ಮಂಗಳೂರು: ವಿ.ಟಿ.ರೋಡ್ ಬಾಲಕ ವೃಂದ, ಶ್ರೀ ಶಾರದಾ ಪೂಜಾ ಸಮಿತಿಯಿಂದ ಶ್ರೀ ಶಾರದಾ ಪೂಜಾ ಮಹೋತ್ಸವ

ಮಂಗಳೂರಿನ ವಿ.ಟಿ.ರೋಡ್ ಬಾಲಕ ವೃಂದ, ಶ್ರೀ ಶಾರದಾ ಪೂಜಾ ಸಮಿತಿಯ ವತಿಯಿಂದ ನಗರದ ಶ್ರೀ ವಿಠೋಭ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀ ಕೃಷ್ಣ ಮಂದಿರದ ಸಭಾಗೃಹದಲ್ಲಿ ಶ್ರೀ ಶಾರದಾ ಪೂಜಾ ಮಹೋತ್ಸವವು ಅ.23 ರ ವರೆಗೆ ನಡೆಯಲಿದೆ.ಅ.18ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಅ.19ರಂದು ದೇವಿಯ ಪ್ರತಿಷ್ಠೆ, ಅ.20ರಂದು ಚಂಡಿಕಾ ಹವನ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿಪೂಜೆ ನಡೆಯಿತು.
ಅ.21 ರಂದು ಮಧ್ಯಾಹ್ನ ಪೂಜೆ ನಂತರ ನಂತರ ಸಂಜೆ 6.30ಕ್ಕೆ ವಿಶೇಷ ದೀಪಾಲಂಕಾರ ಸೇವೆ, ರಾತ್ರಿ 8.30 ರಂಗಪೂಜೆ, ರಾತ್ರಿ ಪೂಜೆ, ಪ್ರಸಾದ ವಿತರಣೆ. ಅ.22ರಂದು ರಾತ್ರಿ 8.30ಕ್ಕೆ ವಿಶೇಷ ರಂಗಪೂಜೆ, ರಾತ್ರಿ ಪೂಜೆ, ವಿಸರ್ಜನಾ ಪೂಜೆ, ಪ್ರಸಾದ ವಿತರಣೆ ಮತ್ತು ಅ.23ರಂದು ಸಂಜೆ 6.30ರಿಂದ ಪೂರ್ಣಾಲಂಕಾರಗೊಂಡ ದೇವಿಯ ದರ್ಶನ ಪಡೆಯಬಹುದು. ಶ್ರೀ ದೇವಿಯ ವಿಸರ್ಜನಾ ಶೋಭಾಯಾತ್ರೆಯು ಉತ್ಸವ ಸ್ಥಳದಿಂದ ಹೊರಟು ಮಹಾಮ್ಮಾಯ ದೇವಸ್ಥಾನ ರಸ್ತೆ, ಡೊಂಗರಕೇರಿ, ನ್ಯೂಚಿತ್ರಾ ಜಂಕ್ಷನ್, ಚಾಮರಗಲ್ಲಿ, ರಥಬೀದಿ ಮುಖಾಂತರ ಸಾಗಿ ಮಹಾಮ್ಮಾಯ ಕೆರೆಯಲ್ಲಿ ವಿಸರ್ಜನೆ ನಡೆಯಲಿದೆ.
