ಮೂಡುಬಿದರೆ : 60ನೇ ಶ್ರೀ ಸಾರ್ವಜನಿಕ ಗಣೇಶೋತ್ಸವ : ಡಾ.ಎಂ. ಮೋಹನ್ ಅಳ್ವಾರಿಂದ ಲೋಗೋ ಅನಾವರಣ

ಮೂಡುಬಿದಿರೆ: 1964ರಲ್ಲಿ ಆರಂಭಗೊಂಡಿರುವ ಇಲ್ಲಿನ ಶ್ರೀ ಸಾರ್ವಜನಿಕ ಗಣೇಶೋತ್ಸವವು 60ನೇ ವರ್ಷದ ಸಂಭ್ರಮದಲ್ಲಿದ್ದು ಅದಕ್ಕಾಗಿ ಈ ವರ್ಷ ಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶವನ್ನು ಹೊಂದಿದ್ದು ಈ ನಿಟ್ಟಿನಲ್ಲಿ ಶನಿವಾರ ಲೋಗೋವನ್ನು ಅನಾವರಣಗೊಳಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಲೋಗೋ ಅನಾವರಣಗೊಳಿಸಿ ಮಾತನಾಡಿ ಮೂಡುಬಿದಿರೆಯು ಹಲವು ವಿಚಾರಗಳಲ್ಲಿ ಸಾಧನೆ ಮಾಡಿದೆ. ಇಲ್ಲಿನ ಸಾರ್ವಜನಿಕ ಗಣೇಶೋತ್ಸವಕ್ಕೆ ಅದರದ್ದೇ ಆದ ಮೆರುಗು ಇದೆ. ಹಿಂದೆ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಉತ್ತಮವಾಗಿ ನಡೆಯುತ್ತಾ ಬಂದಿದ್ದು ಇದೀಗ ಶ್ರೀಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು.

ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಮಾತನಾಡಿ ಗಣೇಶೋತ್ಸವಕ್ಕೆ ವಿಶೇಷತೆಯಿದೆ . ಸರಸ್ವತಿ ಸೇವಾ ಸಂಘದ ಮೂಲಕ ಆರಂಭಗೊಂಡಿದ್ದು ನಂತರ ಅಮರನಾಥ ಶೆಟ್ಟಿ ಅವರು ಇದಕ್ಕೆ ಜಿಲ್ಲೆಯಲ್ಲೇ ಉತ್ತಮವಾದ ರೂಪು ರೇಷೆಯನ್ನು ನೀಡಿದರು.
ಈ ಬಾರಿ ಗಣಪತಿ ದೇವರ 60ರ ಸಂಭ್ರಮವನ್ನು ರಾಜ್ಯ ಸುಭೀಕ್ಷವಾಗಬೇಕೆಂಬ ನಿಟ್ಟಿನಲ್ಲಿ ಮಾಡಲಾಗುತ್ತಿದೆ ಎಂದರು.

ಮೂಡುಬಿದಿರೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಬಾರಿ ವಿಶೇಷ ಸಂಭ್ರಮವನ್ನು ವಿಶೇಷ ರೀತಿಯಲ್ಲಿ ನಡೆಸಬೇಕೆಂದು ಕೊಂಡಿದ್ದೇವೆ ಇದರ ಪ್ರಥಮ ಕಾರ್ಯಕ್ರಮವಾಗಿ ಲೋಗೋವನ್ನು ಬಿಡುಗಡೆಗೊಳಿಸಲಾಗಿದೆ. ಶೆಟ್ಟರ ಕೊಡುಗೆ ಮರೆಯುವಂತಿಲ್ಲ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಾ ಬಂದಿದೆ. ಇದೀಗ ಈ ವರ್ಷ ಸಹಸ್ರ ನಾರಿಕೇಳ ಯಾಗವನ್ನು ಮಾಡಲಿದ್ದೇವೆ ಎಂದರು. ಸಮಾಜ ಮಂದಿರ ಸಭಾದ ಪ್ರಧಾನ ಕಾರ್ಯದರ್ಶಿ ಸುರೇಶ್ ಪ್ರಭು ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ನಾರಾಯಣ ಪಿ.ಎಂ ಸ್ವಾಗತಿಸಿದರು.ಯತಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.