ಮೂಡುಬಿದಿರೆ : ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸ್ಪಂದಿಸಿದ ನೇತಾಜಿ ಬ್ರಿಗೇಡ್
ಮೂಡುಬಿದಿರೆ : ನೇತಾಜಿ ಬ್ರಿಗೇಡ್ ಮೂಡುಬಿದಿರೆ ವತಿಯಿಂದ ಮೂಡುಬಿದಿರೆಯ “ಕೋಟಿ – ಚೆನ್ನಯ್ಯ” ಜೋಡುಕರೆ ಕಂಬಳದಲ್ಲಿ ನಡೆದ 14ನೇ ಸೇವಾ ಯೋಜನೆಯಲ್ಲಿ ಸಂಗ್ರಹವಾದ ರೂ.1,34,894 ಧನವನ್ನು ಆಯ್ದ 5 ಮಂದಿ ಫಲಾನುಭವಿಗಳಿಗೆ ಸ್ವರಾಜ್ಯ ಮೈದಾನದ ಬಳಿ ಇರುವ ಶ್ರೀ ಆದಿಶಕ್ತಿ ಮಹಾಮ್ಮಾಯಿ ದೇವಸ್ಥಾನ ಮಾರಿಗುಡಿ ಬಳಿ ಹಸ್ತಾಂತರಿಸಲಾಯಿತು.
ಕಣ್ಣಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಕಿನ್ನಿಗೋಳಿ ತಾಳಿಪಾಡಿಯ 6 ತಿಂಗಳ ಮಗು ಪೂಜಿತಾ ಶೆಟ್ಟಿಗಾರ್, ಗಾಂಧಿ ನಗರದ ಕಡದಬೆಟ್ಟು ನಿವಾಸಿ ಹರಿಶ್ಚಂದ್ರ ಶೆಟ್ಟಿ ಅವರ ಕಾಲಿನ ನರದ ಚಿಕಿತ್ಸೆಗಾಗಿ, ಬ್ರೈನ್ ಸ್ಟ್ರೋಕ್ ಕಾಯಿಲೆಯಿಂದ ಬಳಲುತ್ತಿರುವ ಕಾರ್ಕಳದ ನಿಟ್ಟೆ ನಿವಾಸಿ ದಿನೇಶ್ ಅವರ ಚಿಕಿತ್ಸೆಗೆ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮೂಡುಬಿದಿರೆ ಒಂಟಿಕಟ್ಟೆ ನಿವಾಸಿ ಮೋಹನ್ ದೇವಾಡಿಗ ಮತ್ತು ಮೂಡುಬಿದಿರೆ ಕೊಡಂಗಲ್ಲು ನಿವಾಸಿ ಪದ್ಮಾವತಿ ಚಿಕಿತ್ಸೆಗೆ ಸಹಾಯಹಸ್ತ ನೀಡಲಾಯಿತು.
ನೇತಾಜಿ ಬ್ರಿಗೇಡ್ ನ ಸಂಚಾಲಕ ರಾಹುಲ್ ಕುಲಾಲ್ ಪಧಾಧಿಕಾರಿಗಳು ಹಾಗೂ ಸದಸ್ಯರುಗಳು ಈ ಸಂದರ್ಭದಲ್ಲಿದ್ದರು.