ಉಳ್ಳಾಲ: ವಿವಾಹಿತ ನಿಗೂಢ ನಾಪತ್ತೆ

ಉಳ್ಳಾಲ: ವಿವಾಹಿತರೋರ್ವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಣಾಜೆ ಹರೇಕಳ ಪಂಜಿಲಗುಳಿ ನಿವಾಸಿ ಜಯರಾಜ್ (35) ನಾಪತ್ತೆಯಾದವರು. ಪತ್ನಿ ಮೂರು ತಿಂಗಳ ಗರ್ಭಿಣಿಯಾಗಿದ್ದು, ಅವರ ಆರೋಗ್ಯ ತಪಾಸಣೆ ನಡೆಸಿದ ನಂತರ ಜೆಪ್ಪು ಕಂರ್ಭಿಸ್ಥಾನ ಸಮೀಪ ತಾಯಿ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳುವುದಾಗಿ ತಿಳಿಸಿ ಹೋದವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಜಯರಾಜ್, ಟೂರಿಸ್ಟ್ ವಾಹನವನ್ನು ಹೊಂದಿದ್ದಾರೆ. ಕೆಲಸಕ್ಕೆ ತೆರಳಿ ಹಾಜರಿಯನ್ನು ಹಾಕಿರುವ ಜಯರಾಜ್ ನಂತರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಇಂದಿನ ವರೆಗೆ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ.
