ಮಂಗಳೂರು: ಎಂಸಿಸಿ ಬ್ಯಾಂಕಿನಲ್ಲಿ ಮಹಿಳಾ ದಿನಾಚರಣೆ

ಎಂಸಿಸಿ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಬ್ಯಾಂಕಿನ ಮಹಿಳಾ ಸಿಬಂದಿಯ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವೈಟ್ ಡೌವ್ಸ್ ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ ಕೋರಿನ್ ರಸ್ಕಿನ್ಹಾ ಹಾಜರಿದ್ದರು. ಬ್ಯಾಂಕಿನ ನಿರ್ದೇಶಕಿಯರಾದ ಶ್ರೀಮತಿ ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಪ್ಲಾವಿಯ ಡಿಸೋಜ, ಶ್ರೀಮತಿ ಶರ್ಮಿಳಾ ಮಿನೇಜಸ್, ಬ್ಯಾಂಕಿನ ಶಾಖಾ ಪ್ರಬಂಧಕರಾದ ಶ್ರೀಮತಿ ಬ್ಲಾಂಚ್ ಫೆರ್ನಾಂಡಿಸ್, ಶ್ರೀಮತಿ ಸುನಿತಾ ಡಿಸೊಜ, ಶ್ರೀಮತಿ ಐಡಾ ಪಿಂಟೊ, ಶ್ರೀಮತಿ ಐರಿನ್ ಡಿಸೋಜ, ಶ್ರೀಮತಿ ಜೆಸಿಂತಾ ಫೆರ್ನಾಂಡಿಸ್ ಶ್ರೀಮತಿ ವಿಲ್ಮಾ ಜ್ಯೋತಿ ಸಿಕ್ವೇರಾ ಮತ್ತು ಶ್ರೀಮತಿ ಅನಿತಾ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಾಗತಿಸಿ ಮಾತನಾಡಿದ ಬ್ಯಾಂಕಿನ ಜನರಲ್ ಮೆನೆಜರ್ ಶ್ರೀ ಸುನಿಲ್ ಮಿನೇಜಸ್ರವರು ಬ್ಯಾಂಕಿನ ಮಹಿಳಾ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿ, ಮಹಿಳಾ ದಿನಾಚರಣೆಯ ಪ್ರಾಮುಖ್ಯತೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಮಹತ್ವದ ಕೊಡುಗೆಯ ಬಗ್ಗೆ ವಿವರಿಸಿದರು. ಎಂಸಿಸಿ ಬ್ಯಾಂಕಿನ ಏಳಿಗೆಯಲ್ಲಿ ಮಹಿಳಾ ಸಿಬ್ಬಂದಿಗಳ ಪಾತ್ರವನ್ನು ಅವರು ಕೊಂಡಾಡಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ಕೋರಿನ್ ರಸ್ಕಿನ್ಹಾರವರನ್ನು ಅವರ ಸಾಮಾಜಿಕ ಜವಾಬ್ಧಾರಿ ಮತ್ತು ಅಬಲರಿಗಾಗಿ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು ತಮ್ಮ ಅತಿಥಿ ಭಾಷಣದಲ್ಲಿ ಅಂತರರಾಶ್ಟಿçÃಯ ಮಹಿಳಾ ದಿನದ ಸಂದರ್ಭದಲ್ಲಿ ಎಂಸಿಸಿ ಬ್ಯಾಂಕಿನ ಮಹಿಳಾ ಸಿಬಂದಿಯನ್ನು ಅಭಿನಂದಿಸಿದರು. ಮಹಿಳೆಯರ ಮೇಲೆ ಹೂಡಿಕೆ ಮಾಡುವುದರ ಮೂಲಕ ಬೆಳವಣಿಗೆಯಲ್ಲಿ ವೇಗವನ್ನು ಪಡೆಯಿರಿ ಎಂಬ ಧ್ಯೇಯವನ್ನು ಈ ವರ್ಷದ ಅಂತರರಾಶ್ಟಿçÃಯ ಮಹಿಳಾ ದಿನ ಹೊಂದಿದ್ದು, ಹೆಣ್ಣು ಮಗುವಿನ ಮೇಲೆ ಹೂಡಿಕೆ ಮಾಡುವುದರಿಂದ ಸಮಾಜದ ಒಳಿತಾಗುವುದು ಎಂದರು. ಮಹಿಳೆಯ ಮಹತ್ವದ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸುವುದು, ಸಮಾಜದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಗೌರವದ ಮಹತ್ವವನ್ನು ಸಾರುವುದು; ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು. ತಾಳ್ಮೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಬದ್ದತೆ, ನಾಯಕತ್ವ, ನಾವೀನ್ಯತೆ ಮತ್ತು ಸಹಾನುಭೂತಿಗಾಗಿ ಮಹಿಳೆಯರನ್ನು ಗುರುತಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಸಮಾಜದ ಅಭಿವೄದ್ಧಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ; ಆದುದರಿಂದ, ಮಹಿಳೆಯರು ಸಮಾಜದ ಎಲ್ಲಾ ಪಂಥ್ವಾಹಾನವನ್ನು ಎದುರಿಸಿ ತಮ್ಮ ಆಲೋಚನೆ, ಮಾತು ಮತ್ತು ಕ್ರಿಯೆಯಲ್ಲಿ ಸಕಾರಾತ್ಮಕವಾಗಿರಬೇಕು ಎಂದು ಸಲಹೆ ನೀಡಿದರು. “ವೈಟ್ಸ್ ಡೌವ್ಸ್” ಸಂಸ್ಥೆಯನ್ನು ಕಟ್ಟುವಲ್ಲಿ ತಾವು ಎದುರಿಸಿದ ಪಂಥ್ವಾಹಾನಗಳನ್ನು ವಿವರಿಸಿದ ಅವರು ತಮ್ಮ ಜೀವನವನ್ನು ಉದಾಹರಣೆಯಾಗಿ ಎಲ್ಲರ ಮುಂದಿರಿಸಿದರು.

ಬ್ಯಾಂಕಿನ ಎಲ್ಲಾ ಮಹಿಳೆಯರಿಗೆ ಅಬಿನಂದಿಸಿದ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ ಕುಟುಂಬದ ಮತ್ತು ಸಮಾಜದ ಶ್ರೇಯೋಭಿವೃದ್ದಿಗೆ ಮಹಿಳೆಯರು ವಹಿಸುವ ಪಾತ್ರದ ಬಗ್ಗೆ ವಿವರಿಸಿದರು. ರಾಷ್ಟ್ರ ಕವಿ, ಜಿ.ಎಸ್. ಶಿವರುದ್ರಪ್ಪರವರ “ಸ್ತಿçÔ ಕವಿತೆಯನ್ನು ಉಲ್ಲೇಖಿಸಿದ ಅವರು ಕುಟುಂಬ ಮತ್ತು ಸಮಾಜದ ಹಿತಕ್ಕಾಗಿ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುವ ಪರಿ ತಮಗೆ ಸೋಜಿಗವಾಗಿದೆ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕಿ ಐರಿನ್ ರೆಬೆಲ್ಲೊರವರು ಮಹಿಳಾ ಸಬಲೀಕರಣ ಮತ್ತು ಪ್ರಗತಿಯ ಕುರಿತು ಮಾತನಾಡುತ್ತ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಹಲವು ಅಸಮಾನತೆಗಳನ್ನು ಎದುರಿಸಿ, ಸಮಾಜದ ಶಿಲ್ಪಿಯಾಗಿ ಮುನ್ನಡೆಯುವ ಅಗತ್ಯತೆಯನ್ನು ಒತ್ತಿ ಹೇಳಿದರು. ಮಹಿಳೆ ಪ್ರತಿಭೆಗಳನ್ನು ಬಳಸಿ ತನ್ನ ಆರಾಮ ವಲಯದಿಂದ ಹೊರಬಂದು ಮುನ್ನುಗ್ಗುವ ಛಲ ಹೊಂದಿರಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಆಸೀನರಾಗಿದ್ದ ಬ್ಯಾಂಕಿನ ನಿರ್ದೇಶಕರು ಮತ್ತು ಶಾಖಾ ಪ್ರಬಂಧಕರನ್ನು ಸನ್ಮಾನಿಸಲಾಯಿತು. ಮಹಿಳಾ ಸಿಬ್ಬಂದಿಯ ಪರವಾಗಿ ಸುರತ್ಕಲ್ ಶಾಖಾ ಪ್ರಬಂಧಕಿಯಾದ ಶ್ರೀ ಸುನಿತಾ ಡಿಸೋಜರವರು ಮಾತನಾಡಿ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದಕ್ಕಾಗಿ ಮಹಿಳಾ ಸಿಬ್ಬಂದಿಯ ಪರವಾಗಿ ಆಡಳಿತ ಮಂಡಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಹಿಳಾ ಸಿಬ್ಬಂದಿಯವರಿಗೆ ಬ್ಯಾಂಕಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹೂಗೂಚ್ಛ ನೀಡಿ ಶುಭಾಶಯವನ್ನು ಕೋರಿದರು

ಬ್ಯಾಂಕಿನಲ್ಲಿ ನಿಸ್ವಾರ್ಥ ಮತ್ತು ಸಮರ್ಪಿತ ಸೇವೆ ಸಲ್ಲಿಸಿದ ಕಾರ್ಕಳ ಶಾಖಾ ಪ್ರಬಂಧಕರಾದ ಶ್ರೀ ರಾಯನ್ ಪ್ರವೀಣ್ ಇವರನ್ನು ಸನ್ಮಾನಿಸಲಾಯಿತು.

ನಿರ್ದೇಶಕರಾದ ಶ್ರೀ ಅಂಡ್ರೂ ಡಿಸೋಜ, ಶ್ರೀ ಹೆರಾಲ್ಡ್ ಮೊಂತೇರೊ, ಶ್ರೀ ರೋಶನ್ ಡಿಸೋಜ, ಶ್ರೀ ಸಿ.ಜಿ. ಪಿಂಟೊ, ಶ್ರೀ ಅನಿಲ್ ಪತ್ರಾವೊ, ಶ್ರೀ ಮೆಲ್ವಿನ್ ವಾಸ್, ಶ್ರೀ ವಿನ್ಸೆಂಟ್ ಲಸ್ರಾದೊ, ಶ್ರೀ ಫೆಲಿಕ್ಸ್ ಡಿಕ್ರುಜ್, ಶ್ರೀ ಸುಶಾಂತ್ ಸಲ್ಡಾನ್ಹಾ ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಶ್ರೀ ಮನೋಜ್ ಫೆರ್ನಾಂಡಿಸ್ ನಿರೂಪಿಸಿ, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ವಂದಿಸಿದರು.
ಸಭಾ ಕಾರ್ಯದ ನಂತರ ಸಿಲ್ವರ್ ಟೋನ್ ಕಾರ್ಕಳ ತಂಡದಿಂದ ಸಂಗೀತ ಕಾರ್ಯಕ್ರಮ, ವಿಸ್ಮಯ ತಂಡದಿಂದ ಹಾಸ್ಯಲಹರಿ ಮತ್ತು ಎಂ.ಸಿ.ಸಿ ಬ್ಯಾಂಕಿನ ಪುರುಷ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Related Posts

Leave a Reply

Your email address will not be published.