ಮಂಗಳೂರು: ತನಿಷ್ಕ್ ಜ್ಯುವೆಲ್ಲರ್ಸ್ ವತಿಯಿಂದ ಶಿಕ್ಷಕರ ದಿನಾಚರಣೆ
ಮಂಗಳೂರಿನ ಬಲ್ಮಠ ಸಮೀಪದ ತನಿಷ್ಕ್ ಜ್ಯುವೆಲ್ಲರ್ಸ್ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು.
ಈಗಾಗಲೇ ಚಿನ್ನಾಭರಣ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಮಂಗಳೂರಿನ ತನಿಷ್ಕ್ ಜ್ಯುವೆಲ್ಲರ್ಸ್ ನಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಶಿಕ್ಷಕಿಯರು ದೀಪಬೆಳಗಿಸಿ, ಕೇಕ್ ಕತ್ತರಿಸಿ ಉದ್ಘಾಟಿಸಿದರು. ಇದೇ ವೇಳೆ ಜ್ಯುವೆಲ್ಲರ್‍ನಲ್ಲಿ ಗ್ರಾಹಕರಿಗಾಗಿ ಹಮ್ಮಿಕೊಂಡ ವಿಶೇಷ ಆಫರ್ ಅನ್ನು ಶಿಕ್ಷಕರು ಲಾಂಚ್ ಮಾಡಿದರು.
ಶಿಕ್ಷಕಿಯರಾದ ಅನಿತಾ ಸಿಕ್ವೇರಾ, ಎಸೆರಸ್ಟ್ ಕ್ರಾಸ್ತಾ, ವೀಣಾ ಗಣೇಶ್, ಮಾರ್ಗರೇಟ್ ಡಿಸೋಜಾ ಅವರು, ಇಲ್ಲಿನ ಚಿನ್ನಾಭರಣ ಹಾಗೂ ಸಿಬ್ಬಂದಿಗಳು ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಮಾತ್ರವಲ್ಲದೇ ಶಿಕ್ಷಕರನ್ನು ಗೌರವಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಫ್ಲೋರ್ ಮ್ಯಾನೇಜರ್ ಸುಬ್ರಹ್ಮಣ್ಯ ಎ.ಎಸ್ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ವೇಳೆ ತನಿಷ್ಕ್ ಜ್ಯುವೆಲ್ಲರ್ಸ್‍ನ ಪ್ರಾಂಚೈಸಿ ಖಾದರ್ ಹಾರೂನ್, ಸಿಬ್ಬಂದಿ ವರ್ಗ ಹಾಗೂ ವಿವಿಧ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.