ಉಡುಪಿ: ಎಸ್‍ಬಿಐ ಎಂಡಿ ಆಗಿ ವಿನಯ್ ಎಂ. ತೋನ್ಸೆ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಉಡುಪಿ ಜಿಲ್ಲೆಯ ವಿನಯ್ ಎಂ. ತೋನ್ಸೆಯವರು ಎಸ್‍ಬಿಐ- ಸ್ಟೇಟ್ಸ್ ಬ್ಯಾಂಕ್ ಆಫ್ ಇಂಡಿಯಾದ ಎಂಡಿ- ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ಪಡೆದರು. ಅವರು ಉಪ ಎಂಡಿ ಆಗಿ ಇಲ್ಲಿಯ ತನಕ ಕಾರ್ಯ ನಿರ್ವಹಿಸಿದವರು.
ಉಡುಪಿ ಜಿಲ್ಲೆಯಿಂದ ಈ ಹುದ್ದೆಗೇರಿದ ಮೊದಲಿಗರು ಇವರು. ವರನಟ ರಾಜಕುಮಾರ್ ಅಭಿಮಾನಿ ಹಾಗೂ ಪೂರ್ಣಚಂದ್ರ ತೇಜಸ್ವಿ ಮೊದಲಾದ ಸಾಹಿತಿಗಳ ಸಾಹಿತ್ಯಾಭಿಮಾನಿ ಆದ ವಿನಯ್ ಎಂ. ತೋನ್ಸೆ ಅಪ್ಪಟ ಕನ್ನಡ, ತುಳು ಒಡನಾಡಿ.ಇವರ ತಾಯಿ ಕೃಷ್ಣಾಬಾಯಿ, ತಂದೆ ಮುರಳೀಧರ ರಾವ್ ಉಡುಪಿಯ ಕಿನ್ನಿಮೂಲ್ಕಿ ವಾಸಿಗಳು. ಅಜ್ಜ ತೋನ್ಸೆ ನಾರಾಯಣ ರಾವ್ ಶಿಕ್ಷಕರು. ಹಾಗಾಗಿ ವಿನಯ್ ಅವರ ಶಿಕ್ಷಣ ಉಡುಪಿಯಲ್ಲಿ ಗಟ್ಟಿಗೊಂಡುದಾಗಿದೆ.