ಮಣಿಪುರದಲ್ಲಿ ಹಿಂಸಾಚಾರ ಖಂಡಿಸಿ ಉಡುಪಿಯ ಸಮಾನ ಮನಸ್ಕರ ವೇದಿಕೆ ವತಿಯಿಂದ ಕಾಲ್ನಡಿಗೆ ಜಾಥ
ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಹಿಂಸಾಚಾರ ಖಂಡಿಸಿ ಆಗಸ್ಟ್ 2ರಂದು ಉಡುಪಿಯ ಸಮಾನ ಮನಸ್ಕರ ವೇದಿಕೆ ವತಿಯಿಂದ ಕಾಲ್ನಡಿಗೆ ಜಾಥ ನಡೆಯಲಿದೆ. ಈ ಬಗ್ಗೆ ಮಾಹಿತಿನೀಡಿದ ಪ್ರಶಾಂತ್ ಜತ್ತನ್ ಮಣಿಪುರದಲ್ಲಿ ಹಿಂಸಚಾರ ಶುರುವಾಗಿ ಸುಮಾರು ಮೂರು ತಿಂಗಳಾಗಿದೆ ,ಸುಮಾರು 114 ಮಂದಿ ಹತ್ಯೆಯಾಗಿದ್ದಾರೆ.ಅರವತ್ತು ಸಾವಿರಕ್ಕೂ ಹೆಚ್ಚು ಜನ ನಿರ್ವಸಿತರಾಗಿದ್ದಾರೆ ,ಮಹಿಳೆಯರ ಮೇಲೆ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ, ಚರ್ಚುಗಳು ಮಸೀದಿಗಳು ಧ್ವಸಂವಾಗಿದೆ. ಇದನ್ನೆಲ್ಲ ಖಂಡಿಸಿ ,ದೇಶದ ಶಾಂತಿ ಸೌಹರ್ದತೆ ಕಾಪಾಡುವಂತೆ ಮನವಿ ಮಾಡುವ ಉದ್ದೇಶದಿಂದ ಅಗಸ್ಟ್ 2 ರಂದು ಉಡುಪಿಯ ಶೋಕಾ ಮಾತಾ ಇಗರ್ಜಿಯಿಂದ ಮಿಶನ್ ಕಪೌಂಡ್ ವರೆಗೆ ಸಮಾನ ಮನಸ್ಕರ ವೇದಿಕೆ ಕಾಲ್ನಡಿಗೆ ಜಾಥ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.ಪತ್ರಿಕಾಗೊಷ್ಟಿಯಲ್ಲಿ ಡಾ.ಸುನೀತಾ ಶೆಟ್ಟಿ ರೊಶನಿ ಒಲಿವರ್, ಫಾ ಡೆನ್ನಿಸ್ ಡೇಸಾ,ನಾಗೇಶ್ ಕುಮಾರ್,ಸುಂದರ್ ಮಾಸ್ಟರ್ ಉಪಸ್ಥಿತರಿದ್ದರು.