ಪುತ್ತೂರು: ಶ್ರೀ ರಾಮಶ್ವ ಯಾತ್ರೆಗೆ ಚಾಲನೆ

ಪುತ್ತೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಶ್ರೀ ರಾಮಲಲ್ಲ,ನ ಪ್ರತಿಷ್ಠಾಪನ ಪ್ರಯುಕ್ತ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಶ್ರೀ ರಾಮನ ದಿಗ್ವಿಜಯದ ಸಂಕೇತವಾಗಿ ಸೀಮೆಗೆ ಸಂಬಂಧಿಸಿ ಮೂರು ದಿವಸ ಪುತ್ತೂರು ತಾಲೂಕಿನ ದೇವಸ್ಥಾನಗಳಿಗೆ ಭೇಟಿ ನೀಡಲಿರುವ ಶ್ರೀ ರಾಮಶ್ವ ಯಾತ್ರೆಗೆ ದೇವಳದ ರಥ ಬೀದಿಯಲ್ಲಿ ಚಾಲನೆ ನೀಡಲಾಯಿತು.

ಬೆಳಿಗ್ಗೆ ದೇವಳದ ವಠಾರದಲ್ಲಿ ಅಶ್ವಕ್ಕೆ ಹೂವಿನ ಹಾರ ಹಾಕಿ ಗಂಧ ಪ್ರಸಾದ ಹಚ್ಚಿ ತೀರ್ಥ ಸಿಂಪಡಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ತೀರ್ಥ ಪ್ರೋಕ್ಷಣೆ ಮಾಡಿದರು. ಬಳಿಕ ದೇವಳದ ಬ್ರಹ್ಮರಥ ಬೀದಿಯಲ್ಲಿ ಆಯೋಧ್ಯೆಯಲ್ಲಿ ಕರಸೇವಕರಾಗಿ ಪಾಲ್ಗೊಂಡವರಿಂದ ತೆಂಗಿನ ಕಾಯಿ ಒಡೆಯುವ ಮೂಲಕ ಶ್ರೀ ರಾಮಶ್ವ ಯಾತ್ರೆಗೆ ಚಾಲನೆ ನೀಡಲಾಯಿತು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಆಯೋಧ್ಯೆ ಕರಸೇವಕರಾಗಿರುವ ವಿಶ್ವಹಿಂದು ಪರಿಷತ್ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಜಿ.ಚಂದ್ರಶೇಖರ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮದಾಸ್ ಗೌಡ, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್ ಮೊದಲಾದವರು ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.