ಬೈಂದೂರಿನ ಕಿರಿ ಮಂಜೇಶ್ವರದ ಶ್ರೀ ಕ್ಷೇತ್ರ ಶ್ರೀ ಅಗಸ್ತೇಶ್ವರ, ಶ್ರೀ ಮಹಾಗಣಪತಿ, ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಅಗಸ್ತೇಶ್ವರ ದೇವರ ಜೀರ್ಣಾಷ್ಟಬಂಧ, ಬ್ರಹ್ಮಕಲಶೋತ್ಸವ ಪುಷ್ಪರಥ ಸಮರ್ಪಣೆ ಹಾಗೂ ಶ್ರೀ ಮನ್ಮಹಾ ರಥೋತ್ಸವವು ಏ.28ರಿಂದ ಮೇ 7ರ ವರೆಗೆ ಸಂಭ್ರಮದಿಂದ ನಡೆಯಲಿದೆ. ವಾದ್ಯಗೋಷ್ಠಿ ಚೆಂಡೆ ವಾದನ ಮೂಲಕ ಭವ್ಯ ಮೆರವಣಿಗೆ ಭಕ್ತರೊಬ್ಬರು
ಹಿಂದುಳಿದ ವರ್ಗಗಳ ಮೀಸಾಲಾತಿಗಳನ್ನು ರದ್ದುಮಾಡಿ, ಅದನ್ನು ಮೇಲ್ವರ್ಗಗಳಿಗೆ ನೀಡುವ ಕೆಲಸವನ್ನು ಬಿಜೆಪಿ ಸರ್ಕಾರ ನಡೆಸುತ್ತಿದ್ದು, ಆ ನಿಟ್ಟಿನಲ್ಲಿ ಕೆಲವರ್ಗದ ನಾವೆಲ್ಲಾ ಒಂದಾಗುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ಮಾಜಿ ಸಚಿವರೂ…ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯೂ ಆದ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.ಅವರು ಎರ್ಮಾಳು ಲಕ್ಷ್ಮೀ ಜನಾರ್ದನ ದೇವಸ್ಥಾನ, ವೀರಭದ್ರ ದೇವಸ್ಥಾನ, ನಡಿಯಾಲು ಧೂಮಾವತಿ ದೈವಸ್ಥಾನ ಮುಂತಾದ ಧಾರ್ಮಿಕ
ರಾಜ್ಯದ ಅಧಿಕಾರ ಚುಕ್ಕಾಣಿಯಲ್ಲಿರುವ ಬಿಜೆಪಿ ಸರಕಾರದ ಅವಧಿಯಲ್ಲಿ ಜನರ ಯಾವೊಂದು ಆಶೋತ್ತರಗಳನ್ನು ಈಡೇರಿಸಲಿಲ್ಲ. ಭ್ರಷ್ಟಾಚಾರ, ಅಕ್ರಮ ಹಣ ಸಂಪಾದನೆ, ಮತೀಯ ವಿಭಜನೆಯಂತಹ ರಾಜಕಾರಣದಲ್ಲಿ ಜನರ ಬದುಕಿನ ಪ್ರಶ್ನೆಯನ್ನು ಕಡೆಗಣಿಸಿದಲ್ಲದೆ ಸೋಲಿಸುತ್ತಾ ಬಂದಿದೆ. ಈ ರಾಜ್ಯದ ಜನರ ಬದುಕಿನ ಪ್ರಮುಖ ವಿಚಾರಗಳಾದ ಉದ್ಯೋಗ, ಆರೋಗ್ಯ, ಶಿಕ್ಷಣದಂತಹ ಬಹುಮುಖ್ಯ ಪ್ರಶ್ನೆಗಳು ಗೆಲ್ಲಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲಬೇಕಾಗಿದೆ ಎಂದು ಸಿಪಿಐಎಂ ಮಂಗಳೂರು
ಶಾಸಕ ವೇದವ್ಯಾಸ ಕಾಮತ್ ರವರು ತನ್ನ ಮಾನಹಾನಿಕರ ಸುದ್ದಿ ಪ್ರಕಟವಾಗದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿರುವ ಬಗ್ಗೆ ಸಮಗ್ರ ತನಖೆಯಾಗಬೇಕು.ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬರು ಮಾನಹಾನಿ ಆಗುವಂತಹ ವಿಚಾರದ ಬಗ್ಗೆ ಕನಿಷ್ಟ ದೂರನ್ನು ಕೊಡದೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದು ಶಾಸಕರ ಸಚ್ಚಾರಿತ್ಯದ ಬಗ್ಗೆ ಸಾರ್ವಜನಿಕರಿಗೆ ಅನುಮಾನಗಳು ವ್ಯಕ್ತವಾಗುತ್ತಿದ್ದು,ಈ ಬಗ್ಗೆ ಕೂಡಲೇ ಶಾಸಕ ವೇದವ್ಯಾಸ ಕಾಮತರು ಸ್ಪಷ್ಟನೆ ನೀಡಬೇಕು ಎಂದು CPIM ದ.ಕ. ಜಿಲ್ಲಾ
ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಗಂಗಾಧರ ಗೌಡವರವರ ಮೂರು ಸ್ಥಳಗಳಿಗೆ ಏ.24 ರಂದು ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿರುವ ಮನೆ, ಲಾಯಿದಲ್ಲಿರುವ ಪ್ರಸನ್ನ ಇನ್ಸ್ಟಿಟ್ಯೂಷನ್ , ಇಂದಬೆಟ್ಟು ನಲ್ಲಿರುವ ಮನೆ ಮೇಲೆ ಇಂದು ಬೆಳಗ್ಗೆ ಇನೋವಾ ಕಾರಿನಲ್ಲಿ ಪೊಲೀಸರ ಜೊತೆ ಬಂದ ಐಟಿ ಅಧಿಕಾರಿಗಳು ಬಂದು ದಾಳಿ ಮಾಡಿದ್ದು. ಪರಿಶೀಲನೆ ಮುಂದುವರಿದಿದೆ.
ಜೋಕಟ್ಟೆ ಮುಹಿಯದ್ದೀನ್ ಹೊಸ ಜುಮ್ಮಾ ಮಸೀದಿ 2023 ರ ಆಡಳಿತ ಸಮಿತಿಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ನಡೆದಿದ್ದು ಅಧ್ಯಕ್ಷ ರಾಗಿ ಜೋಕಟ್ಟೆ ಮೂಲದ ಮುಝೈನ್ ಗ್ರೂಪ್ ಆಫ್ ಕಂಪನಿಯ ಮಾಲಕರಾದ ಹಾಜಿ ಬಿಎಮ್ ಶರೀಫ್ ರವರು ಅವಿರೋಧವಾಗಿ ಆಯ್ಕೆ ಯಾದರು. ಉಪಾಧ್ಯಕ್ಷರಾಗಿ ಹಾಜಿ ಬಿಎಸ್ ಶರೀಪ್ಪ್ರಧಾನ ಕಾರ್ಯದರ್ಶಿ-ಎಚ್ ಎಮ್ ಬಾವಜೊತೆ ಕಾರ್ಯದರ್ಶಿಯಾಗಿ ಹಾಜಿ ಟಿ ಅಬೂಬಕ್ಕರ್,ಖಜಾಂಚಿ-ಸುಲೈಮಾನ್ ಬೊಟ್ಟುಸಾಂಸ್ಕೃತಿಕ
ಕುರಲ್ ಇಷ್ಟೆರ್ ಕುಡ್ಲದ ಸ್ಥಾಪಕ ಅಧ್ಯಕ್ಷ ಜೆ. ತಿಮ್ಮಪ್ಪ ಪೂಜಾರಿ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ಪ್ರಾಯವಾಗಿತ್ತು.ಕವಿ, ಸಾಹಿತಿ, ಬರಹಗಾರರಾದ ಜೆ. ತಿಮ್ಮಪ್ಪ ಪೂಜಾರಿ ಅವರು, ‘ಬಡವೆರಾದ್ ಬದುಕೊಡಾ’ , ‘ಬದಿತ್ತ ಬಿದಿ’ , ‘ಕರಿಯಮಣಿಯೆ ಸಾಕ್ಷಿ’ , ‘ಬುದ್ಯಂತೆರ್’ , ‘ಧರ್ಮರಾಜ್ಯದ ದೊರೆಗಳು’ , ‘ಬಲಿ ಕೊರ್ಪಿ ಕುರಿಕ್ಕುಳು’ ನಾಟಕಗಳನ್ನು ರಚಿಸಿ,
ಮೂಡುಬಿದಿರೆ: ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಬಸವ ಜಯಂತಿಯನ್ನು ಆಚರಿಸಲಾಯಿತು.ತಾಲೂಕು ಉಪತಹಾಶಿಲ್ದಾರ್ ಬಾಲಚಂದ್ರ, ಮೂಡಾ ಎಂಜಿನಿಯರ್ ಪ್ರವೀಣ್, ಸುವಿದಾ ನೋಡೆಲ್ ಗಳಾದ ಶಿವಾನಂದ ಕಾಯ್ಕಿಣಿ ಮತ್ತು ಡಾ.ಪ್ರತಿಮಾ ಹಾಗೂ ವಿವಿಧ ಇಲಾಖೆಯ ಸಿಬಂಧಿಗಳು ಈ ಸಂದರ್ಭದಲ್ಲಿದ್ದರು.
ಬಾಲಿವುಡ್ ಬೆಡಗಿ ಕನ್ನಡತಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ಧಾರೆ.ದೇವಳದ ವತಿಯಿಂದ ನಟಿಗೆ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಆಶೀರ್ವದಿಸಲಾಯಿತು. ಯಕ್ಷಗಾನ ವೀಕ್ಷಣೆ ದೇವಿಯ ದರ್ಶನ ಪಡೆದ ನಂತರ ಶಿಲ್ಪಾ ಶೆಟ್ಟಿ ಯಕ್ಷಗಾನವನ್ನು ವೀಕ್ಷಿಸಿ ಕಲೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.ಈ ವೇಳೆ ಪತಿ ರಾಜ್ ಕುಂದ್ರ, ತಂಗಿ ಶಮಿತಾ ಶೆಟ್ಟಿ, ಕುಟುಂಬ
ರಾಮಕುಂಜ ವಿದ್ಯಾಚೇತನ ವಿಶೇಷ ಶಾಲೆಯ ಎಂಡೋ ಸಂತ್ರಸ್ತ ವಿದ್ಯಾರ್ಥಿಳಿಬ್ಬರು ಉತ್ತಮ ಅಂಕಗಳೊoದಿಗೆ ಉತ್ತೀರ್ಣದ.ಕ: ಕಡಬ ತಾಲೂಕಿನ ರಾಮಕುಂಜದಲ್ಲಿ ಸೇವಾ ಭಾರತಿಯವರು ನಡೆಸುತ್ತಿರುವ ವಿದ್ಯಾಚೇತನ ವಿಶೇಷ ಶಾಲೆಯ ಎಂಡೋ ಸಲ್ಫಾನ್ ಸಂತ್ರಸ್ತರಿಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತರಾದ ಮೋಹನ ಮತ್ತು ಪದ್ಮಶೇಖರ ಅವರು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿ ಒಬ್ಬರು ಪ್ರಥಮ ಶ್ರೇಣಿ ಹಾಗೂ




























