ಶಿರ್ವ : ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸುಮಾರು 53 ವರ್ಷಗಳಿಂದ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದ ದೇವಾಡಿಗ ಸಮಾಜದ ಹಿರಿಯ ಮುಂದಾಳು,ನಾಸಿಕ್ ನ ಶಾರದಾ ಹೋಟೆಲ್ ನ ಮಾಲಕ ಕುತ್ಯಾರು ಕೋರ್ದೊಟ್ಟು ಸೋಮಪ್ಪ ಬಾಬು ದೇವಾಡಿಗ (94) ಅವರು ಅ. 24 ರಂದು ನಾಸಿಕ್ ಜಿಲ್ಲೆಯ ದೇವಲಾಲಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ,ನಾಲ್ವರು ಪುತ್ರರು ಮತ್ತು
ಆ್ಯಂಕರ್ : ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ವತಿಯಿಂದ ದೀಪದಿಂದ ದೀಪ ಹಚ್ಚುವ ಮೂಲಕ ಊರಿನ ಸಮಸ್ತ ನಾಗರಿಕರ ಜೊತೆಗೂಡಿ 3ನೇ ವರ್ಷz ಬೆಳಕಿನ ಹಬ್ಬವನ್ನು ಸ್ವರಾಜ್ಯ ಮೈದಾನದ ಚಿಣ್ಣರ ಉದ್ಯಾನವನದಲಿ ಸಂಭ್ರಮಿಸಲಾಯಿತು. ಉತ್ಸವವನ್ನು ವಾರ್ಡ್ ಸದಸ್ಯ ರಾಜೇಶ್ ನಾಯ್ಕ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು. ಇದೇವೇಳೆ ಸತ್ಯಶ್ರೀ ಭಜನಾ ಮಂಡಳಿ ಪಳಕಳ ಪುತ್ತಿಗೆ ಇವರ ವತಿಯಿಂದ ಕುಣಿತ ಭಜನೆ ನಡೆಯಿತು. ಸಿಹಿ
ಪುತ್ತೂರು: ಸುಮಾರು ರೂ. 30ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಚೆನ್ನಾವರ ಮುಹಿಯುದ್ದಿನ್ ಜುಮಾ ಮಸೀದಿಯ ಖಿದ್ಮತುಲ್ ಇಸ್ಮಾಂ ಜಮಾಅತ್ ಕಮಿಟಿಗೊಳಪಟ್ಟ ಸಿರಾಜುಲ್ ಉಲೂಂ ಮದ್ರಸದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಅ. 27ರಂದು ನಡೆಯಲಿದೆ ಎಂದು ಮಸೀದಿ ಕಮಿಟಿ ಅಧ್ಯಕ್ಷ ಶಾಫಿ ಚೆನ್ನಾರ್ ತಿಳಿಸಿದ್ದಾರೆ. ಅವರು ಮಂಗಳವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನೂತನ ಮದ್ರಸ ಕಟ್ಟಡವನ್ನು ಸಯ್ಯದ್ ಬರ‍್ರುಸ್ಸಾದಾತ್ ಇಬ್ರಾಹಿಂ
ಮಂಗಳೂರಿನ ಬೀಬಿಲಚ್ಚಿಲ್‍ನ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಅಕ್ಟೋಬರ್ 17ರಿಂದ ಜನವರಿ 31ರತನಕ 108 ದಿನದ ಸಂಧ್ಯಾ ಭಜನಾ ಸಂಕೀರ್ತನ ನಡೆಯುತ್ತಿದೆ.8ನೇ ದಿನದಂದು ಮುಲ್ಲಕಾಡು ಕೊಂಚಾಡಿಯ ಶ್ರೀ ಅಯ್ಯಪ್ಪ ಭಜನಾ ಮಂದಿರ ವತಿಯಿಂದ ಭಜನಾ ಸಂಕೀರ್ತನ ನಡೆಯಿತು. ಮಂಗಳೂರಿನ ಹಚ್ಚ ಹರಿಸಿನ ತಪ್ಪಲಿನಲ್ಲಿರುವ ಬೀಬಿಲಚ್ಚಿಲ್ ನ ಅಧ್ಯಪಾಡಿಯ ಶ್ರೀದುರ್ಗಾಪರಮೇಶ್ವರಿ
ಪುತ್ತೂರು : ಸುರತ್ಕಲ್ ಟೋಲ್‌ಗೇಟ್ ತೆರವು ಹೊರಾಟದಲ್ಲಿ ಮುಂಚೂಣಿಯಲ್ಲಿದ್ದ ಸುರತ್ಕಲ್‌ನ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿರವರನ್ನು ಪೊಲೀಸರು ವಶಕ್ಕೆ ಪಡೆಯುವ ಸಂದರ್ಭದ ವೀಡಿಯೋ, ಫೋಟೋಗಳ ಮಾಧ್ಯಮ ತುಣುಕುಗಳನ್ನು ಪೇಸ್‌ಬುಕ್‌ನಲ್ಲಿ ಶ್ಯಾಮ ಸುದರ್ಶನ ಭಟ್ ಎಂಬವರು ಲೈಂಗಿಕ ಸಂಜೆಗಳ ಭಾಷೆಯನ್ನು ಬಳಸಿ ಪ್ರತಿಭಾ ಕುಳಾಯಿಯವರನ್ನು ನಿಂದಿಸಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಸಮಾನವಾಗಿರುವ ಈ ರೀತಿಯ ಬಹಿರಂಗ ದಾಳಿ ಮಹಿಳಾ ಸಮುದಾಯಕ್ಕೆ ಮಾಡಿದ
ಕೊಚ್ಚಿ : ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ ಕೇರಳದ ತೈಕುಡಂ ಬ್ರಿಗೇಡ್ ಸಂಸ್ಥೆ ಮುಂದಾಗಿದೆ. ಮಲಯಾಳಂ ‘ನವರಸಂ’ ಹಾಡು ಹೋಲುವಂತೆ ‘ವರಾಹ ರೂಪಂ’ ಹಾಡಿನ ಸಾಮ್ಯತೆ ಇದೆ. 5 ವರ್ಷಗಳ ಹಿಂದೆ ‘ನವರಸಂ’ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಅದರ ಟ್ಯೂನ್ ಕಾಪಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಕಾಪಿ ರೈಟ್ ಉಲ್ಲಂಘನೆಯಾಗಿದ್ದು, ‘ಕಾಂತಾರ’ ಚಿತ್ರತಂಡದ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ತೈಕುಡಂ ಬ್ರಿಗೇಡ್ ಸಂಸ್ಥೆ
ಮಂಚಿ ಗ್ರಾಮದ ಮಣ್ಣಗುಳಿ ನಿವಾಸಿ ರತಿ ಕುಲಾಲ್ ಅವರ ಮಗಳು ಭವ್ಯಾ (20) ಮೃತಪಟ್ಟ ವಿದ್ಯಾರ್ಥಿನಿ. ವಿದ್ಯಾರ್ಥಿನಿಯು ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೆಲವು ದಿನಗಳ ಹಿಂದೆ ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ವೈದ್ಯರ ಬಳಿ ಪರೀಕ್ಷೆ ಮಾಡಿಸಿ ಔಷಧ ಪಡೆದುಕೊಂಡಿದ್ದರು.ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಇಂಗ್ಲೆಂಡ್: ಬ್ರಿಟನ್’ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಮಾಜಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಅವರಿಗೆ 193 ಸಂಸದರ ಬೆಂಬಲ ಲಭಿಸಿದ್ದು, ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರಿಗೆ 26 ಸಂಸದರ ಬೆಂಬಲ ದೊರೆತಿದ್ದವು. ಬ್ರಿಟನ್’ನಲ್ಲಿ ತಲೆದೋರಿದ್ದ ರಾಜಕೀಯ ಬಿಕ್ಕಟ್ಟಿನ ಮಧ್ಯೆ 45 ದಿನಗಳ ಹಿಂದೆ ಪ್ರಧಾನಿ ಹುದ್ದೆಗೇರಿದ ಲಿಝ್ ಟ್ರಸ್ ಅವರು ದಿಢೀರ್ ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದೆಗೆ ಕಳೆದ ವಾರ
ಕಾರ್ಗಿಲ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕಾರ್ಗಿಲ್ ನಲ್ಲಿ ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಕಾರ್ಗಿಲ್‌ಗೆ ಆಗಮಿಸಿದ್ದಾರೆ. ಇನ್ನು ಮೋದಿಯರವರು 2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಉತ್ತರಾಖಂಡ, ಹಿಮಾಚಲ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳಂತಹ ರಾಜ್ಯಗಳಲ್ಲಿ ದೀಪಾವಳಿಯಂದು
ಇತ್ತೀಚೆಗೆ ಪುತ್ತೂರಿನ ಕಾಣಿಯೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯ ಸೇರಿದ ಇಬ್ಬರು ವ್ಯಾಪಾರಕ್ಕೆ ಹೋದಾಗ ಅವರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿದ್ದಾರೆ. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ಕಾನೂನಿನ ಸಂಪರ‍್ಣ ವಿಫಲತೆಯನ್ನು ನಾನು ಖಂಡಿಸುತ್ತೇನೆ. ಯುವಕರು ತಮ್ಮ ಹೊಟ್ಟೆಪಾಡಿಗಾಗಿ ಹಳ್ಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದಾರೆ.

























