ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಭಾಗವತ ಸಪ್ತಾಹಕ್ಕೆ ಚಾಲನೆ

ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಅರ್ಚಕರಾದ ಮಧ್ವರಾಜ ಭಟ್ ಇವರು ವಿಶ್ವಹಿಂದೂ ಪರಿಷತ್ ಪಡುಬೆಳ್ಳೆ ಘಟಕದವರೊಂದಿಗೆ ಆಯೋಜಿಸಿರುವ ಭಾಗವತ ಸಪ್ತಾಹ ಕಾರ್ಯಕ್ರಮ ನಡೆಯಿತು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಭಾಗವತ ಪುರಾಣದಲ್ಲಿ ಬರುವ ವಿಷಯಗಳನ್ನು ನಮ್ಮಲ್ಲಿ ಅಳವಡಿಸಿ ಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಇದರಲ್ಲಿ ದೇವರ ಚಿಂತನೆಗಳೊಂದಿಗೆ ಜೀವನ ಮೌಲ್ಯಗಳನ್ನು ತಿಳಿಸುವ ಅಂಶಗಳಿರುವುದರಿಂದ ಪ್ರತಿಯೊಬ್ಬ ಹಿಂದೂಗಳು ಇದರಲ್ಲಿ ಭಾಗವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ತುಳು ಲಿಪಿಯಲ್ಲಿ ಭಗವದ್ಗೀತೆಯನ್ನು ಬರೆದ ಶಾಂತ ಸೇರಿಗಾರ್ತಿಯವರಿಗೆ ಶ್ರೀಪಾದರು ಅನುಗ್ರಹ ಮಂತ್ರಾಕ್ಷತೆ ನೀಡಿದರು. ವಿದ್ವಾಂಸರಾದ ಕಡಂದಲೇ ಗಣಪತಿ ಭಟ್, ರವಿಕುಮಾರ್ ಆಚಾರ್ಯ, ಹಿರಿಯಡ್ಕ ದೇವಸ್ಥಾನದ ತಂತ್ರಿಗಳಾದ ಲಕ್ಷ್ಮೀನಾರಾಯಣ ಚಡಗ, ವಿಶ್ವ ಹಿಂದೂ ಪರಿಷತ್ತಿನ ವಿಶ್ವನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.