ಕುರಲ್ ಇಷ್ಟೆರ್ ಕುಡ್ಲದ ಸ್ಥಾಪಕ ಅಧ್ಯಕ್ಷ ಜೆ. ತಿಮ್ಮಪ್ಪ ಪೂಜಾರಿ ನಿಧನ

ಕುರಲ್ ಇಷ್ಟೆರ್ ಕುಡ್ಲದ ಸ್ಥಾಪಕ ಅಧ್ಯಕ್ಷ ಜೆ. ತಿಮ್ಮಪ್ಪ ಪೂಜಾರಿ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ಪ್ರಾಯವಾಗಿತ್ತು.ಕವಿ, ಸಾಹಿತಿ, ಬರಹಗಾರರಾದ ಜೆ. ತಿಮ್ಮಪ್ಪ ಪೂಜಾರಿ ಅವರು, ‘ಬಡವೆರಾದ್ ಬದುಕೊಡಾ’ , ‘ಬದಿತ್ತ ಬಿದಿ’ , ‘ಕರಿಯಮಣಿಯೆ ಸಾಕ್ಷಿ’ , ‘ಬುದ್ಯಂತೆರ್’ , ‘ಧರ್ಮರಾಜ್ಯದ ದೊರೆಗಳು’ , ‘ಬಲಿ ಕೊರ್ಪಿ ಕುರಿಕ್ಕುಳು’ ನಾಟಕಗಳನ್ನು ರಚಿಸಿ, ಪ್ರದರ್ಶಿಸಿ, ಜೊತೆಗೆ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾದ ‘ಬಲಿ ಕೊರ್ಪಿ ಕುರಿ’ , ‘ಎನ್ನ ಗುರು’, ‘ಬದ್ಕೊಂಜಿ ರೈಲ್ ಬಂಡಿ’, ನಾಟಕಗಳು ಹಾಗೂ ಮುಟ್ಟಿಯ ದಾಯೆ ದೆಕ್ಕ್‍ದ್ ಬುಡು, ಅಟ್ಟೆಮಿ ಆಂಡ ದಾನೆ ಗುಂಡಮಿ ಆಂಡ ದಾನೆ, ಎನ್ನುವ ರೇಡಿಯೋ ರೂಪಕ ಹಾಗೂ 150 ಕ್ಕೂ ಮಿಕ್ಕಿ ಪ್ರದರ್ಶನ ಗೊಂಡ ಅಮರ್ ಬೊಳ್ಳಿಲು ನೃತ್ಯ ರೂಪಕವನ್ನು ರಚಿಸಿದ್ದಾರೆ. ಕೂಕೂಳು (ಕವನ ಸಂಕಲನ), ಗಾದೆಲೆಡ್ ಅಡಂಗ್ ದಿ ಕಥೆಕ್ಕುಲು, ಬಪ್ಪ ಬಸಪ್ಪನ ಪದೊಕ್ಕೂಲು (2009 ರ ವಿಶ್ವ ತುಳು ಸಮ್ಮೇಳನದ ವೇದಿಕೆಯಲ್ಲಿ ಆಗಿನ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪನವರು ಈ ಪುಸ್ತಕವನ್ನು ಬಿಡುಗಡೆಗೊಳಿಸಿದರು.), ಹಾಗೂ ಕೊನೆಯ ಪುಸ್ತಕ ‘ತುಳುವೆರೆ ನ ರೀತಿ ರಿವಾಜಿಲು ಬೊಕ್ಕ ಪದಿನಾಜಿ ಸಂಸ್ಕಾರೊಲು’ ಬರೆದಿದ್ದಾರೆ. ತಿಮ್ಮಪ್ಪ ಪೂಜಾರಿ ಅವರು, ಪತ್ನಿ, ಮಕ್ಕಳು ಅಳಿಯ ಸೊಸೆ ಮೊಮ್ಮಗಳು ಮತ್ತು ಅಪಾರ ಆತ್ಮೀಯರನ್ನು ಅಗಲಿದ್ದಾರೆ.