ಅ.10ರಂದು ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ – ಅನಧಿಕೃತ ಬ್ಯಾನರ್ ಗಳ ತೆರವು
ಶಿವಮೊಗ್ಗದ ಈದ್ ಮಿಲಾದ್ ಗಲಾಟೆ ಬಳಿಕ ಎಚ್ಚೆತ್ತಿರುವ ಉಡುಪಿ ನಗರಸಭೆ, ನಗರ ವ್ಯಾಪ್ತಿಯ ಅನಧಿಕೃತ ಬ್ಯಾನರ್ ಮತ್ತು ಕಟೌಟ್‍ಗಳನ್ನು ತೆರವುಗೊಳಿಸಿದೆ. ಉಡುಪಿಯಲ್ಲಿ ಅಕ್ಟೋಬರ್ ಹತ್ತರಂದು ಹಿಂದೂ ಸಮಾಜೋತ್ಸವ ಆಯೋಜನೆಗೊಂಡಿದ್ದು, ಹಿಂದೂ ಸಮಾಜೋತ್ಸವದ ಎಲ್ಲಾ ಬ್ಯಾನರ್ ಗಳನ್ನೂ ತೆರವುಗೊಳಿಸಲಾಗಿದೆ.
ಉಡುಪಿ ನಗರ ಸುತ್ತಮುತ್ತ ಅಳವಡಿಸಿದ್ದ ಬ್ಯಾನರ್‍ಗಳ ತೆರವು ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಎಸ್ಪಿ ಡಾ. ಅರುಣ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅದೇ ರೀತಿ ವಿಹಿಂಪ ಮತ್ತು ಭಜರಂಗದಳ ಮುಖಂಡರು ಕೂಡ ಎಸ್‍ಪಿಯವರ ಜೊತೆ ಮಾತುಕತೆ ನಡೆಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದೆ. ವಿಹಿಂಪ -ಭಜರಂಗದಳ ಸಮಾಜೋತ್ಸವವನ್ನು ಆಯೋಜನೆ ಮಾಡಿದೆ. ಶಿವಮೊಗ್ಗ ಘಟನೆಯ ನಂತರ ಎಲ್ಲಾ ಬ್ಯಾನರ್‍ಗಳನ್ನು ತೆಗೆದಿದ್ದಾರೆ. ಪೆÇಲೀಸ್ ಇಲಾಖೆ ಸ್ಥಳೀಯ ಆಡಳಿತಕ್ಕೆ ಸೂಚನೆ ಕೊಟ್ಟಿದೆ.ಬ್ಯಾನರ್ ಮತ್ತು ಬಂಟಿಂಗ್ಸ್ ಅಳವಡಿಸಲು ಅವಕಾಶ ಕೊಡಬೇಕು ಎಂದು ಎಸ್‍ಪಿಯಲ್ಲಿ ಮನವಿ ಮಾಡಿದ್ದೇವೆ. ಎಸ್ಪಿ ಡಾ. ಅರುಣ್ ಪಾರದರ್ಶಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.