Home Posts tagged #v4newskarnataka (Page 121)

ಕೋಟೇಶ್ವರ ಗ್ರಾ.ಪಂ. ಮುಂಭಾಗದ ನಿರುಪಯುಕ್ತ ಬೃಹತ್ ಟ್ಯಾಂಕ್ ತೆರವು

ಕುಂದಾಪುರ : ಕಳೆದ ಹದಿನೈದು ವರ್ಷಗಳಿಂದ ನಿರುಪಯುಕ್ತವಾಗಿದ್ದ ನೀರಿನ ಬೃಹತ್ ಟ್ಯಾಂಕ್ ತೆರವುಗೊಳಿಸುವ ಕಾರ್ಯಾಚರಣೆ ಕೋಟೇಶ್ವರ ಗ್ರಾಪಂ ವತಿಯಿಂದ ವಿವಿಧ ಇಲಾಖೆಗಳ ಸಹಕಾರದಲ್ಲಿ ಮಂಗಳವಾರ ನಡೆಯಿತು. ಸತತ 9 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದಾಗಿ ಟ್ಯಾಂಕ್ ನೆಲಕ್ಕುರುಳಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.ಈ ಬೃಹತ್ ನೀರಿನ ಟ್ಯಾಂಕ್ ಇದ್ದು,

ಬೆಳ್ಳಾರೆ; ಯುವತಿಗೆ ಲೈಂಗಿಕ ಕಿರುಕುಳ ಆರೋಪ; ವ್ಯಕ್ತಿಯ ಬಂಧನ

ಬೆಳ್ಳಾರೆ :ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಕಡಬ ತಾಲೂಕಿನ ಎಡಮಂಗಲದಲ್ಲಿ ನಡೆದಿದೆ.ಕಡಬ ತಾಲೂಕಿನ ಎಡಮಂಗಲ ಗ್ರಾಮದ ಪರಿಶಿಷ್ಟ ಜಾತಿಯ ಯುವತಿಯೊಬ್ಬಳಿಗೆ ನೆರಮನೆಯ ಯುವಕ ಗೋಪಾಲಕೃಷ್ಣ ಎಂಬವನು ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು . ಅದರಂತೆ ಬೆಳ್ಳಾರೆ ಠಾಣೆ ಯಲ್ಲಿ ಯುವತಿಯ ಮನೆಯವರು ನೀಡಿರುವ ದೂರಿನ ಅನ್ವಯ ಲೈಂಗಿಕ ದೌರ್ಜನ್ಯ ಅಟ್ರಾಸಿಟಿ ಕೇಸು ನೀಡಿದ್ದು ಪ್ರಕರಣ ದಾಖಲಾಗಿದ್ದು, ಬೆಳ್ಳಾರೆ

ಅಮೃತ ನಗರೋತ್ಥಾನ ಯೋಜನೆ : 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಯ ಅಂದಾಜು ಪಟ್ಟಿ

ಪುತ್ತೂರು: ಅಮೃತ ನಗರೋತ್ಥಾನ ಯೋಜನೆಯಲ್ಲಿ ಈಗಾಗಲೇ ರೂ. 15 ಕೋಟಿ ಅಭಿವೃದ್ಧಿ ಯೋಜನೆಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಉಳಿಕೆ 10 ಕೋಟಿಗೆ ಶೀಘ್ರ ಅಂದಾಜು ಪಟ್ಟಿ ತಯಾರಿಸಲಾಗುವುದು ಎಂದು ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ತಿಳಿಸಿದ್ದಾರೆ. ನಗರಸಭೆ ಸಾಮಾನ್ಯ ಸಭೆಯು ಅಧ್ಯಕ್ಷ ಕೆ. ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ನಡೆಯಿತು. ಹಾರಾಡಿ -ರೈಲ್ವೇ ನಿಲ್ದಾಣ ರಸ್ತೆಯನ್ನು 82 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಜಿಲ್ಲಾಧಿಕಾರಿಯವರ

ಸುಳ್ಯ : ಅನಾಥ ಶವ ದಹನ

ಆರಂತೋಡು ಅಡ್ಡಕ್ಕ ಎಂಬಲ್ಲಿ ಮಹಿಳೆ ಯೊಬ್ಬರು ಸುಮಾರು 10 ದಿನದ ಹಿಂದೆ ಮೃತಾರಾಗಿದ್ದು ಕೊಳೆತ ಸ್ಥಿತಿ ಯಲ್ಲಿ ಪತ್ತೆ ಯಾಗಿದ್ದು ವ್ಯಕ್ತಿ ಯೊಬ್ಬರು ನೋಡಿ ವಿಪತ್ತು ನಿರ್ವಹಣ ಘಟಕ ಸದಸ್ಯರ ಗಮನಕೆ ತಂದಾಗ ತಕ್ಷಣ ಸ್ಪಂದಿಸಿ ವಿಪತ್ತು ನಿರ್ವಹಣ ಸದಸ್ಯ ಅಬ್ದುಲ್ ರಜಾಕ್ ಮತ್ತು ಸದಸ್ಯರು ಸೇರಿ ತಮ್ಮ ಆಂಬುಲೆನ್ಸ್ ನಲ್ಲಿ ಹೋಗಿ ಶವ ತೆಗಿದು ಕೊಂಡು ಸುಳ್ಯ ವಿಮುಕ್ತಿ ಧಾಮಕ್ಕೆ ತಂದು ಸದಸ್ಯರಾದ ಪ್ರಸನ್ನ ರವರ ಪಿಕಪ್ ವಾಹನದಲ್ಲಿ ಸುಮಾರು 200 ಕೆಜಿ ಚಿಪ್ಪಿ ತಂದು

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾಗಿ ನಾರಾಯಣ್ ಸಿ. ಪೆರ್ನೆ ಮರು ಆಯ್ಕೆ

ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ 2022 -23ನೇ ಸಾಲಿನ ಅಧ್ಯಕ್ಷರಾಗಿ ನಾರಾಯಣ್ ಸಿ. ಪೆರ್ನೆ ಮರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಧಾಕ್ರಷ್ಣ ಬಂಟ್ವಾಳ, ಪ್ರಧಾನಕಾರ್ಯದರ್ಶಿಯಾಗಿ ಕೇಶವ ಮಾಸ್ಟರ್, ಕೋಶಾಧಿಕಾರಿಯಾಗಿ ನಾಗೇಶ ಬಾಳೆಹಿತ್ಲು, ಜತೆಕಾರ್ಯದರ್ಶಿಯಾಗಿ ಜಯಗಣೇಶ್, ಮೀನಾಕ್ಷಿ ಪದ್ಮನಾಭ, ಸಂಘಟನಾಕಾರ್ಯದರ್ಶಿ ಸತೀಶ್ ಸಂಪಾಜೆ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ , ದಾಮೋದರ ಏರ್ಯ, ಯೋಗೀಶ್ ಬಂಗೇರ, ಮನೋಹರ ನೇರಂಬೋಳು, ದಯಾನಂದ

ದೇಶ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ಮೇಜರ್ ವಿಜಯ್‍ಚಂದ್ರ

ಮಂಗಳೂರು: ದೇಶ ಸೇವೆ ಸಲ್ಲಿಸಿ ಊರಿಗೆ ಬಂದ ಯೋಧ ಮೇಜರ್ ವಿಜಯ್ ಚಂದ್ರ ಅವರಿಗೆ ಅದ್ದೂರಿ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮ ಮಂಗಳೂರಿನ ಪಂಪ್ವೆಲ್ ಬಳಿ ನೆರವೇರಿತು. ಕಳೆದ 12 ವರ್ಷಗಳಿಂದ ದೇಶ ಸೇವೆಯಲ್ಲಿ ನಿರತರಾಗಿದ್ದ ಯೋಧ ತನ್ನ ತಾಯಿ ನಾಡಿಗೆ ಮರಳಿದ ವೇಳೆ ಊರಿನ ಬಂಧುಗಳಿಂದ ಅದ್ದೂರಿ ಸ್ವಾಗತದ ಮೂಲಕ ಪಂಪ್ವೆಲ್ ನಿಂದ ಬಜಾಲ್ ವೀರನಗರದ ವರೆಗೆ ಮೆರವಣಿಗೆ ಸಾಗಿತು.

ಕುಂದಾಪುರ : ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯ ಇಲಾಖೆ

ಬೈಂದೂರು: ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ಕೋಳೂರು ಎಂಬಲ್ಲಿ ಚಿರತೆಯೊಂದು ಆಹಾರ ಹುಡುಕಿಕೊಂಡು ಬಂದು ಮಾಸ್ತಿ ಎಂಬುವವರ ಮನೆಯ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆಯು ನಾಜೂಕಿನಿಂದ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಾವಿಯಿಂದ ಬೋನಿನೊಳಗೆ ಹಾಕಿ ಮೇಲೆಕ್ಕೆತ್ತಿ ರಕ್ಷಿಸಲಾಗಿದೆ. ಇದೀಗ ಗುಡ್ಡಿಹೋಟಲ್, ಜಡ್ಡಾಡಿ ಕೋಣ್ಕಿ, ಬಡಾಕೆರೆ ತಾರೀಬೇರುನಲ್ಲಿ ಮುಂತಾದ ಸ್ಥಳದಲ್ಲಿ ಪದೇ ಪದೇ ಜನ ವಾಸ್ತವ ಸ್ಥಳದಲ್ಲಿ ಚಿರತೆಗಳು ಕಾಣಿಸಿಕೊಂಡು ಜನರು ಭಯ

ಕಡಬ : ರೈಲು ಇಂಜಿನ್ ಢಿಕ್ಕಿಯಾಗಿ ವ್ಯಕ್ತಿ ಗಂಭೀರ

ಕಡಬ: ರೈಲು ನಿಲ್ದಾಣದ ಬಳಿ ಆಕಸ್ಮಿಕವಾಗಿ ರೈಲು ಇಂಜಿನ್ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಡಬದ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ನೆಟ್ಟಣದಲ್ಲಿ ನಡೆದಿದೆ. ಐತ್ತೂರು ಗ್ರಾಮದ ಓಟೆಕಜೆ ನಾಗಣ್ಣ ಗಂಭೀರ ಗಾಯಗೊಂಡ ವ್ಯಕ್ತಿ. ರೈಲು ಇಂಜಿನ್ ಢಿಕ್ಕಿಯಾದ ರಭಸಕ್ಕೆ ಒಂದು ಕಾಲು ಮತ್ತು ಒಂದು ಕೈ ತುಂಡಾಗಿದ್ದು ತುರ್ತು ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮಂಗಳೂರಿನಲ್ಲಿ

ಕಂಬಳ ಕ್ಷೇತ್ರದ ಸಾಧಕ ಬಾಡಪೂಜರಿ ಇನ್ನಿಲ್ಲ

ಮಂಗಳೂರು ಕಂಬಳ ಕ್ಷೇತ್ರದ ಸಾಧಕ ಯಜಮಾನ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಡಬಿದ್ರೆಯ ಇರುವೈಲ್ ಪಾಣಿಲ ಬಾಡಪೂಜಾರಿ ವಯೋಸಹಜ ಕಾಯಿಲೆಯಿಂದ ಇಂದು ಮುಂಜಾನೆ ನಿಧನರಾದರು. ಕಂಬಳ ಕ್ಷೇತ್ರದಲ್ಲಿ ಇವರ ಯಜಮಾನ ನೇತೃತ್ವದಲ್ಲಿ ಕೋಣಗಳು ವಿಶೇಷ ಸಾಧನೆ ಮಾಡಿದ್ದು, ಇವರ ಯಜಾಮಾನಿಕೆಯಲ್ಲಿ ಕಂಬಳದ ಉಸೇನ್ ಬೋಲ್ಟ್, ಖ್ಯಾತಿಯ ಅಶ್ವಥುರ ಶ್ರೀನಿವಾಸ ಗೌಡ ಕಂಬಳದಲ್ಲಿ ವಿಶ್ವದಾಖಲೆ ಮಾಡಿದ್ದರು. ಇರುವೈಲ್ ಪಾಣಿಲ ಬಾಡವೂಜಾರಿ ಪ್ರಗತಿಪರ ಕೃಷಿಕರಾಗಿದ್ದು, 23 ವರ್ಷ ಕಂಬಳ

ಉಡುಪಿ : ಬೈಕ್‍ಗೆ ಲಾರಿ ಢಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಬೈಕ್ಕೊಂದಕ್ಕೆ ಲಾರಿಯೊಂದು ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉದ್ಯಾವರದಲ್ಲಿ ನಡೆದಿದೆ. ಮೃತ ವ್ಯಕ್ತಿ ಕಟಪಾಡಿ ಸರ್ಕಾರಿ ಗುಡ್ಡೆ ಮೂಡಬೆಟ್ಟು ನಿವಾಸಿ ಹೂವಿನ ವ್ಯಾಪಾರಿ ಮಹಮ್ಮದ್ ರಫೀಕ್ ಬಾವ(35), ವಿವಾಹಿತರಾಗಿದ್ದ ಇವರು ಒಂದು ಮಗುವಿನ ತಂದೆ, ಕಟಪಾಡಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಇವರು ದ್ವಿಚಕ್ರ ವಾಹನದಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ ಉದ್ಯಾವರ ತಲುಪುತಿದ್ದಂತೆ, ಕೇರಳದಿಂದ ಮುಂಬೈಗೆ ಬಾಡಿ ಪಿಕ್ಸ್