ಉಡುಪಿ : ಅಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವಕ್ಕೆ ಸಿದ್ಧವಾಗಿದೆ ದರ್ಪಣ ಸಂಸ್ಥೆಯ ಹೆಣ್ಣು ಮಕ್ಕಳ ಹುಲಿ ವೇಷ ತಂಡ
ದರ್ಪಣ ಸಂಸ್ಥೆಯ ಹೆಣ್ಣು ಮಕ್ಕಳ ಹುಲಿ ವೇಷ ತಂಡ ಸಿದ್ಧವಾಗಿದೆ. ಈ ಬಾರಿ ಅಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದಲ್ಲಿ ಹೆಣ್ಣು ಮಕ್ಕಳ ತಂಡದ ಹುಲಿವೇಷ ಕುಣಿತ ವಿಶೇಷ ಗಮನ ಸೆಳೆಯಲಿದೆ. ಈ ಮೂಲಕ ಸಾಂಪ್ರದಾಯಿಕ ಕಲೆಯಾದ ಹುಲಿ ವೇಷ ಕುಣಿತವನ್ನು ಉಳಿಸಿ ಬೆಳೆಸುವಲ್ಲಿ ದರ್ಪಣ ಸಂಸ್ಥೆಯ ಹೆಣ್ಣು ಮಕ್ಕಳ ತಂಡ ಮುಂದಡಿಯಿಟ್ಟಿದೆ.
ಈ ಕುರಿತು ದರ್ಪಣ ಸಂಸ್ಥೆಯ ನೃತ್ಯ ನಿರ್ದೇಶಕಿ ರಮ್ಯಾ ಅವರು ಮಾತನಾಡಿ ನಮ್ಮ ದರ್ಪಣ ಸಂಸ್ಥೆಯಲ್ಲಿ ಸುಮಾರು ಏಳು ವರ್ಷಗಳಿಂದ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಡ್ಯಾನ್, ಸಂಗೀತ, ನಾಟಕಗಳನ್ನು ಕಲಿಯುತ್ತಿದ್ದಾರೆ. ಸಂಸ್ಥೆಗೆ ಸುಮಾರು 50 ಕ್ಕಿಂತ ಹೆಚ್ಚು ಮಂದಿ ಅರ್ಜಿಯನ್ನು ಹಾಕಿದ್ದು ಈಗ ನಮ್ಮಲ್ಲಿ ಪುಟಾಣಿ ಮಕ್ಕಳಿಂದ ಹಿಡಿದು ಮಹಿಳೆಯರ ತನಕ ಒಟ್ಟು 27 ಹುಲಿಗಳಿವೆ. ನಮಗೆ A1 ಗ್ರೂಪ್‍ನ ನಿತಿನ್ ಹಾಗೂ ಸುವಿದ್ ಕಾಸ್ಟ್ಯೂಮ್‍ನಿಂದ ಹಿಡಿದು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದಾರೆ ಎಂದರು.
ದರ್ಪಣ ಸಂಸ್ಥೆಯ ಬಾವನ ವಿಷ್ಣುಮೂರ್ತಿ ಕೆರೆಮಠ ಮಾತನಾಡಿ ಸುಮಾರು 40 ದಿನಗಳಿಂದ ಹುಲಿ ವೇಷ ತಂಡದ ಅಭ್ಯಾಸ ನಡಿತಾ ಇದೆ. ಹೆಣ್ಣು ಮಕ್ಕಳಿಗೆ ಮೈಗೆ ಪೈಂಟ್ ಹಾಕಲು ಸಾಧ್ಯವಿಲ್ಲದ ಕಾರಣ ಬಟ್ಟೆಗೆ ಪೈಂಟ್ ಮಾಡುವಂತಹ ಕೆಲಸಗಳು ನಡಿತಾ ಇದೆ. ಅಷ್ಟಮಿ ಹಾಗೂ ವಿಟ್ಲಪಿಂಡಿಯ ದಿನದಂದು ಹೆಣ್ಣು ಮಕ್ಕಳ ತಂಡ ಹುಲಿವೇಷ ಕುಣಿತದೊಂದಿಗೆ ಉಡುಪಿ ಜಿಲ್ಲೆಯಾದ್ಯಾಂತ ಸಂಚರಿಸಲಿದೆ. ಹೆಣ್ಣು ಮಕ್ಕಳ ಹುಲಿವೇಷ ತಂಡವನ್ನು ಪೆÇ್ರೀತ್ಸಾಹಿಸಬೇಕಾಗಿದೆ ಎಂದರು.
ಅಲೆವೂರು ನಿವಾಸಿಯಾದ ಸುಷ್ಮಾ ಎಸ್ ಬಂಟ್ವಾಳ ಮಾತನಾಡಿ ಅದೆಷ್ಟೋ ವರ್ಷದಿಂದ ನಮ್ಮ ಮಕ್ಕಳಿಗೆ ಹುಲಿವೇಷ ಹಾಕಬೇಕೆಂಬ ಆಸೆ ಇತ್ತು. ಇದಕ್ಕೆ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಈಗ ನಮ್ನಲ್ಲಿರುವ ಕಲೆಯನ್ನು ಇಡೀ ಸಮಾಜಕ್ಕೆ ತೋರಿಸುವ ವೇದಿಕೆಯನ್ನು ದರ್ಪಣ ಸಂಸ್ಥೆ ಸೃಷ್ಟಿಸಿದೆ ಎಂದರು.