ಉಡುಪಿ ಕಾಂಗ್ರೆಸ್ ಪ್ರಚಾರಕ್ಕೆ ಕೈ ಜೋಡಿಸಿದ ಕೃಷ್ಣಮೂರ್ತಿ ಆಚಾರ್ಯ

ಕಾಂಗ್ರೆಸ್‍ಗೆ ತಲೆನೋವಾಗಿದ್ದ ಬಂಡಾಯ ಅಭ್ಯರ್ಥಿ ಇದೀಗ ಕಾಂಗ್ರೆಸ್‍ಗೆ ವಾಪಸ್ ಅಗಿದ್ದಾರೆ. ನಿನ್ನೆ ನಡೆದ ಡಿ.ಕೆ ಶಿವಕುಮಾರ್ ಭಾಗವಹಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮತ್ತೆ ತನ್ನ ಮನೆಯನ್ನು ಸೇರಿಕೊಂಡಿದ್ದಾರೆ. ಟಿಕೆಟ್ ಸಿಗದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಕೃಷ್ಣ ಮೂರ್ತಿ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.ಇದು ಕಾಂಗ್ರೆಸ್ ಗೆ ತಲೆನೋವಾಗಿತ್ತು.
ಹಲವು ಬಾರಿ ಸಂದಾನ ಪ್ರಕ್ರಿಯೆ ನಡೆಸಿದರು ಫಲಪ್ರದವಾಗಿರಲಿಲ್ಲ. ನಿನ್ನೆ ಉಡುಪಿ ಅಗಮಿಸಿದ ಡಿಕೆ ಶಿವಕುಮಾರ್ ಜೊತೆ ನಡೆದ ಮಾತುಕತೆ ಫಲಫ್ರದವಾಗಿದ್ದು ,ಕೆಲವೊಂದು ಬೇಡಿಕೆಗಳನ್ನು ಈಡೇರಿಸುವ ಭರವಸೆ ಬಳಿಕ ತಾವು ಹಾಕಿದ್ದ ನಾಮಪತ್ರ ವಾಪಸ್ಸು ಪಡೆದು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಸಾವರ್ಜನಿಕ ಸಭೆಗೆ ಅಗಮಿಸಿದ ಕೃಷ್ಣಮೂರ್ತಿಯನ್ನು ಘೊಷಣೆಗಳ ಮೂಲಕ ಸ್ವಾಗತಿಸಿದರು.ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ರಿಗೆ ಹೂ ಮಾಲೆ ಹಾಕಿ ಅಭಿನಂದಿಸಿದರು. ಈ ಮೂಲಕ ಕಾಂಗ್ರೆಸ್ಸಿಗಿಂದ್ದ ಭಿನ್ನಮತವೊಂದು ಶಮನಗೊಂಡಿದೆ
