ಧಾರ್ಮಿಕ ಕ್ಷೇತ್ರದಿಂದ ಧರ್ಮದ ಜಾಗೃತಿ ನಡೆಯಲಿ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಧಾರ್ಮಿಕ ಕ್ಷೇತ್ರಗಳ ಮೂಲಕ ಧರ್ಮದ ಜಾಗೃತಿ ನಡೆಯಬೇಕು, ಭಕ್ತಿಯ ಆಲಯಗಳಲ್ಲಿ ಭಕ್ತರ ನಿಸ್ವಾರ್ಥ ಸೇವಾ ಸಂಪನ್ನತೆ ಹೆಚ್ಚಾದಾಗ ಕ್ಷೇತ್ರ ಬೆಳಗುತ್ತದೆ. ನಮ್ಮ ಹಿಂದೂ ಸಂಸ್ಕೃತಿ ಪ್ರತೀ ಮನೆಯಿಂದ ಬೆಳಗಿದಲ್ಲಿ ಅದು ಜಗತ್ತಿಗೆ ಬೆಳಕಾಗುತ್ತದೆ ಎಂದು ಉಡುಪಿ ಅಧೋಕ್ಷಜ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ. ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠೆ ಬ್ರಹ್ಮಕುಂಭಾಷೇಕ ಮತ್ತು ನಾಗಮಂಡಲೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ವಹಿಸಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಡಾ. ಸೋಂದಾ ಭಾಸ್ಕರ ಭಟ್ ಅವರು ಬ್ರಹ್ಮಕಲಶ ಹಾಗೂ ಕುಮಾರಕಲಶವಿಧಿ ಎಂಬ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಶಿಬರೂರು ಗೋಪಾಲೃಷ್ಣ ತಂತ್ರಿ ಹಾಗೂ ಕಟೀಲು ದೇವಳದ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಹೇರಂಬ ಇಂಡಸ್ಟ್ರೀಸ್‍ನ ಅಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಶಶಿಧರ ಅಡಪ ಬೆಂಗಳೂರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದೇವಳದ ನಿರ್ಮಾಣದಲ್ಲಿ ವಿಶೇಷವಾಗಿ ಸಹಕರಿಸಿದ ಶಾಸಕ ಉಮಾನಾಥ ಎ. ಕೋಟ್ಯಾನ್, ತೋಕೂರು ಗುತ್ತು ಭಾಸ್ಕರ ಶೆಟ್ಟಿ, ಉದ್ಯಮಿ ಗಣೇಶ್ ರಾವ್, ಸದಾಶಿವ ಕುಡ್ವ, ಪಂಜ ಬೈಲಗುತ್ತು ಮಲ್ಲಿಕಾ ಅಶೋಕ್ ಶೆಟ್ಟಿ ದಂಪತಿ, ಹೊಸಮನೆ ಲಿಂಗಪ್ಪ ಶೆಟ್ಟಿ ಮತ್ತು ಗುಣಪಾಲ ಶೆಟ್ಟಿ ಮನೆತನ, ವಿ. ವಿವೇಕ್ ಶೆಟ್ಟಿ ಮುಂಬೈ, ಸುರಪಾಲ ಶೆಟ್ಟಿ ಮತ್ತು ಸಹೋದರರು, ಸಂಪತ್ ಶೆಟ್ಟಿ ತೋಕೂರು ಗುತ್ತು, ಎಂ.ಕೆ. ಮೋಹನ್‍ರಾವ್ ಪಡುಬಿದ್ರಿ ಸಹೋದರರು, ಯಶೋಧಾ ಟಿ. ಪುರುಷೋತ್ತಮ ರಾವ್ ದಂಪತಿ ಅವರನ್ನು ಸಮ್ಮಾನಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಬ್ರಹ್ಮಕಲಶೋತ್ಸವ ಸಮಿತಿಯ ಮುಂಬೈನ ಅಧ್ಯಕ್ಷ ನಾಗೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮಣ್ಣ ದೇವಾಡಿಗ, ಸದಾಶಿವ ಶೆಟ್ಟಿ ಮಾಗಂದಡಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್‍ಕುಮಾರ್ ಹೆಗ್ಡೆ ಸ್ವಾಗತಿಸಿದರು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್ ಪರಿಚಯಿಸಿದರು. ರಾಜೇಶ್ ವಂದಿಸಿದರು, ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು. ಸ್ಕಂದ ಮಂಟಪದಲ್ಲಿ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು