ಮಂಜೇಶ್ವರ: ಕುಂಜತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಡರ್ ಪಾಸ್ ನಿಂದ ಬುಧವಾರ ಬೆಳಗ್ಗಿನಿಂದ ವಾಹನ ಸಂಚಾರ ಆರಂಭಗೊಂಡಿತು.ಅಂಡರ್ ಪಾಸ್ ನೀಡುವುದಾಗಿ ಅಧಿಕಾರಿಗಳ ಭಾಗದಿಂದ ಹಸಿರು ನಿಶಾನೆ ಲಭಿಸಿದಾಗ ಸ್ಥಳೀಯರು ಅತೀವ ಸಂತೋಷಪಟ್ಟಿದ್ದರೂ ಈ ರೀತಿಯ ಅಂಡರ್ ಪಾಸ್ ಸಿಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲವೆಂಬುದಾಗಿ ಜನರು ಆಡಿಕೊಳ್ಳುತಿದ್ದಾರೆ. ಅಂಡರ್ ಪಾಸ್
ಬಂಟ್ವಾಳ: ಕಾಂಗ್ರೆಸ್ ಪಕ್ಷದ ವತಿಯಿಂದ ಬಂಟ್ವಾಳ ಕ್ಷೇತ್ರದಾದ್ಯಂತ ಗ್ರಾಮಗಳನ್ನು ತಲುಪುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಮಾರ್ಚ್ 10ರಿಂದ ಆರಂಭಗೊಳ್ಳಲಿದ್ದು, 14 ದಿನಗಳ ಕಾಲ ಕ್ಷೇತ್ರದಾದ್ಯಂತ ಸಂಚರಿಸಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಐದು ವರ್ಷಗಳ ಶಾಸಕತ್ವದ ಅವಧಿಯಲ್ಲಿ ಸಿದ್ಧರಾಮಯ್ಯ ಸರಕಾರ ಮೂಲಕ ಕ್ಷೇತ್ರದಾದ್ಯಂತ ಕೈಗೊಳ್ಳಲಾದ 5 ಸಾವಿರ
ಕಾರ್ಕಳದ ಅಭಿವೃದ್ಧಿಯಲ್ಲಿ ಮೂಲಸೌಕರ್ಯ ಜೊತೆಗೆ ಸಾರ್ವಜನಿಕರ ವೇಗಕ್ಕೆ ತಕ್ಕಂತೆ ಮಹತ್ತರವಾದ ದೂರವನ್ನು ಅಭಿವೃದ್ಧಿ ಕ್ಷೇತ್ರದಲ್ಲಿ ಕ್ರಮಿಸಿದ್ದೇನೆ. 10 ದಿಕ್ಕಿನಲ್ಲೂ ರಸ್ತೆಗಳು ಹೊಸತನಕ್ಕೆ ಮಗ್ಗು ಬದಲಿಸಿಕೊಂಡಿವೆ. ಇಡೀ ಕಾರ್ಕಳಕ್ಕೆ ಹೊಸ ರೂಪ ನೀಡಲಾಗಿದೆ ಎಂದು ಇಂದಿನ ಸಚಿವ ಸುನಿಲ್ ಕುಮಾರ್ ಹೇಳಿದರು. ಕಾರ್ಕಳ ನಗರ ಭಾಗಕ್ಕೆ ಹತ್ತಿರದಲ್ಲಿರುವ ಜೋಡು ರಸ್ತೆಯಲ್ಲಿ 6.50 ಕೋಟಿ ವೆಚ್ಚದ ಸಮಗ್ರವಾಗಿ ಅಭಿವೃದ್ಧಿ ಕಾಮಗಾರಿ ಅಲಂಕಾರಿಕ ದೀಪ ಉದ್ಘಾಟಿಸಿ
ಟ್ಯೂಬ್ ಮೂಲಕ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಸಮುದ್ರದ ತೆರೆಯ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾದ ಘಟನೆ ಉಳಿಯಾರಗೋಳಿ ಕಡಲ ಕಿನಾರೆಯಲ್ಲಿ ನಡೆದಿದೆ. ಉಳಿಯಾರಗೋಳಿ ಯಾರ್ಡ್ ಬಳಿಯ ನಿವಾಸಿ ಸಂತೋಷ್ (48) ಮೀನುಗಾರಿಕೆಗೆ ತೆರಳಿ ನಾಪತ್ತೆ ಯಾಗಿರುವ ವ್ಯಕ್ತಿ. ಸಾಂಪ್ರದಾಯಿಕ ರೀತಿಯಲ್ಲಿ ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿದ್ದ ಸಂತೋಷ್ ಬುಧವಾರ ಸಂಜೆ 5 ಗಂಟೆಯ ವೇಳೆಗೆ ಟ್ಯೂಬ್ ಧರಿಸಿಕೊಂಡು ಮೀನುಗಾರಿಕೆಗೆ ತೆರಳಿದ್ದು, ಬಲೆ ಬೀಸಿ
ತೆರೆಮರೆಯ ಕಡೆ ವಾಲುತ್ತಿರುವ ಧಾರ್ಮಿಕ ಆಚರಣೆಯಲ್ಲಿ ಕಂಗೀಲು ಕೂಡಾ ಒಂದು..ಬಹುತೇಕ ಕಡೆ ಇಲ್ಲವಾಗಿರುವ ಕಂಗೀಲು ಹೆಜಮಾಡಿಯಲ್ಲಿ ಇಂದೂ ಜೀವಂತ ಎಂಬುದು ಸಂತೋಷ.. ಹೆಜಮಾಡಿ ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಮೂಲಕ ಹತ್ತು ಸಮಸ್ತರನ್ನು ಸೇರಿಸಿ ವರ್ಷಂಪ್ರತಿಯಂತೆ ಹೆಜಮಾಡಿ ಆಲಡೆ ಜಾತ್ರೆಯ ಮರುದಿನ ಮಾಯಿ ಹುಣ್ಣುಮೆ ದಿನದಂದ್ದು, ಶ್ರೀದೈವಸ್ಥಾನಕ್ಕೆ ಸಂಬಂಧಿಸಿದ ಮಂದಿ ಸೇರಿ ಹಿರಿಯರು ನಡೆದು ಕೊಂಡು ಬಂದ ಧಾರ್ಮಿಕ ವಿಧಿವಿಧಾನಗಳಂತೆ ಹತ್ತು ಸಮಸ್ತರನ್ನು
ಮೂಡುಬಿದಿರೆ :ಇಲ್ಲಿನ ಲಾವಂತಬೆಟ್ಟು ಪರಿಸರದಲ್ಲಿ ನಾಲ್ಕು ದಶಕಗಳಿಗೂ ಮಿಕ್ಕಿ ಗಣೇಶ್ ಸೈಕಲ್ ವರ್ಕ್ಸ್ ಮೂಲಕ ಜನಾನುರಾಗಿಯಾಗಿದ್ದ ನಾಗೇಶ್ ರಾವ್ ( 85 ವ) ಸೋಮವಾರ ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರ ,ಪುತ್ರಿಯನ್ನು ಅಗಲಿದ್ದಾರೆ. ಎಂಬತ್ತರ ದಶಕದಲ್ಲಿ ಮೂಡುಬಿದಿರೆಯಲ್ಲಿ ಬಾಡಿಗೆ ಸೈಕಲ್ ಗಳ ಮೊದಲ ವರ್ತಕರಾಗಿ ಬಹಳಷ್ಟು ಎಳೆಯ ಹುಡುಗರಿಗೆ ಅಂದಿನ ದಿನಗಳಲ್ಲಿ ಬಾಡಿಗೆ ಸೈಕಲ್ ಮೂಲಕ ಸೈಕಲ್ ಕಲಿಕೆಗೆ ಅವರು ಕಾರಣರಾಗಿದ್ದರು ಸೈಕಲ್ ರಿಪೇರಿಯ ಜೊತೆಗೆ
ಮಂಗಳೂರು: ಜಗತ್ತಿನ ಯಾವ ನಗರವೂ ಬೀದಿ ವ್ಯಾಪಾರಗಳಿಂದ ಹೊರತಾಗಿಲ್ಲ ಬೀದಿಬದಿ ವ್ಯಾಪಾರವೂ ಸಮಾಜದ ಭಾಗವಾಗಿದ್ದು ಬೀದಿ ವ್ಯಾಪಾರಕ್ಕೆ ಕಾನೂನಿನ ಅಂಗೀಕಾರಾವೂ ಸಿಕ್ಕಿದ ನಂತರ ಅವರ ಹಕ್ಕುಗಳನ್ನು ನಿರಾಕರಿಸುವುದು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಹೇಳಿದರು ಅವರು ಇಂದು ಮಂಗಳೂರು ಮಹಾ ನಗರಪಾಲಿಕೆ ಕಚೇರಿ ಎದುರು ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆಯನ್ನು ಉದ್ದೇಶಿಸಿ
ಸ್ಕೂಟರ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸ್ಧಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಮೂಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ನಡೆದಿದೆ. ಮೃತ ದಂಪತಿಗಳನ್ನು ತೀರ್ಥಹಳ್ಳಿ ಕೋಳಿ ಕಾಲು ಗುಡ್ಡೆ ನಿವಾಸಿಗಳಾದ ಅಕ್ಬರ್ ಭಾಷಾ (61) ವರ್ಷ ಹಾಗೂ ಖತಿಜಾ ಬಿ (46 ವರ್ಷ ) ಎಂದು ಗುರುತಿಸಲಾಗಿದೆ. ಮಂಗಳೂರಿನ ಪಾಸ್‌ಪೋರ್ಟ್ ಕಛೇರಿಗೆ ಪಾಸ್‌ಪೋರ್ಟ್ ಮಾಡಿಸಲೆಂದು ಮೃತ ದಂಪತಿಗಳು ಮುಂಜಾನೆ ತಮ್ಮ ಸ್ಕೂಟರಿನಲ್ಲಿ
ಮಂಗಳೂರಿನ ಬಲ್ಮಠದಲ್ಲಿರುವ ಸಿ.ಎಸ್.ಐ ,ಕೆ.ಎಸ್.ಡಿ ಸಭಾಪ್ರಾಂತ ಕಛೇರಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಷಪರ ಕಾರ್ಯದರ್ಶಿಯಾಗಿ ಉದ್ಯೋಗದಲ್ಲಿರುವ ಶ್ರೀಮತಿ ರೇಶ್ಮಾ ಸೋನ್ಸ್ ಎಂಬವರು ತನಗೆ ಕಳೆದ 9 ತಿಂಗಳಿಂದ ದೈಹಿಕ , ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಪರಶುರಾಮ್ ಹಾಗೂ ಸ್ಟಾನ್ಲಿ ಅವರ ಸಮ್ಮುಖದಲ್ಲಿ ಠಾಣೆಗೆ ಬಂದು ರೇಶ್ಮಾ ಅವರು ದೂರು ನೀಡಿದ್ದಾರೆ.
ಸುರತ್ಕಲ್: ಪೋಲೀಸ್ ಠಾಣಾ ವ್ಯಾಪ್ತಿಯ ಎನ್ ಐಟಿಕೆ ಟೋಲ್ ಗೇಟ್ ಬಳಿ ತಡರಾತ್ರಿ 1 ಗಂಟೆಯ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದ್ದು ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಮಡಿಕೇರಿ ಸೋಮವಾರಪೇಟೆ ಬಿಟಿ ಕಟ್ಟೆ ಮೂಲದ ಶಶಾಂಕ್(21) ಎಂದು ಗುರುತಿಸಲಾಗಿದೆ. ಶಶಾಂಕ್ ತನ್ನ ಸ್ನೇಹಿತನ ಜೊತೆ ಹಿಂಬದಿ ಸವಾರನಾಗಿ ಎನ್ ಎಸ್ 200 ಬೈಕ್ ನಲ್ಲಿ ರಾತ್ರಿ 1 ಗಂಟೆಯ ಸುಮಾರಿಗೆ ಸುರತ್ಕಲ್ ಕಡೆಯಿಂದ ಮುಕ್ಕ ಕಡೆಗೆ ಹೋಗುತ್ತಿದ್ದಾಗ




























