V4STREAM ನ ಓಟಿಟಿಯಲ್ಲಿ ನಸೀಬ್ – ಏರೆಗುಂಡು ಏರೆಗಿಜ್ಜಿ ತುಳು ಸಿನಿಮಾ ರಿಲೀಸ್ #naseeb
ವಿ4 ಸ್ಟ್ರೀಮ್ ಓಟಿಟಿಯು ಕನ್ನಡ ಚಲನಚಿತ್ರವನ್ನು ತುಳು ಭಾಷೆಗೆ ಡಬ್ಬಿಂಗ್ ಮಾಡುವ ಮೂಲಕ ಸಿನಿ ಪ್ರೇಕ್ಷರನ್ನು ಮನರಂಜಿಸಿದೆ. ಇದೀಗ ಮೊಟ್ಟ ಮೊದಲ ಬಾರಿಗೆ ಕೊಂಕಣಿ ಭಾಷೆಯ `ನಶೀಬಾಚೊ ಖೆಳ್’ ಎನ್ನುವ ಸಿನಿಮಾವನ್ನು `ನಸೀಬ್ ಏರೆಗುಂಡು ಏರೆಗಿಜ್ಜಿ’ ಹೆಸರಲ್ಲಿ ಡಬ್ ಮಾಡಲಾಗಿದ್ದು, ಮೋಂತಿ ಫೆಸ್ಟ್‍ನ ದಿನದಂದು ವಿ4 ಸ್ಟ್ರೀಮ್‍ನಲ್ಲಿ ತೆರೆ ಕಂಡಿದೆ. ಕರ್ನಾಟಕದ ಮೊಟ್ಟ ಮೊದಲ ಓಟಿಟಿ ಪ್ಲಾಟ್ ಫಾಮ್ ವಿ4ಸ್ಟ್ರೀಮ್ ಪ್ರಯೋಗ ಕುತೂಹಲ ಮೂಡಿಸಿದೆ.
ಸುಮಾರು 35 ವರ್ಷಗಳ ಹಿಂದೆ ಹೆನ್ರಿ ಡಿ ಸಿಲ್ವರವರು ರಚಿಸಿದ ಕಾಜಾರಾಚೆ ಉತಾರ್ ಎಂಬ ನಾಟಕದ ಮೂಲ ಕಥೆಯನ್ನಾಧರಿಸಿ ಮತ್ತು ಇದನ್ನು ಆಧುನಿಕತೆಗುಣವಾಗಿ ಚಲನಚಿತ್ರವಾಗಿ ತೆರೆಗೆ ತರಲಾಗಿದೆ. ಕ್ಯಾಮ್ ಫಿಲ್ಮ್ ಅರ್ಪಿಸುವ, ಪ್ರೆಸ್ಟಸ್ ಎಂಟರ್ ಪ್ರೈಸಸ್ ಲಾಂಭನದಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಹೆನ್ರಿ ಡಿಸಿಲ್ವ ನಿರ್ಮಿಸಿದ್ದಾರೆ. ಹ್ಯಾರಿ ಫರ್ನಾಂಡೀಸ್ ನಿರ್ದೇಶಿಸಿದ ನಶೀಬಾಚೊ ಖೆಳ್ ಕೊಂಕಣಿ ಚಲನಚಿತ್ರವು ನಸೀಬ್ ಏರೆಗುಂಡು ಏರೆಗಿಜ್ಜಿ ತುಳುವಿಗೆ ಡಬ್ಬಿಂಗ್ ಮಾಡಲಾಗಿದ್ದು, ವಿ4 ಸ್ಟ್ರೀಮ್ ಓಟಿಟಿಯಲ್ಲಿ ತೆರೆ ಕಂಡಿತು.
ಇನ್ನು ವಿ4 ಸ್ಟುಡಿಯೋದಲ್ಲಿ ನಸೀಬ್ ಏರೆಗುಂಡು ಏರೆಗಿಜ್ಜಿ ಸಿನಿಮಾವನ್ನು ಬಿಡುಗಡೆಗೊಳಿಸಲಾಯ್ತು. ಇನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮವನ್ನು ಆಚರಿಸಲಾಯ್ತು. ಈ ಸಮಾರಂಭದಲ್ಲಿ ಮಾತನಾಡಿದ ಚಿತ್ರ ನಿರ್ಮಾಪಕ ಹೆನ್ರಿ ಡಿ’ಸಿಲ್ವ ಅವರು, ನನ್ನ ಮೂವಿಯನ್ನ ತುಳುವಿನಲ್ಲಿ ತೆರೆ ತರಬೇಕೆಂಬ ಕನಸು ಇತ್ತು. ಅದರೆ ಇಷ್ಟು ಬೇಗದಲ್ಲಿ ಚಿತ್ರ ತೆರೆ ಬಂದಿರುವುದು ಖುಷಿ ಆಗಿದೆ. ಎಲ್ಲಾ ಸಹಕಾರದೊಂದಿಗೆ ಚಿತ್ರವೂ ವಿ4 ಸ್ಟ್ರೀಮ್‍ನಲ್ಲಿ ರಿಲೀಸ್ ಆಗಿದೆ ಎಂದು ಅವರು ಹೇಳಿದರು.
ತದ ಬಳಿಕ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಕೆನ್ಯೂಟ್ ಪಿಂಟೋ ಮಾತನಾಡಿ, ಕೊಂಕಣಿ ಚಿತ್ರವನ್ನು ತುಳುವಿಗೆ ಡಬ್ ಮಾಡುವ ಮೂಲಕ ಹೆನ್ರಿ ಡಿ’ಸಿಲ್ವ ಅವರು ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದ್ದಾರೆ. ನಸೀಬ್ ಏರೆಗುಂಡು ಏರೆಗಿಜ್ಜಿ ಚಿತ್ರದಲ್ಲಿ ಪ್ರತಿಯೊಬ್ಬರ ಶ್ರಮವಿದೆ. ಹಾಗಾಗಿ ಈ ಚಿತ್ರವೂ ಯಶಸ್ಸು ಆಗುವ ನಿಟ್ಟಿನಲ್ಲಿ ನಿಮ್ಮೆಲ್ಲರ ಪ್ರೋತ್ಸಾಹ ಹಾಗೂ ಬೆಂಬಲ ಬೇಕಾಗಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ಕೊಂಕಣಿ ಅಲ್ಲದೇ ಇತರ ಭಾಷೆಯ ಸಿನಿಮಾಗಳು ತುಳುವಿನಲ್ಲಿ ತೆರೆಗೆ ಬರಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಇನ್ನು ವಿ4 ನ್ಯೂಸ್ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್ ಮಾತನಾಡಿ,ಮೊದಲ ಬಾರಿಗೆ ಕೊಂಕಣಿ ಭಾಷೆಯ ಚಿತ್ರವನ್ನು ತುಳುವಿಗೆ ಡಬ್ಬಿಂಗ್ ಮಾಡಲಾಗಿದೆ. ಸಂಗೀತ ವಿನೋದ್ ರಾಜ್ ಕೋಕಿಲ್ ಅವರು ಆ ದೃಶ್ಯಕ್ಕೆ ತಕ್ಕಂತೆ ಹೊಸ ಹಾಡುಗಳನ್ನು ಸಂಯೋಜಿಸುವ ಮೂಲಕ ಚಿತ್ರವೂ ಉತ್ತಮವಾಗಿ ಮೂಡಿ ಬಂದಿದೆ ಎಂದು ಅವರು ಹೇಳಿದರು.
ವಿ4ನ್ಯೂಸ್‍ನ ಪ್ರಧಾನ ಸಂಪಾದಕ ತಾರಾನಾಥ್ ಗಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ವೇಳೆ ವಿ4ನ್ಯೂಸ್‍ನ ಉಪಾಧ್ಯಕ್ಷೆ ರೋಸ್ಲಿನ್ ಡಿಲೀಮಾ, ಸಂಗೀತ ನಿರ್ದೇಶಕ ವಿನೋದ್ ರಾಜ್ ಕೋಕಿಲ, ಡಬ್ಬಿಂಗ್ ಇಂಜಿನಿಯರ್ ಧನರಾಜ್ ಉರ್ವಸ್ಟೋರ್, ಹಾಗೂ ಮಹೇಶ್ ಉಪಸ್ಥಿತರಿದ್ದರು. ವಿ4 ಸ್ಟುಡಿಯೋದಲ್ಲಿ ಈ ಚಿತ್ರದ ಡಬ್ಬಿಂಗ್ ಮಾಡಲಾಗಿದೆ. ನಟ ಸ್ವರಾಜ್ ಶೆಟ್ಟಿ, ನಿರೀಕ್ಷಾ ಶೆಟ್ಟಿ, ಶೈಲಶ್ರೀ ಅವರು ಕಂಠದಾನ ಮಾಡಿದ್ದಾರೆ. ಹಾಸ್ಯದಲ್ಲಿ ಜಗದೀಶ್ ಆಡ್ಯಾರ್ ಸಾಥ್ ನೀಡಿದ್ದಾರೆ. ಹಿನ್ನೆಲೆ ಗಾಯನದಲ್ಲಿ ವಿದ್ಯಾ ಸುವರ್ಣ, ವೈಷ್ಣವಿ ಕಿಣಿ, ಪ್ರಶಾಂತ್ ಕಂಕನಾಡಿ, ವಿನೋದ್ ಕೋಕಿಲಾ,ನಿಕಿತಾ ಪೂಜಾರಿ, ಅವರು ಕಂಠ ಸಿರಿಯಲ್ಲಿ ಅದ್ಭುತವಾಗಿ ಹಾಡುಗಳು ಮೂಡಿ ಬಂದಿದೆ. ವಿನೋದ್ ರಾಜ್ ಕೋಕಿಲ ಅವರು ಸಂಗೀತ ನೀಡಿದ್ದಾರೆ. ರಂಜಿತ್ ಕದ್ರಿ, ಆಶ್ವಿನ್ ಬಂಟ್ವಾಳ್ ಅವರು ಸಾಹಿತ್ಯ ಒದಗಿಸಿದ್ದಾರೆ. ವಿನೋದ್ ರಾಜ್ ಕೋಕಿಲ್ ಅವರು ಆ ದೃಶ್ಯಕ್ಕೆ ತಕ್ಕಂತೆ ಹೊಸ ಹಾಡುಗಳನ್ನು ಸಂಯೋಜಿಸಿ ತುಳು ಸಿನಿಮಾಕ್ಕೆ ಹೊಸ ನಾಂದಿ ಹಾಡಿದ್ದಾರೆ. ಗೂಗಲ್ ಫ್ಲೇಸ್ಟೋರ್‍ನಿಂದ ವಿ4ಸ್ಟ್ರೀಮ್ ಆಪ್ ಡೌನ್ ಲೋಡ್ https://bit.ly/38mpTDM ಮಾಡಿಕೊಂಡು ಈ ಸಿನಿಮಾ ನೋಡಬಹುದು.