ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ

ಉಳ್ಳಾಲ : ಬಿಜೆಪಿ ಗೆಲುವು ಸಾಧಿಸಿದಲ್ಲಿ ಶಾಸಕರಿಂದ ಆಗಿರುವ ತೊಂದರೆ, ತಾರತಮ್ಯವನ್ನು ದೂರವಾಗಿಸುವ ಪ್ರಾಮಾಣಿಕ ಪ್ರಯತ್ನ. ಪ್ರತಿಯೊಬ್ಬರನ್ನು ಮುಟ್ಟುವ ಕೆಲಸವನ್ನು ಪ್ರಯತ್ನಿಸುತ್ತೇನೆ, ಸೀಮಿತ ದಿನಗಳಿರುವುದರಿಂದ ಕಾರ್ಯಕರ್ತರು ಮನೆ ಬಾಗಿಲಿಗೆ ಬಂದರೂ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿರಿ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಹೇಳಿದ್ದಾರೆ.

ಅವರು ಪಂಡಿತ್ ಹೌಸ್ ನಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಗುವುದು ಕನಸಾಗಿತ್ತು. ಅನಿವಾರ್ಯವಾಗಿ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಲು ಅವಕಾಶವಾಯಿತು.ಇದೀಗ ಬಿಜೆಪಿ ಅಭ್ಯರ್ಥಿ ಯಾಗಿ ಆಯ್ಕೆಗೊಂಡಿದ್ದು, ರಾಜಕೀಯವಾಗಿ ವೈಯಕ್ತಿವಾಗಿ ಇರುವ ವ್ಯತ್ಯಾಸಗಳಿಗೆ ಪ್ರಮಾದವನ್ನು ಕೇಳುತ್ತಿದ್ದೇನೆ ಎಂದರು.

ಕಚೇರಿ ಉದ್ಘಾಟಿಸಿದ ಕೈರಂಗಳ ಪುಣ್ಯಕೋಟಿ ಶಾಲೆ ಸಂಚಾಲಕ ಟಿ.ಜಿ ರಾಜರಾಂ ಭಟ್ ಮಾತನಾಡಿ, ದೈವಸ್ಥಾನಕ್ಕೆ ವರ್ಷಾವಧಿ ಕೋಲದಂತೆ, ಪ್ರಜಾಪ್ರಭುತ್ವದಲ್ಲಿ ಮತದಾನ ಒಂದು ಉತ್ಸವ, ವಿರೋಧಗಳಿಲ್ಲದ ವ್ಯಕ್ತಿ ಈ ಬಾರಿಯ ಅಭ್ಯರ್ಥಿ, ಗ್ರಾಮದ ಮೂಲೆಗಳನ್ನು ತಲುಪಿದಾಗ ಜನರನ್ನು ತಲುಪಲು ಸಾಧ್ಯ. ಹಣಬಲ, ಬಾಹುಬಲದ ವಿರುದ್ಧ ಕಾದಾಡಲು ಕಾರ್ಯಕರ್ತರು ಸನ್ನದ್ಧರಾಗಬೇಕಿದೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ, ಆರ್ ಗೊಬ್ಯೆರಾ ಅನ್ನುವ ಮಾತನ್ನು ತಕ್ಷಣದಿಂದ ನಿಲ್ಲಿಸಿರಿ. ವಿರೋಧ ಮಾತುಗಳನ್ನು ಎಲ್ಲರೂ ನಿಲ್ಲಿಸಿ, ಅಭ್ಯರ್ಥಿ ಪರ ಉತ್ತಮ ಮಾತುಗಳನ್ನಾಡಿ ಜನರ ಮನವನ್ನು ಗೆಲ್ಲುವ ಪ್ರಯತ್ನಗಳನ್ನು ಮಾಡಿ. ಅಲ್ಪಸಂಖ್ಯಾತರ ಮನೆಗಳಿಗೂ ಹೋಗಬೇಕಿದೆ, ಮೋದಿಯವರ ಯೋಜನೆ ಪಡೆದ ಅನೇಕ ಫಲಾನುಭವಿಗಳಿದ್ದಾರೆ. ಅವರ ಮನವನ್ನು ಗೆಲ್ಲುವ ಪ್ರಯತ್ನ ಕಾರ್ಯಕರ್ತರು ಮಾಡಬೇಕಿದೆ ಎಂದರು.

ಈ ಸಂದರ್ಭ ಕ್ಷೇತ್ರ ಪ್ರಭಾರಿ ಕಸ್ತೂರಿ ಪಂಜ, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ , ಸೀತಾರಾಮ ಬಂಗೇರ, ಲಕ್ಷ್ಮಣ್ ಅಬ್ಬಕ್ಕನಗರ, ಚಂದ್ರಹಾಸ್ ಉಳ್ಳಾಲ್, ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ್ ಅಡ್ಯಂತಾಯ ಉಪಸ್ಥಿತರಿದ್ದರು.

Related Posts

Leave a Reply

Your email address will not be published.