ಮಂಗಳೂರು: ಈ ಬಾರಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಶತಸ್ಸಿದ್ಧ. ಮಂಗಳೂರು ಕ್ಷೇತ್ರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಎಂಟೂ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಂಗಳೂರು ಕ್ಷೇತ್ರದ ಪ್ರಭಾರಿ ಪ್ರತಾಪ್ ಸಿಂಹ ನಾಯಕ್ ಹೇಳಿದರು. ಬಿಜೆಪಿಯ ಮಂಗಳೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಇಂದು
ಕಾರ್ಕಳ ವಿಧಾನ ಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಹಾಗೂ ಸಾವಿತ್ರಿ ಸತ್ಯವಾನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಮಮತಾ ಹೆಗ್ಡೆ ರವರು ಕಾರ್ಕಳ ತಾಲೂಕಿನ ಎಣ್ಣೆ ಹೊಳೆಯ ಸುಮಾರು 138 ಕೋಟಿಯ ಕಳಪೆ ಕಾಮಗಾರಿಯನ್ನು ವೀಕ್ಷಿಸಿದರು.ಎಣ್ಣೆ ಹೊಳೆಯ ಅಣೆಕಟ್ಟಿನ ಕಾಮಗಾರಿಯು ಕಳಪೆ ದರ್ಜೆಯ ಕಾಮಗಾರಿಯಾಗಿದ್ದು , ತೆರಿಗೆದಾರರ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ಮಮತಾ ಹೆಗ್ಡೆ ಅವರು ದೂರಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣ ಖರ್ಚು ಮಾಡಿದರೂ ಕಾರ್ಕಳಕ್ಕೆ ಕುಡಿಯುವ
ಪ್ರಸಕ್ತ ಕಾಲಘಟ್ಟದಲ್ಲಿ ನಮ್ಮನ್ನಾಳುವ ಸರಕಾರಗಳು ದೇಶದ ಸಂವಿಧಾನದ ಆಶಯಗಳಲ್ಲೊಂದಾದ ಆರ್ಟಿಕಲ್ 51A(h) ವೈಜ್ಞಾನಿಕ ಮನೋಭಾವನೆ ಬೆಳೆಸುವ ಕಾರ್ಯಕ್ರಮಗಳನ್ನು ಉತ್ತೇಜಿಸುವ ಬದಲಾಗಿ ಮೂಡನಂಬಿಕೆಗಳನ್ನೇ ಅನಾಚಾರಗಳನ್ನೇ ಮಾತ್ರವಲ್ಲ ಒಟ್ಟು ದೇಶದ ಸಂವಿಧಾನದ ಎಲ್ಲಾ ಆಶಯಗಳನ್ನೇ ಬುಡಮೇಲು ಮಾಡಲೊರಟಿದೆ ಇಂತಹ ಸಂದಿಗ್ಧ ವಿದ್ಯಮಾನದಲ್ಲಿ ದೇಶದ ಜನರನ್ನು ಮೂಡನಂಬಿಕೆಯಿಂದ ಹೊರತರುವ, ವೈಜ್ಞಾನಿಕ ಚಿಂತನೆ ಬೆಳೆಸುವ ನಿಟ್ಟಿನಲ್ಲಿ ನಾವು ದೇಶದಾದ್ಯಂತ
ನಂದಿಕೂರಿನ ಜನಪ್ರಿಯ ನಾಟಿ ವೈದ್ಯೆ ಯೊಬ್ಬರು ಇಂದು ಮುಂಜಾನೆ ಸ್ವಗೃಹದಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ನಂದಿಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ರತ್ನಮ್ಮ(83) ವರ್ಷ ವಯಸ್ಸಾಗಿತ್ತು. ಯಾವುದೇ ಫಲಾಕ್ಷೇಪೆ ಬಯಸದೆ ನಾಟಿ ವೈಧ್ಯೆಯಾಗಿ ಜನರ ಸೇವೆ ಮಾಡುತ್ತಿದ್ದರು. ಹೊರ ಜಿಲ್ಲೆ ರಾಜ್ಯದಿಂದಲ್ಲೂ ಜನ ಇವರು ನೀಡುವ ಚಿಕಿತ್ಸೆ ಪಡೆದು ಗುಣ ಮುಖರಾಗಿದ್ದು, ಇದೀಗ ಇವರ ಅಗಲುವಿಕೆಯಿಂದ ಜನ ಉತ್ತಮ ನಾಟಿ ವೈಧ್ಯೆಯೊಬ್ಬರನ್ನು
ಮೋವಿನ್ ಫಿಲಮ್ಸ್ ಬ್ಯಾನರ್‍ನಡಿ ನಿರ್ಮಾಣವಾದ ತುಳು ಸಿನಿಮಾ `ಗೌಜಿ ಗಮ್ಮತ್’ ಏ.14ರಂದು ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲಿದೆ. ಕರ್ಣ ಉದ್ಯಾವರ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ್ದಾರೆ. ನಾಯಕಿಯಾಗಿ ಉಡುಪಿಯ ಸ್ವಾತಿ ಶೆಟ್ಟಿ ಸಾಥ್ ನೀಡಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗವಿದ್ದು ಕರಾವಳಿಯ ಹಾಸ್ಯ ದಿಗ್ಗಜರೆಂದೇ ಖ್ಯಾತರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರು
ಉಳ್ಳಾಲ : ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಲ್ಲಿ ಯಾವುದೇ ಗೊಂದಲವಿಲ್ಲ, ಒಮ್ಮತದ ಅಭ್ಯರ್ಥಿ, ಕಾಂಗ್ರೆಸ್ ಸೋಲಿಸುವುದೇ ನಮ್ಮ ಧ್ಯೇಯವಾಗಿದೆ, ಕಾರ್ಯಕರ್ತರು ನೋವಿನಿಂದ ಇದ್ದಲ್ಲಿ ನೇರ ಬಂದು ತಿಳಿಸಿ, ಸೂಕ್ತ ಅಭ್ಯರ್ಥಿ ಸತೀಶ್ ಕುಂಪಲ ಅವರನ್ನು ಅತ್ಯಧಿಕ ಮತಗಳೊಂದಿಗೆ ಗೆಲ್ಲಿಸುವುದೇ ಮಂಗಳೂರು ಮಂಡಲ ಬಿಜೆಪಿಯ ಗುರಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ. ಮುಡಿಪು ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಮುಖ್ಯಮಂತ್ರಿ ಅವರಿಗೆ ಹೂ ನೀಡಿ, ಆಶೀರ್ವಾದ ಪಡೆದರು.ಶುಭವಾಗಲಿ ಎಂದು ಸಿಎಂ ಆಶೀರ್ವದಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಭಾಗೀರಥಿ ಮುರುಳ್ಯ ಅವರು, ಸಾಮಾನ್ಯ ಕಾರ್ಯಕರ್ತೆ ಆಗಿರುವ ನನಗೆ ಚುನಾವಣೆ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿದೆ. ಪಕ್ಷದ ಹಿರಿಯ ಮಾರ್ಗದರ್ಶನದಲ್ಲಿ ಕೆಲಸ
ದ.ಕ ಜಿಲ್ಲೆಯ ಹಲವು ದೇವಸ್ಥಾನಕ್ಕೆ ಬೇಟಿ ನೀಡಿದ್ದೇನೆ. ಧರ್ಮಸ್ಥಳ, ಕೊಲ್ಲೂರು, ಕಟೀಲು ದೇವಸ್ಥಾನಗಳಿಗೆ ಹೆಚ್ಚಾಗಿ ಭೇಟಿ ನೀಡುತಿದ್ದು ಇಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿ ಕರ್ನಾಟಕ ಜನತೆಯ ಸುಭೀಕ್ಷೆಗಾಗಿ ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಮಾದ್ಯಮದೊಂದಿಗೆ ಹೇಳಿದರು. ಧರ್ಮಸ್ಥಳ ಕ್ಕೆ ಆಗಮಿಸಿದ ಬಳಿಕ ಹೆಲಿಕಾಪ್ಟರ್ ಮೂಲಕ
ಉಳ್ಳಾಲ: ಮೀನಿನ ಬಲೆಗೆ ಆಕಸ್ಮಿಕ ಬೆಂಕಿ ಬಿದ್ದು ರೂ.15 ಲಕ್ಷ ಸೊತ್ತುಗಳು ಹಾನಿಯಾಗಿರುವ ಘಟನೆ ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ಜರಗಲಿದೆ. ಇಂದು ಮದ್ಯಾಹ್ನದ ವೇಳೆ ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆ ಬಳಿಯ ನಾಡ ದೋಣಿಗಳ ಶೆಡ್ ಹತ್ತಿರ ಇಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನಿನ ಬಲೆಗೆ ಬೆಂಕಿ ತಗುಲಿದ್ದು ಬಲೆಗಳು ಸುಟ್ಟು ಕರಕಲಾಗಿವೆ. ಕಿಡಿಗೇಡಿಗಳ ಕೃತ್ಯದಿಂದ ಘಟನೆ ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಾಡ ದೋಣಿ ಮೀನುಗಾರರಾದ
ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ. ಪಕ್ಷವನ್ನು ಎರಡೂವರೆ ಸಾವಿರ ಮತಗಳಿಂದ 75 ಸಾವಿರ ಮತಗಳವರೆಗೆ ಬೆಳೆಸಿದ್ದೇವೆ. ಮುಂದೆಯೂ ಬಿಜೆಪಿ ಕ್ಷೇತ್ರವನ್ನಾಗಿ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತೇನೆ ಎಂದು ಬಿಜೆಪಿ ಟಿಕೆಟ್ ವಂಚಿತ ಲಾಲಾಜಿ ಆರ್. ಮೆಂಡನ್ ಹೇಳಿದರು. ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಲಾಲಾಜಿ ಮೆಂಡನ್ ಅವರ ಮನೆಗೆ ತೆರಳಿ ಅವರೊಂದಿಗೆ ಚರ್ಚೆ ನಡೆಸಿದರು. ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಲಾಲಾಜಿ ಮೆಂಡನ್



























