”ಹರ್ ಘರ್ ತಿರಂಗಾ” ಅಭಿಯಾನ: ಉಡುಪಿ ಸಣ್ಣ ಕೈಗಾರಿಕಾ ಸಂಘದಿಂದ ರಾಷ್ಟ್ರಧ್ವಜ ಹಸ್ತಾಂತರ

ಅಜಾದಿ ಕೀ ಅಮೃತ್ ಮಹೋತ್ಸವ್” ಆಚರಿಸುತ್ತಿರುವ ಸಂದರ್ಭದಲ್ಲಿ ದಿನಾಂಕ: 13-08-2022 ರಿಂದ 15-08-2022 ರವರೆಗೆ ದೇಶದಲ್ಲಿ ಹಮ್ಮಿಕೊಂಡಿರುವ ”ಹರ್ ಘರ್ ತಿರಂಗಾ” ಅಭಿಯಾನದಡಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಮಣಿಪಾಲ, ಉಡುಪಿಯ ವತಿಯಿಂದ 13000 ರಾಷ್ಟ್ರ ಧ್ವಜಗಳನ್ನು ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ವೀಣಾ ಬಿ.ಎನ್ ಅವರಿಗೆ ಹಸ್ತಾಂತರಿಸಿದರು.
ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀ ಕೆ. ಪ್ರಶಾಂತ್ ಬಾಳಿಗಾ, ಸಂಘಧ ಸದಸ್ಯರಾದ ಶ್ರೀ ಹರೀಶ್ ಕುಂದರ್, ಶ್ರೀ ವಲ್ಲಭ್ ಭಟ್, ಶ್ರೀ ರಮೇಶ್ ನಾಯಕ್ ತೆಕ್ಕಟ್ಟೆ, ಶ್ರೀ ಸಂತೋಷ್ ನಾಯಕ್ ತೆಕ್ಕಟ್ಟೆ, ಶ್ರೀಮತಿ ನಿರಾಳಿ ವೋರಾ ಹಾಜರಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿಯ ಜಂಟಿ ನಿರ್ದೇಶಕರಾದ ಶ್ರೀ ನಾಗರಾಜ ನಾಯಕ್, ಹಾಗೂ ಉಪ ನಿರ್ದೇಶಕರಾದ ಶ್ರೀ ಸೀತಾರಾಮ ಶೆಟ್ಟಿ ರವರು ಉಪಸ್ಥಿತರಿದ್ದರು.
