ಉಳ್ಳಾಲ: ಎಂಡಿಎಂಎ ಸಾಗಾಟ, ಇಬ್ಬರ ಬಂಧನ
ಉಳ್ಳಾಲ: ಬೈಕಿನಲ್ಲಿ ಬಂದು ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಹಣಕ್ಕಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೋಲಿಸ್ರ ತಂಡ ಬಂಧಿಸಿದ್ದಾರೆ.
ತ್ರಿಶೂರ್ ವಡಕಂಚೇರಿ ನಿವಾಸಿ ಶೇಕ್ ತನ್ಸಿರ್ (20) ಮತ್ತು ಕೋಝಿಕ್ಕೋಡ್ ಕಡಮೇರಿ ನಿವಾಸಿ ಸಾಯಿಕೃಷ್ಣ ( 19) ಬಂಧಿತರು. ಇಬ್ಬರಿಂದ 2.77 ಗ್ರಾಂ ತೂಕದ ನಿಷೇಧಿತ ಎಂಡಿಎಂಎ, ಎರಡು ಮೊಬೈಲ್ ಹಾಗೂ ರೂ. 50,000 ಬೆಲೆಬಾಳುವ ಎಫ್ ಝೆಡ್ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.