‘ತಾರೆ ಜಮೀನ್ ಪರ್’ ಚಿತ್ರಕ್ಕೆ ಅನಿಮೇಷನ್ ಕೊಡುಗೆ ನೀಡಿದ್ದ ಧೀಮಂತ್ ವ್ಯಾಸ್ ಹಾಗೂ ಪುತ್ರಿ ಕಾವ್ಯ ವ್ಯಾಸ್ ಅವರ ಚಿತ್ರಕಲಾ ಪ್ರದರ್ಶನ
ಬೆಂಗಳೂರಿನಲ್ಲಿ ತಂದೆ-ಮಗಳ ಬಾಂಧವ್ಯದ ಅನಾವರಣ: ‘ತಾರೆ ಜಮೀನ್ ಪರ್’ ಚಿತ್ರಕ್ಕೆ ಅನಿಮೇಷನ್ ಕೊಡುಗೆ ನೀಡಿದ್ದ ಧೀಮಂತ್ ವ್ಯಾಸ್ ಹಾಗೂ ಪುತ್ರಿ ಕಾವ್ಯ ವ್ಯಾಸ್ ಅವರ ಚಿತ್ರಕಲಾ ಪ್ರದರ್ಶನ
ಮೂರು ಗ್ರಾಮಿ ಪ್ರಶಸ್ತಿ ವಿಜೇತ, ಸಂಯೋಜಕ, ಪರಿಸರವಾದಿ ರಿಕಿ ಕೇಜ್, ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್, ಅಮೀರ್ ಖಾನ್, ರಾಕೇಶ್ ಓಂಪ್ರಕಾಶ್ ಮೆಹ್ರಾ, ನಿರ್ದೇಶಕ ಶೇಖರ್ ಕಪೂರ್, ನಟಿ ನಂದಿತಾ ದಾಸ್, ಖ್ಯಾತ ಚಿತ್ರಕಲಾವಿದ ಸಮೀರ್ ಮೊಂಡಲ್ ಮುಂತಾದವರ ಪ್ರಶಂಸನೆಗೆ ಪಾತ್ರವಾದ ಚಿತ್ರಕಲಾ ಪ್ರದರ್ಶನ ಇದೀಗ ಬೆಂಗಳೂರಿನಲ್ಲಿ
ಬೆಂಗಳೂರು : ಸೃಜನಶೀಲತೆ ಮತ್ತು ಭಾವನೆಗಳ ಸಮ್ಮಿಲನದ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಗಲು ಸಿದ್ಧರಾಗಿರಿ. ಖ್ಯಾತ ಕಲಾವಿದ ಧೀಮಂತ್ ವ್ಯಾಸ್ ಮತ್ತು ಅವರ ಪ್ರತಿಭಾನ್ವಿತ ಪುತ್ರಿ ಕಾವ್ಯ ವ್ಯಾಸ್ ಬೆಂಗಳೂರಿನಲ್ಲಿ ತಮ್ಮ ಜಂಟಿ ಚಿತ್ರಕಲೆಯ ಪ್ರದರ್ಶನ ನೀಡಲಿದ್ದಾರೆ. ತಂದೆ-ಮಗಳ ಸುಮಧುರ ಹಾಗೂ ಸದೃಢ ಬಾಂಧವ್ಯವನ್ನು ಸಂಭ್ರಮಿಸುವ ಈ ದೃಶ್ಯಕಾವ್ಯದ ಅನುಭವ ಪಡೆಯಲು ಕಲಾಸಕ್ತರು, ಅಭಿಜ್ಞರು ಹಾಗೂ ಸಾರ್ವಜನಿಕರನ್ನು ಆಹ್ವಾನಿಸುತ್ತಿದ್ದಾರೆ.
ತಂದೆ-ಮಗಳ ಜೋಡಿ ಚಿತ್ರಕಲೆ ಪ್ರದರ್ಶನವು ಸಾಂಪ್ರದಾಯಿಕ ಗಡಿಗಳನ್ನು ಮೀರಿದ ಮತ್ತು ಕುಟುಂಬ ಮತ್ತು ಕಲಾತ್ಮಕ ಅಭಿವ್ಯಕ್ತಿಯ ನಡುವಿನ ಆಳವಾದ ಸಂಪರ್ಕವನ್ನು ಪ್ರದರ್ಶಿಸುವ ಒಂದು ಅನನ್ಯ ಪ್ರದರ್ಶನವಾಗಿದೆ. ಧೀಮಂತ್ ವ್ಯಾಸ್, ತನ್ನ ಗಮನ ಸೆಳೆಯುವ ಮತ್ತು ಚಿಂತನ-ಪ್ರಚೋದಕ ಕೃತಿಗಳಿಗೆ ಹೆಸರುವಾಸಿಯಾದ ಓರ್ವ ಅನುಭವಿ ಕಲಾವಿದರಾಗಿದ್ದಾರೆ. ಅವರು ಇದರಲ್ಲಿ ತಮ್ಮ ಮಗಳು ಕಾವ್ಯಾ ವ್ಯಾಸ್‌ನೊಂದಿಗೆ ಕೈಜೋಡಿಸುತ್ತಾರೆ. ಇವರು ಹೊಸ ದೃಷ್ಟಿಕೋನದೊಂದಿಗೆ ಚಿತ್ರದ ಕ್ಯಾನ್ವಾಸ್‌ಗೆ ಹೊಸ ಜೀವ ಒದಗಿಸಬಲ್ಲ ಉದಯೋನ್ಮುಖ ಪ್ರತಿಭೆಯಾಗಿದ್ದಾರೆ.
ಈ ಪ್ರದರ್ಶನವು ವಿವಿಧ ಶೈಲಿ, ವಿಷಯ ಮತ್ತು ಭಾವನೆಗಳನ್ನು ಬಿಂಬಿಸುವ ಕಲಾಕೃತಿಗಳ ವೈವಿಧ್ಯಮಯ ಸಂಗ್ರಹ ಹೊಂದಿರಲಿದೆ. ಧೀಮಂತ್ ಅವರು ಸಂಕೀರ್ಣ ಮತ್ತು ಆತ್ಮವನ್ನು ಕಲಕುವ ಸಂಯೋಜನೆಗಳಿಂದ ಆರಂಭಿಸಿ ಕಾವ್ಯ ಅವರ ರೋಮಾಂಚಕ ಮತ್ತು ಸಮಕಾಲೀನ ರಚನೆಗಳವರೆಗೆ, ಪ್ರೇಕ್ಷಕರು ವೈಯಕ್ತಿಕ ತೇಜಸ್ಸು ಮತ್ತು ಕಲೆ ಕುರಿತು ಅವರ ಬದ್ಧತೆಯ ಅನುಭವ ಪಡೆಯಲಿದ್ದಾರೆ. ತಂದೆ-ಮಗಳು ಜೋಡಿಯ ಚಿತ್ರಕಲೆ ಪ್ರದರ್ಶನವು ಆಗಸ್ಟ್ 26, 2023 ರಿಂದ ಆಗಸ್ಟ್ 31, 2023 ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತು, ಆರ್ಟ್ ಗ್ಯಾಲರಿ # 4, ಬೆಂಗಳೂರು ನಲ್ಲಿ ತೆರೆದಿರುತ್ತದೆ. ಮರೆಯದೆ ಪ್ರದರ್ಶನಕ್ಕೆ ಭೇಟಿ ನೀಡಲು ಹಾಗೂ ಪ್ರದರ್ಶನದಲ್ಲಿರುವ ಕಲಾತ್ಮಕತೆ ಮತ್ತು ಪ್ರೀತಿಯನ್ನು ಅನುಭವಿಸಲು ಸಿದ್ಧರಾಗಿರಿ.
ಪ್ರದರ್ಶನದ ಕುರಿತು ಮಾತನಾಡಿದ ಮೇವರಿಕ್ ಕಲಾವಿದ ದೀಮಂತ್, “ನನಗೆ ಕಲೆಯೆಂಬುದು ಎಂದಿಗೂ ಭಾವನೆಗಳು, ಆಲೋಚನೆಗಳು ಮತ್ತು ಪದಗಳನ್ನು ಮೀರಿದ ಕಥೆಗಳನ್ನು ಸಂವಹನ ಮಾಡುವ ಮಾರ್ಗವಾಗಿದೆ. ಈ ಬಾರಿ ನನ್ನ ಪುತ್ರಿ ಕಾವ್ಯಾಳ ಸಹಯೋಗದಲ್ಲಿ ಕೆಲಸ ಮಾಡುವುದು ಅತ್ಯುತ್ತಮ ಅನುಭವವಾಗಿದೆ. ಇದು ಪೀಳಿಗೆಗಳ ನಡುವಿನ ಅಂತರವನ್ನು ಅರಿಯಲು ಹಾಗೂ ಅದರ ನಡುವೆ ನಮ್ಮ ಕಲೆಯೆಂಬ ಸಾಮಾನ್ಯ ಭಾಷೆಯ ಮೂಲಕ ಸೇತುವೆ ನಿರ್ಮಿಸಲು ನಮಗೆ ಅವಕಾಶ ಮಾಡಿಕೊಟ್ಟಿದೆ.
ಕಾವ್ಯ ಅವರು ಅತಿ ಕಡಿಮೆ ಸಮಯದಲ್ಲೇ ಈ ಕ್ಷೇತ್ರದಲ್ಲಿ ತಮ್ಮ ಹೆಸರು ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾವ್ಯ ವ್ಯಾಸ್ ಅವರು ಮಾತನಾಡಿ “ತಂದೆಯವರೊಂದಿಗೆ ಕೆಲಸ ಮಾಡುವುದು ಒಂದು ದೊಡ್ಡ ಕನಸು ನನಸಾದಂತಹ ಅನುಭವವಾಗಿದೆ. ಅವರ ಮಾರ್ಗದರ್ಶನ ಮತ್ತು ಜ್ಞಾನ ನಮ್ಮ ಕಲಾ ಹಾದಿಗೆ ದಾರಿ ದೀಪವಾಗಿದೆ. ಮತ್ತು ಒಟ್ಟಾಗಿ ನಾವು ಹಲವು ಗುರುತು, ಬೆಳವಣಿಗೆ ಮತ್ತು ಸಂಪರ್ಕದ ಸೌಂದರ್ಯದಂತಹ ವಿಷಯಗಳನ್ನು ಅರಿತಿದ್ದೇವೆ” ಎಂದರು.
ಹಿರಿಯ ಆನಿಮೇಷನ್ ಫಿಲ್ಮ್ ವಿನ್ಯಾಸಕರಾಗಿರುವ ಧೀಮಂತ್ ಅವರು ಆಸ್ಕರ್ ಪ್ರಶಸ್ತಿ ವಿಜೇತ ಅರ್ದಮನ್ ಅನಿಮೇಷನ್ ಲಿಮಿಟೆಡ್ ಯುಕೆ ಸೇರಿದಂತೆ ಹಲವು ಅನಿಮೇಷನ್‌ನಲ್ಲಿ ಕ್ಷೇತ್ರಗಳಲ್ಲಿ ಕೆಲವು ದೊಡ್ಡ ಖ್ಯಾತನಾಮರೊಂದಿಗೆ ಕೆಲಸ ಮಾಡಿದ್ದಾರೆ. ಅವರು ಜನಪ್ರಿಯ ಶಾನ್ ದಿ ಶೀಪ್ ಸರಣಿ ಎರಡು, ಕ್ರಿಯೇಚರ್ ಕಂಫರ್ಟ್ ಸರಣಿ ಮತ್ತು ಪರ್ಪಲ್ & ಬ್ರೌನ್‌ಗೆ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಇವುಗಳನ್ನು ಪ್ರಪಂಚದಾದ್ಯಂತದ ಪ್ರೇಕ್ಷಕರು ಆನಂದಿಸಿದ್ದಾರೆ.
ಧೀಮಂತ್ ಅವರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಹಿಂದಿ ಚಲನಚಿತ್ರ ‘ತಾರೆ ಜಮೀನ್ ಪರ್’ ಚಿತ್ರಕ್ಕೆ ಅನಿಮೇಷನ್ ಕೊಡುಗೆ ನೀಡಿದ್ದಾರೆ. ಅವರು ಬಹುಮುಖ ಅನಿಮೇಷನ್ ಫಿಲ್ಮ್ ಡಿಸೈನರ್ ಆಗಿದ್ದು, ಸ್ಟಾಪ್ ಮೋಷನ್, ಪ್ರಾಯೋಗಿಕ ಅನಿಮೇಷನ್, ಡ್ರಾಯಿಂಗ್, ಪೇಂಟಿಂಗ್‌ಗಳು, ಶಿಲ್ಪಕಲೆ, ಛಾಯಾಗ್ರಹಣ, ಮುದ್ರಣ ತಯಾರಿಕೆ ಮತ್ತು ವಿವರಣೆಗಳಲ್ಲಿ ಜ್ಞಾನ ಮತ್ತು ಕೌಶಲ್ಯ ಹೊಂದಿರುವ ಕಲಾವಿದರಾಗಿದ್ದಾರೆ. ಇವರು ಆರ್ಡ್‌ಮ್ಯಾನ್ ಅನಿಮೇಷನ್‌ಗಳಂತಹ ಅಂತರರಾಷ್ಟ್ರೀಯ ಅನಿಮೇಷನ್ ಸ್ಟುಡಿಯೊಗಳೊಂದಿಗೆ ಸಹಯೋಗದಲ್ಲಿ ಬಾಲಿವುಡ್ ಚಲನಚಿತ್ರಗಳು, ಜಾಹೀರಾತು ಚಲನಚಿತ್ರಗಳು, ಎಡ್‌ಟೆಕ್ ಉದ್ಯಮ ಮತ್ತು ಗೇಮಿಂಗ್‌ನಲ್ಲಿ ಕೆಲಸ ಮಾಡಿದ್ದಾರೆ.. ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಜ್ಯೂರಿ ಸದಸ್ಯರಾಗಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. 2022 ರಲ್ಲಿ, ಭಾರತೀಯ ಅನಿಮೇಷನ್‌ನ ಪಿತಾಮಹ – ದಿವಂಗತ ಪದ್ಮಶ್ರೀ ರಾಮ್ ಮೋಹನ್ ಅವರ ಗೌರವಾರ್ಥವಾಗಿ ಅನಿಮೇಷನ್ ಉದ್ಯಮದಲ್ಲಿನ ಶ್ರೇಷ್ಠತೆಗಾಗಿ ಧೀಮಂತ್ ಅವರು ‘ರಾಮ್ ಮೋಹನ್ ಪ್ರಶಸ್ತಿ’ ಪಡೆದರು.
ಮೂರು ಗ್ರಾಮಿ ಪ್ರಶಸ್ತಿ ವಿಜೇತ, ಸಂಯೋಜಕ, ಪರಿಸರವಾದಿ ರಿಕಿ ಕೇಜ್, ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್, ಅಮೀರ್ ಖಾನ್, ರಾಕೇಶ್ ಓಂಪ್ರಕಾಶ್ ಮೆಹ್ರಾ, ನಿರ್ದೇಶಕ ಶೇಖರ್ ಕಪೂರ್, ನಟಿ ನಂದಿತಾ ದಾಸ್, ಖ್ಯಾತ ಚಿತ್ರಕಲಾವಿದ ಸಮೀರ್ ಮೊಂಡಲ್ ಮುಂತಾದವರು ಧೀಮಂತ್ ಮತ್ತು ಕಾವ್ಯ ತಂದೆ-ಮಗಳ ಜೋಡಿಯ ಚಿತ್ರಕಲೆ ಕೆಲಸವನ್ನು ಶ್ಲಾಘಿಸಿದ್ದಾರೆ.