ವಾಮಂಜೂರಿನ ಕೆಲರೈಕೋಡಿಯಲ್ಲಿ ಗುಡ್ಡ ಕುಸಿತದ ಆತಂಕದಲ್ಲಿ ಸ್ಥಳೀಯ ನಿವಾಸಿಗಳು
ಕಳೆದ ಹಲವು ದಿನಗಳಿಂದ ಸುರಿದ ಮಳೆಗೆ ವಾಮಂಜೂರು ತಿರುವೈಲ್ ಕೆಲರಾಯಿ ಎರಡನೇ ಅಡ್ಡ ರಸ್ತೆಯಲ್ಲಿ ಗುಡ್ಡ ಕುಸಿತಗೊಂಡಿದ್ದು, ಸ್ಥಳೀಯ ನಿವಾಸಿಗಳಿಗೆ ಮನೆಗಳು ಕುಸಿಯುವ ಆತಂಕ ಎದುರಾಗಿದೆ.
ವಾಮಂಜೂರು ತಿರುವೈಲ್ ಕೆಲರಾಯಿ ಈ ಹಿಂದೆ ಮಳೆಗಾಲದಲ್ಲಿ ಗುಡ್ಡ ಕುಸಿತವುಂಟಾಗಿತ್ತು. ಇದೀಗ ಮತ್ತೆ ಕುಸಿತಗೊಂಡು ಸ್ಥಳೀಯರಿಗೆ ಮನೆಗಳೇ ನಾಶವಾಗಬಹುದಾದ ಆತಂಕ ಶುರುವಾಗಿದೆ. ಗುಡ್ಡದ ಮೇಲಿರುವ ಎರಡು ಮನೆಗಳು ಅಪಾಯದ ಅಂಚಿನಲ್ಲಿ ಜೀವನ ಸಾಗಿಸುವ ದುಸ್ಥಿತಿ ಎದುರಾಗಿವೆ.
ಈ ಬಗ್ಗೆ ಸಂತ್ರಸ್ತರಾದ ಜಯಂತಿ ಮತ್ತು ವಸಂತ್ ಅವರು ಮಾತನಾಡಿ, ಗುಡ್ಡ ಕುಸಿತಗೊಂಡು ವರ್ಷ ಕಳೆದಿದೆ. ಕಳೆ ಮಳೆಗಾಲದ ಸಂದರ್ಭದಲ್ಲಿ ಗುಡ್ಡ ಕುಸಿದಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ದೇವು. ಆದರೆ ಈ ವರೆಗೆ ಸ್ಪಂದಿಸಿಲ್ಲ ಅಳಲು ತೋಡಿಕೊಂಡರು.
ವಾಮಂಜೂರಿನ ವಿಎ ಮುತ್ತಪ್ಪ್ಲವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಂಭಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿದ್ದು, ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆ ನೀಡಿದರು.
ಮಳೆಗಾಲದಲ್ಲಿ ಇಲ್ಲಿ ವಾಸವಿರುವ ಮನೆ ಮಂದಿ ನಿತ್ಯ ಭಯದಲ್ಲಿ ಜೀವನ ಸಾಗಿಸಬೇಕಾದ ಪರಿಸ್ಥಿತಿ ಇದೆ. ಶಾಶ್ವತ ಪರಿಹಾರ ನೀಡಲು ಯಾವುದೇ ಕ್ರಮಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಭರವಸೆಗಳನ್ನು ನೀಡಿ ಹೋಗುತ್ತಾರೆ. ಇಲ್ಲಿನ ಜನತೆ ಆತಂಕದಲ್ಲಿಯೇ ಜೀವನ ಸಾಗಿಸುವಂತಾಗಿದೆ. ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.