ಉಡುಪಿ: ನಟೋರಿಯಸ್ ಬನಿಯನ್ ಗ್ಯಾಂಗ್!: ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರಿಂದ ತನಿಖೆ

ಇತ್ತೀಚೆಗೆ ಉಡುಪಿಯ ಸಂತಕಟ್ಟೆ ಬಳಿ ನಡೆದ ದರೋಡೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಉಡುಪಿ ಪೊಲೀಸರಿಗೆ ಶಾಕ್ ಕಾದಿತ್ತು. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಅದರಲ್ಲಿ ಕಂಡ ದೃಶ್ಯಗಳನ್ನು ಕಂಡು ಪೊಲೀಸರು ಬೆಚ್ಚಿ ಬಿದ್ದಿದ್ದರು.

ದಿಲ್ಲಿ ಕ್ರೈಮ್-2 ವೆಬ್ ಸೀರೀಸ್‌ನ ಕಚ್ಚಾ ಬನಿಯನ್ ಗ್ಯಾಂಗ್ ಮಾದರಿಯಲ್ಲೇ.. ಬರೀ ಚೆಡ್ಡಿ ಧರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು, ಸೊಂಟದಲ್ಲೊಂದು ಚಪ್ಪಲಿ ಕಟ್ಟಿಕೊಂಡು ಈ ಗ್ಯಾಂಗ್ ದರೋಡೆ ನಡೆಸುತ್ತೆ. ಬಳಿಕ ಒಂದು ಚಪ್ಪಲಿಯನ್ನು ಬಿಟ್ಟು ಹೋಗುತ್ತೆ. ಸದ್ಯ ಉಡುಪಿ ಪೊಲೀಸರು ಈ ಚಡ್ಡಿ ಯಾನೆ ಬನಿಯನ್ ಗ್ಯಾಂಗ್ ಬೆನ್ನು ಬಿದ್ದಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ಮುಂದುವರೆದಿದೆ.
