ರಾಜ್ ಬಿ. ಶೆಟ್ಟಿ, ಚೈತ್ರಾ ಆಚಾರ್ ನಟನೆಯ ಟೋಬಿ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ರಾಜ್ಯದೆಲ್ಲೆಡೆ ಟೋಬಿ ಸಿನಿಮಾ ನೋಡಿ ಪ್ರೇಕ್ಷಕರು ಭೇಷ್ ಎನ್ನುತ್ತಿದ್ದಾರೆ.
ತಮ್ಮ ಸಹಜ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿರುವ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ `ಟೋಬಿ' ಚಿತ್ರದ ಫಸ್ಟ್ ಲುಕ್ ನಲ್ಲಿ ಡಿಫರೆಂಟಾಗಿ ಕಾಣಿಸಿಕೊಂಡಿದ್ದರು. ಅದಾಗಲೇ ಸಿನಿಮಾದ ಬಗ್ಗೆ ಪ್ರೇಕ್ಷಕರು ತುಂಬಾ ನಿರೀಕ್ಷೆಯನ್ನಿರಿಸಿದ್ದರು. ಇಂದು ರಾಜ್ಯದ್ಯಾಂತ 175 ಸಿನಿಮಾ ಮಂದಿರಗಳಲ್ಲಿ ಟೋಬಿ ರಿಲೀಸ್ ಆಗಿದೆ. ಮಲ್ಟಿಪ್ಲೆಕ್ಸ್‍ನಲ್ಲೂ ಟೋಬಿಯನ್ನು ನೋಡಬಹುದು.
ಮಾರಿ ರೂಪ ತಾಳಿರುವ ರಾಜ್ ಬಿ ಶೆಟ್ಟಿ ಅವತಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚೈತ್ರಾ ಆಚಾರ್ ಮತ್ತು ಸಂಯುಕ್ತಾ ಬೆಳವಾಡಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಸಿನಿಮಾವನ್ನು ಲೈಟರ್ ಬುದ್ಧ ಫಿಲ್ಮ್‍ನಡಿ ನಿರ್ಮಾಣ ಮಾಡಿದ್ದರೆ, ಸಿನಿಮಾದ ಮೂಲ ಕಥೆಯನ್ನು ಟಿ.ಕೆ ದಯಾನಂದ್ ಬರೆದಿದ್ದಾರೆ. ರಾಜ್ ಬಿ. ಶೆಟ್ಟಿ ನಟನೆಯ ಜೊತೆ ನಿರ್ದೇಶನ ಕೂಡ ಮಾಡಿದ್ದಾರೆ.