ಉಳ್ಳಾಲ: ಬೃಹತ್ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ- ಎಸಿಪಿ ಧನ್ಯ ನಾಯಕ್ ಟೀಮ್ ದಿಢೀರ್ ದಾಳಿ,ಆರೋಪಿ ಪೊಲೀಸರ ವಶಕ್ಕೆ

ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಪುರದ ಬೃಹತ್ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗೆ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿದ್ದು ಆರೋಪಿ ಸಮೇತ ಅಪಾರ ಪ್ರಮಾಣದ ಗ್ಯಾಸ್ ಸಿಲಿಂಡರ್ ಗಳನ್ನ ವಶಪಡಿಸಿದ್ದಲ್ಲದೆ,ಅಕ್ರಮವಾಗಿ ಮಾರಾಟ ನಡೆಸುತ್ತಿದ್ದ ಲೀಟರ್ ಗಟ್ಟಲೆ ಪೆಟ್ರೋಲನ್ನೂ ವಶಪಡಿಸಿಕೊಂಡಿದೆ.
ಉಳ್ಳಾಲ ಕೋಟೆಪುರದ ಬರಕ ಫ್ಯಾಕ್ಟರಿ ಮುಂಭಾಗದ ರಸ್ತೆ ಬದಿಯ ಮನೆಯೊಂದರಲ್ಲೇ ನಡೆಯುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗೆ ಎಸಿಪಿ ಧನ್ಯ ನಾಯಕ್ ಮತ್ತು ತಂಡ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ದಾಸ್ತಾನು ಇರಿಸಿದ್ದ ಗ್ಯಾಸ್ ಸಿಲಿಂಡರ್ ಮತ್ತು ಸುಮಾರು 280 ಲೀಟರ್ ಪೆಟ್ರೋಲನ್ನ ಜಪ್ತಿಗೊಳಿಸಿದ್ದು ಆರೋಪಿ ಅಬ್ದುಲ್ ಅಲ್ತಾಫ್ (49)ನನ್ನ ಬಂಧಿಸಿದೆ.


ಕೋಟೆಪುರದ ರಸ್ತೆ ಬದಿಯ ಮನೆಯಲ್ಲೇ ತೋರ್ಪಡಿಕೆಗೆ ಗುಜರಿ ಅಂಗಡಿ ನಡೆಸುತ್ತಿದ್ದ ಆರೋಪಿ ಅಲ್ತಾಪ್ ಮನೆಯೊಳಗಿನ ವಿಶಾಲ ಪ್ರದೇಶದಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳನ್ನ ದಾಸ್ತಾನು ಇರಿಸಿ ರೀಫಿಲ್ಲಿಂಗ್ ಮಾಡುತ್ತಿದ್ದ ಎನ್ನಲಾಗಿದೆ.ಇಷ್ಟಲ್ಲದೆ ಸ್ಥಳೀಯ ನಾಡ ದೋಣಿಗಾರರಿಗೆ ದುಪ್ಪಟ್ಟು ದರದಲ್ಲಿ ಪೆಟ್ರೋಲನ್ನ ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ.
ಖಚಿತ ಮಾಹಿತಿಯನ್ವಯ ಎಸಿಪಿ ಧನ್ಯ ನಾಯಕ್ ಸಮೇತ ಸಿಬ್ಬಂದಿಗಳಾದ ರಿಜಿ, ಸಾಜು ನಾಯರ್,ಮಹೇಶ್, ಅಕ್ಬರ್ ನೇತೃತ್ವದ ತಂಡ ಗುರುವಾರದಂದು ದಿಢೀರ್ ದಾಳಿ ನಡೆಸಿದ್ದು ಸುಮಾರು 55 ಕ್ಕೂ ಮಿಕ್ಕಿದ ಗ್ಯಾಸ್ ಸಿಲಿಂಡರ್ ಮತ್ತು 280 ಲೀಟರ್ ನಷ್ಟು ಅಕ್ರಮ ದಾಸ್ತಾನು ಇರಿಸಿದ್ದ ಪೆಟ್ರೋಲನ್ನ ವಶ ಪಡಿಸಿದ್ದು ,ಆರೋಪಿ ಅಲ್ತಾಪ್ ನನ್ನು ಬಂಧಿಸಿದ್ದಾರೆ.
ತಮ್ಮ ಠಾಣೆಯ ಕೂಗಳತೆಯಲ್ಲಿ ರಸ್ತೆ ಬದಿಯಲ್ಲೇ ನಡೆಯುತ್ತಿರುವ ಅಕ್ರಮಗಳು ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ ಅವರ ಆಪ್ತ ಸಲಹೆಗಾರರಿಗೆ ತಿಳಿಯದ ಸಂಗತಿ ಏನೂ ಅಲ್ಲ.ಎಲ್ಲವೂ ತಿಳಿದು ಪಾಲಿಗೆ ಬಂದದನ್ನ ಪಂಚಾಮೃತವನ್ನಾಗಿ ಸ್ವೀಕರಿಸುತ್ತಿದ್ದ ಉಳ್ಳಾಲ ಇನ್ಸ್ ಪೆಕ್ಟರ್ ಅವರ ಗುಪ್ತ ಮಾಹಿತಿದಾರರು ಇಂದಿನ ಎಸಿಪಿ ದಾಳಿಯಿಂದ ದಂಗಾಗಿ ಕರಟಿದ ಮುಖದಿಂದ ದಾಳಿಯ ಗುಂಪಿನ ಪೊಟೋಕ್ಕೆ ಫೋಸ್ ನೀಡಿದ್ದಾರೆ.

Related Posts

Leave a Reply

Your email address will not be published.