕಾರು ಢಿಕ್ಕಿ ಹೊಡೆದು ಪರಾರಿಯಾದ ಹಿಟ್ ಆಂಡ್ ರನ್ ಪ್ರಕರಣದ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಗಾಯಾಳು ಕೋಟೆಕಾರು ವೈದ್ಯನಾಥ ದೈವಸ್ಥಾನ ರಸ್ತೆ ನಿವಾಸಿ ತೇಜಸ್ ರಾಮ ಕುಲಾಲ್ (28) ಮೃತಪಟ್ಟಿದ್ದರು. ರಾ.ಹೆ 66ರ ಸಂಕೊಳಿಗೆ ಸಮೀಪ ತಡರಾತ್ರಿ ಬೈಕಿಗೆ ಪೆಟ್ರೋಲ್ ಹಾಕಿಸಲೆಂದು ಉಚ್ಚಿಲದ ಪೆಟ್ರೋಲ್ ಪಂಪ್ ಗೆ ತೆರಳುವಾಗ ಘಟನೆ ಸಂಭವಿಸಿತ್ತು. ಘಟನೆಯಿಂದ ಬೈಕ್ ಸವಾರ ಗಂಭೀರ
ಸಂಗೀತವು ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಪಠ್ಯದೊಂದಿಗೆ ಸಂಗೀತದಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯಲ್ಲಿ ಸುಧಾರಣೆ ಕಾಣಬಹುದಾಗಿದೆ. ಸಂಗೀತವನ್ನು ಸರಳವಾಗಿ ಆಲಿಸುವಾಗ ಉತ್ತಮ ನರ ಸಂಸ್ಕರಣೆಯನ್ನು ಕಾಣಬಹುದೆಂದು ಅಧ್ಯಯನ ಕಂಡು ಹಿಡಿದಿದೆ. ಸಂಗೀತದಲ್ಲಿ ತೊಡಗಿರುವ ಇತರ ಅಧ್ಯಯನಗಳು ಮಕ್ಕಳಲ್ಲಿ ಐಕ್ಯೂ ಪಾಯಿಂಟ್‌ಗಳ ಹೆಚ್ಚಳವನ್ನು ಕಂಡುಕೊಂಡಿದೆ. ಮಕ್ಕಳಲ್ಲಿ ಓದುವ ಗ್ರಹಿಕೆಯ ಸಾಮಾರ್ಥ್ಯವನ್ನು
ಮುಂಬೈ:ಸಿಮ್ರಾನ್ ಇನ್‌ಸ್ಟಿಟ್ಯೂಟ್‌ನ ಪ್ರಧಾನ ನಿರ್ದೇಶಕಿ ಸಜೀಲಾ ಕೋಲಾ ಅವರಿಗೆ ಮೊಹಮ್ಮದ್ ನಾಗಮಾನ್ ಲತೀಫ್ ನಿರ್ಮಿಸಿದ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ಸ್ ಸೀಸನ್ 9 2023 ರಲ್ಲಿ ನಡೆದ ಇತ್ತೀಚಿನ ಈವೆಂಟ್‌ನಲ್ಲಿ ಫ್ಯಾಶನ್ ಮತ್ತು ಸ್ಟೈಲಿಂಗ್‌ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ. ಫ್ಯಾಶನ್‌ನಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಕರ್ನಾಟಕದ ಮೊದಲ ಮಹಿಳೆ. ಸಜೀಲಾ ಕೋಲಾ ಮೂರು ದಶಕಗಳಿಂದ ಫ್ಯಾಷನ್ ಉದ್ಯಮದ ಅವಿಭಾಜ್ಯ
ಸೈಬರ್ ವಂಚಕರು ಮೋಸ ಮಾಡಲು ಹೊಸ ತಂತ್ರಗಳನ್ನು ಹುಡುಕುತ್ತಿದ್ದಾರೆ. Whatsapp ಹೊಸ ವೈಶಿಷ್ಟ್ಯಗಳೊಂದಿಗೆ ಪಿಂಕ್ ಬಣ್ಣದಲ್ಲಿ ಬಂದಿದೆ & ನವೀಕರಿಸಲು ಲಿಂಕ್‌ಗಳನ್ನು ಕಳುಹಿಸಲಾಗುತ್ತಿದೆ ಎಂಬ ಸಂದೇಶ ಕಳುಹಿಸುವ ವಂಚನಾ ಜಾಲ ಸಕ್ರೀಯವಾಗಿದ್ದು ನಿಮ್ಮ ಬ್ಯಾಂಕ್ ಖಾತೆಯ ಹಣ ದೋಚುವ ಸಾಧ್ಯತೆ ಇದೆ. ನಿಮ್ಮ ವಾಟ್ಸ್‌ಆಪ್ ಪಿಂಕ್ ಬಣ್ಣ ಬಂದಿದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಕೇಳುವ ಮಾಹಿತಿಯನ್ನು ನಮೂದಿಸಿದರೆ ನಿಮ್ಮ ಮಾಹಿತಿಯು ಸೈಬರ್ ಅಪರಾಧಿಗಳ ಕೈ ಸೇರುತ್ತದೆ.
ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಗೆಲುವು ಸಾಧ್ಯವಾಗಿದೆ. ಅದ್ದರಿಂದ ಕಾರ್ಯಕರ್ತರಿಗೆ ವಿಶೇಷ ಅಭಿನಂದನೆ ಸಲ್ಲಬೇಕಾಗಿದೆ ಎಂದು ಮುಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕರಾದ ಉಮಾನಾಧ ಕೋಟ್ಯಾನ್ ಹೇಳಿದರು. ಅವರು ಪಡುಪಣಂಬೂರಿನ ಮೂಲ್ಕಿ ಸೀಮೆ ಅರಮನೆ ಧರ್ಮಚಾವಡಿಯಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ವಿರೋಧ ಪಕ್ಷದವರು ಎಲ್ಲಾ ರೀತಿಯ ಅಪಪ್ರಚಾರ ಮಾಡಿದ್ದು ಆದರೆ ಯಾವುದೇ ಅಪಪ್ರಚಾರಕ್ಕೆ ನಾನು ಉತ್ತರ ನೀಡಲಿಲ್ಲ.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿನ್ನಿಗೋಳಿ ಕೇಂದ್ರ ಬಸ್ಸು ತಂಗುದಾಣ ಹಾಗೂ ನಿಲ್ದಾಣ ಅವ್ಯವಸ್ದೆಗಳ ಅಗರವಾಗಿದ್ದು, ಇದೀಗ ಮದ್ಯವ್ಯಸನಿಗಳ ತಾಣವಾಗಿ ಮಾರ್ಪಟ್ಟಿದೆ. ಒಂದೆಡೆ ಬಸ್ಸು ನಿಲ್ದಾಣದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಧೆ ಇಲ್ಲದೆ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ. ಮತ್ತೊಂದೆಡೆ ನಿತ್ಯ ಪ್ರಯಾಣಿಕರಿಗೆ ಪ್ರಮುಖ ಆಸರೆಯಾಗಿದ್ದ ಈ ಬಸ್ಸು ನಿಲ್ದಾಣವನ್ನು ಇದೀಗ ಕುಡುಕರೇ ಆಳುತ್ತಿದ್ದಾರೆ. ಪ್ರತಿನಿತ್ಯ ಸುಮಾರು
ಮಂಗಳೂರು : ಗ್ರಾಮದ ದೇವಸ್ಥಾನ ಅಭಿವೃದ್ಧಿಗೊಂಡಾಗ ಊರು ಅಭಿವೃದ್ಧಿಗೊಳ್ಳುತ್ತದೆ, ಜನ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಲು ಮತ್ತಷ್ಟು ಪ್ರೇರಣೆ ಶಕ್ತಿಯಾಗುತ್ತದೆ, ಕುಲಾಲ ಸಮಾಜದ ಬಂಧುಗಳು ಶ್ರದ್ದೆಯಿಂದ ತ್ಯಾಗದ ಭಾವನೆಯಿಂದ ಸೇವೆಯನ್ನು ಮಾಡಿ ದೇವರಿಗೆ ಬ್ರಹ್ಮಕಲಸವನ್ನು ಮಾಡಿದ್ದಾರೆ, ಇದು ಸಮಾಜದ ಅಭಿವೃದ್ಧಿಗೆ ಕಳಸಅಭಿಷೇಕವಾಗಿದೆ,ಕ್ಷೇತ್ರವನ್ನು ಉಳಿಸಿಬೆಳೆಸಿಕೊಂಡು ಹೋಗುವ ಜವಾಬ್ದಾರಿ ಇಡೀ ಸಮಾಜಕ್ಕಿದೆ ಎಂದು ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ
ಉಜಿರೆ : ಸರ್ವತೋಮುಖ ಬೆಳವಣ ಗೆಗೆ ಪೂರಕವಾಗುವ ಮಕ್ಕಳ ಹಕ್ಕುಗಳ ಕುರಿತ ಅರಿವು ವ್ಯಾಪಕವಾಗಬೇಕು ಎಂದು ಟೋಕಿಯೊದ ಪ್ರೆಸ್ ಆಲ್ಟರ್ನೇಟಿವ್ ಪತ್ರಿಕೆಯ ಸಲಹೆಗಾರ್ತಿ ಮನೋರಮ ಭಟ್ ಜಿ.ವಿ ಅಭಿಪ್ರಾಯಪಟ್ಟರು. ಎಸ್ .ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಮಾಜ ಕಾರ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಮಕ್ಕಳ ಹಕ್ಕುಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಮಕ್ಕಳು ಸಬಲರಾಗಬೇಕಾದರೆ ಅವರ ಕುಟುಂಬ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಎಲ್ಲ
ಉಳ್ಳಾಲ: ಬಿಫರ್ ಜಾಯ್ ಚಂಡಾಮಾರುತ ಭೀತಿ ಹಿನ್ನೆಲೆಯಲ್ಲಿ ಒಂದು ವಾರದಿಂದ ಪ್ರಕ್ಷುಬ್ದಗೊಂಡಿದ್ದ ಉಚ್ಚಿಲ ಬಟ್ಟಪ್ಪಾಡಿಯ ಸಮುದ್ರತೀರದಲ್ಲಿ ಜಿಲ್ಲಾಡಳಿತದ ಆದೇಶದಂತೆ ತುರ್ತು ಕಲ್ಲು ಹಾಕುವ ಕಾಮಗಾರಿಯನ್ನು ಆರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ತಕ್ಷಣದ ಸುರಕ್ಷತಾ ಕಾಮಗಾರಿ ಆರಂಭಿಸಲಾಗಿದೆ. ಉಳ್ಳಾಲದ ಸಮುದ್ರ ತೀರಕ್ಕೂ ಭಿಪರ್ ಜಾಯ್ ಎಫೆಕ್ಟ್ ತಟ್ಟುವ ಸಾಧ್ಯತೆ ಹಿನ್ನೆಲೆ ತುರ್ತಾಗಿ ಕಲ್ಲುಗಳನ್ನು ಹಾಕಲಾಗುತ್ತಿದೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವ




























