ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಶುಕ್ರವಾರ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಹಿರಿಯ ವಕೀಲ ಕೆವಿ ವಿಶ್ವನಾಥನ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಬೋಧಿಸಿದರು . ಈ ಮೂಲಕ ಸುಪ್ರೀಂ ಕೋರ್ಟ್ ಈಗ 34 ನ್ಯಾಯಾಧೀಶರ ಪೂರ್ಣ ಬಲವನ್ನು ಹೊಂದಿದೆ.
ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತು ಎರಡನೇ ವಾರ್ಡು ವ್ಯಾಪ್ತಿಯ ತೂಮಿನಾಡು ಅಂಗನವಾಡಿಯ ಮುಂಭಾಗದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತು ನಿಧಿಯಿಂದ ಮಂಜೂರಾಗಿರುವ ಬಾವಿಯೊಂದರ ಕಾಮಗಾರಿ ಅರ್ಧದಲ್ಲೇ ಮೊಟಕುಗೊಂಡು ಅದನ್ನು ಅರ್ಧದಲ್ಲೇ ಗುತ್ತಿಗೆದಾರ ಬಿಟ್ಟು ಹೋಗಿರುವುದು ಸ್ಥಳೀಯರ ಆತಂಕಗಳಿಗೆ ಕಾರಣವಾಗಿದೆ. ಬಾವಿಯನ್ನು ಅರ್ಧ ಅಗೆದು ಹಾಗೆಯೇ ಬಿಡಲಾಗಿದೆ. ಬಾಯಿ ತೆರೆದು ಕೊಂಡಿರುವ ಈ ಬಾವಿಯಲ್ಲಿ ಈಗ ನೀರಿಲ್ಲದಿದ್ದರೂ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ
ಪುತ್ತೂರಿನಲ್ಲಿ ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಎಸಗಿದ್ದು, ಪುತ್ತೂರಿನ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆಋಓಗ್ಯ ವಿಚಾರಿಸಿದರು.
ಮುಕ್ತ ಸಮಾಜದಲ್ಲಿ ದುಡಿದು ತಿನ್ನುವ ಹಂಬಲವಿದ್ದರೆ, ಕಾಯಕಕ್ಕೇನು ಕೊರತೆ ಇಲ್ಲಾ ಎನ್ನುವುದನ್ನು ನಮ್ಮ ಕರಾವಳಿಯ ಯುವ ಸಮುದಾಯ ಸಾಬೀತು ಪಡಿಸಿದೆ. ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ಪ್ರಮುಖ ಕಸುಬು ಎಂದರೆ ತಪ್ಪಾಗಲಾರದೇನು, ಅದರಿಂದಲೇ ಎಸ್ಟೋ ಜನ ಯಶಸ್ಸು ಕಂಡವರಿದ್ದಾರೆ. ಅಂತೆಯೇ ಇದೀಗ ಹೊಸ ಪ್ರಯೋಗವೆಂಬಂತೆ ಪಂಜರು ಕೃಷಿಯನ್ನು ಆರಂಭಿಸಿ, ಅದರಿಂದ ಯಶಸ್ಸು ಗಳಿಸಿದ ಯುವ ಸಮೂಹ ಸಮಾಜಕ್ಕೇ ಹೊಸ ಉದ್ಯಮದ ಭರವಸೆ ನೀಡಿದೆ. ಬೈಂದೂರು ತಾಲೂಕಿನ ಉಪ್ಪುಂದ ಉಪ್ಪುಂದ
ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಅರ್ಚಕರಾದ ಮಧ್ವರಾಜ ಭಟ್ ಇವರು ವಿಶ್ವಹಿಂದೂ ಪರಿಷತ್ ಪಡುಬೆಳ್ಳೆ ಘಟಕದವರೊಂದಿಗೆ ಆಯೋಜಿಸಿರುವ ಭಾಗವತ ಸಪ್ತಾಹ ಕಾರ್ಯಕ್ರಮ ನಡೆಯಿತು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಭಾಗವತ ಪುರಾಣದಲ್ಲಿ ಬರುವ ವಿಷಯಗಳನ್ನು ನಮ್ಮಲ್ಲಿ ಅಳವಡಿಸಿ ಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಇದರಲ್ಲಿ ದೇವರ ಚಿಂತನೆಗಳೊಂದಿಗೆ ಜೀವನ ಮೌಲ್ಯಗಳನ್ನು ತಿಳಿಸುವ
ಕರಾವಳಿ ಜಿಲ್ಲೆಯಲ್ಲಿ ಪಶ್ಚಿಮಘಟ್ಟದಿಂದ ಹರಿದು ಬರುವ50 ಕ್ಕೂ ಹೆಚ್ಚು ಜೀವ ನದಿಗಳಿಂದ ವರ್ಷದಿಂದ ವರ್ಷಕ್ಕೆ ನದಿ ತೀರದ ಭೂಮಿಗಳು ಮಳೆಗಾಲದಲ್ಲಿ ಬರುವ ಬಾರೀ ಪ್ರವಾಹದಿಂದ ನದಿ ತೀರದ ಭೂಮಿಗಳು ನದಿಯ ಒಡಲು ಸೇರಿ ಮಣ್ಣು ನಾಶವಾಗುತ್ತಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಭಾಗದಲ್ಲಿ ಹರಿಯುವ 3 ನದಿಗಳಾದ ಸೀತಾ . ಸ್ವರ್ಣಾ ಮತ್ತು ಮಡಿ ಸಾಲು ನದಿಗಳಿಂದ ಕಳೆದ ಹಲವಾರು ವರ್ಷದಿಂದ ನದಿ ತೀರದ ಕೃಷಿ ಭೂಮಿ , ತೆಂಗಿನ ತೋಟ ನದಿಯ ಒಡಲು ಸೇರುತ್ತಿದೆ . ಸೀತಾ […]
ಸಕಲೇಶಪುರ : ಕೊಲ್ಲಹಳ್ಳಿಯ ಬಿಎಮ್ ರಸ್ತೆಯಲ್ಲಿ ಮುಂಜಾನೆ ಕಾಡಾನೆಯೊಂದು ರಾಜಾರೋಷವಾಗಿ ತಿರುಗಾಡುತ್ತಿರುವುದು ಕಂಡುಬಂತು. ಕಳೆದ ಎರಡು ದಿನಗಳ ಹಿಂದಷ್ಟೇ ಕಾಡಾನೆಗಳಿಗೆ ವಿಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆಸಲಾಗಿತ್ತು. ರಾತ್ರಿ ಸಮಯದಲ್ಲಿ ಹೊರಗೆ ಬರಲು ಜನತೆ ಭಯ ಪಡುತ್ತಿದ್ದಾರೆ. ಕಳೆದ ವಾರವಷ್ಟೇ ಇದೇ ಪ್ರದೇಶದಲ್ಲಿ ಎರಡು ಜನರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ. ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗಲು ಕೆಲಸಗಾರರು ಭಯ ಪಡುವಂತಾಗಿದೆ.
ಮೂಡುಬಿದಿರೆ: ಕರಾವಳಿಯ ಜಾನಪದ ಕ್ರೀಡೆ ಕಂಬಳ. ರಾಜ್ಯದಲ್ಲಿ ಪ್ರಾಣಿ ಹಿಂಸಾ ತಡೆ ಕಾಯ್ದೆಗೆ ತಿದ್ದುಪಡಿ ತಂದು ಕರಾವಳಿ ಕರ್ನಾಟಕದಲ್ಲಿ ನಡೆಯುವ ಕಂಬಳಕ್ಕೆ ಮಾನ್ಯತೆ ನೀಡಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪ್ರಾಣಿ ದಯಾ ಸಂಘಗಳು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಗ್ರೀನ್ ಸಿಗ್ನಲ್ ನೀಡಿರುವುದಕ್ಕೆ ಕಂಬಳ ಸಮಿತಿ ಸಂತಸ ವ್ಯಕ್ತಪಡಿಸಿದ್ದು, ಈ ದಿನ ಕಂಬಳ ಕ್ಷೇತ್ರದಲ್ಲಿ ಐತಿಹಾಸಿಕ ದಿನ ಎಂದು ಕಂಬಳ ಸಮಿತಿ ಬಣ್ಣಿಸಿದೆ. ಈ ಬಗ್ಗೆ ಜಿಲ್ಲಾ ಕಂಬಳ ಸಮಿತಿಯ
ಬಿಜೆಪಿ ಮುಖಂಡ ಜಿ.ಪಂ. ಮಾಜಿ ಸದಸ್ಯ ನವೀನ್ ಕುಮಾರ್ ರೈ ಮೇನಾಲ ಅವರು ಹೊಳೆ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತುದಿಯಡ್ಕ ಬಳಿ ಪಯಸ್ವಿನಿ ನದಿಗೆ ತನ್ನ ತೋಟಕ್ಕೆ ನೀರು ಸರಬರಾಜು ಮಾಡುವ ಪಂಪ್‌ನ ಪುಟ್ ವಾಲ್ ರಿಪೇರಿಗೆಂದು ಇಳಿದಿದ್ದ ಸಂದರ್ಭ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಮೃತದೇಹವನ್ನು ಮೇಲೆತ್ತಲಾಗಿದೆ ಎಂದು ಹೇಳಲಾಗಿದೆ. ಪಯಸ್ವಿನಿ ನದಿಗೆ ಅಳವಡಿಸಲಾದ ತನ್ನ ತೋಟಕ್ಕೆ ನೀರು ಸರಬರಾಜುಮಾಡುವ ಪಂಪ್‌ನ ಪುಟ್ ವಾಲ್
ಜನರು ತಮ್ಮ ಅದೃಷ್ಟ ಪರೀಕ್ಷೆಗೆ ವಿವಿಧ ಕಸರತುಗಳನ್ನು ಮಾಡುವುದು ಸಹಜ. ಕೆಲವರು ಅದೃಷ್ಟದಾಟದಲ್ಲಿ ತೊಡಗಿಸಿಕೊಂಡು ಹಣ ಕಳೆದುಕೊಂಡವರೂ ಇದ್ದಾರೆ. ಲಕ್ಷಾಂತರ ಜನರು ದಿಡೀರ್ ಶ್ರೀಮಂತರಾಗಬೇಕು ಎಂದು ಲಾಟರಿ ತೆಗೆದು ತಮ್ಮ ಅದೃಷ್ಟ ಸಂಖ್ಯೆಗೆ ಬಂಪರ್ ಬಹುಮಾನ ಬಂದಿದೆಯಾ ಎಂದು ಜಾತಕಪಕ್ಷಿಯಂತೆ ಕಾಯುತ್ತಾರೆ. ಆದರೆ ಇಲ್ಲೊಂದು ಕಡೆ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದರೂ, ವಿಜೇತ ಅದೃಷ್ಟವಂತ ಈವರೆಗೂ ಬಂಪರ್ ಬಹುಮಾನ ಬಂದ ಲಾಟರಿ ಏಜೆನ್ಸಿಯನ್ನು ಸಂಪರ್ಕಿಸಿಲ್ಲ. ಈ




























