ಚಂದ್ರಯಾನ 3ರ ಯಶಸ್ವಿಗಾಗಿ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನಿಂದ ಪ್ರಾರ್ಥನೆ
ಭಾರತೀಯರ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಪ್ರಮುಖರಾದ ಎಂ. ಗೋಪಾಲಕೃಷ್ಣ ಭಟ್, ಸಚಿನ್ ಶೆಣೈ, ಡಾ. ಮುರಳೀಕೃಷ್ಣ ರೈ, ಮಹೇಶ ನಿಟಿಲಾಪುರ, ಆಶೋಕ ಕುಂಬ್ಲೆ, ಶ್ರೀಧರ ಶೆಟ್ಟಿಗಾರ್, ದೇವಿಚರಣ್ ರೈ, ತುಷಾರ, ನಾಗರಾಜ ಮೊದಲಾದವರಿದ್ದರು.