ಕಂಕನಾಡಿ ವೆಸ್ಟ್‌ಕೋಸ್ಟ್ ಶೋರೂಂ : ಜೂನ್ 21 ಫ್ಯಾಷನ್ ಪ್ಲಸ್ ದ್ವಿಚಕ್ರ ವಾಹನ ಬಿಡುಗಡೆ
ಮಂಗಳೂರಿನ ಕಂಕನಾಡಿಯಲ್ಲಿರುವ ವೆಸ್ಟ್‌ಕೋಸ್ಟ್ ಶೋರೂಂನಲ್ಲಿ ವಿಶಿಷ್ಟ ವಿನ್ಯಾಸದ ವಾಹಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಇದೀಗ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಫ್ಯಾಷನ್ ಪ್ಲಸ್ ದ್ವಿಚಕ್ರ ವಾಹನವನ್ನು ಜೂನ್ 21 ರಂದು ಮಂಗಳೂರಿನ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದ್ದಾರೆ.
ಪ್ರತಿಷ್ಠಿತ ವೆಸ್ಟ್ ಕೋಸ್ಟ್ ಶೋರೂಂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಗ್ರಾಹಕರ ಅಚ್ಚುಮೆಚ್ಚಿನ ಶೋರೂಂ ಆಗಿದೆ. ವೆಸ್ಟ್ ಕೋಸ್ಟ್ ಶೋರೂಂನ ದ್ವಿಚಕ್ರ ವಾಹನಗಳು ವಿವಿಧ ವಿನ್ಯಾಸ ಮತ್ತು ಆತ್ಯಾಕರ್ಷಕ ಶೈಲಿಯಿಂದ ದ್ವಿಚಕ್ರ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ವೆಸ್ಟ್ ಕೋಸ್ಟ್ ಶೋರೂಂನಲ್ಲಿ ನೂತನ ಮಾದರಿಯ ಫ್ಯಾಷನ್ ಪ್ಲಸ್ ದ್ವಿಚಕ್ರ ವಾಹನ ವಿಶಿಷ್ಟ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಹೊಸ ಮಾದರಿಯ ದ್ವಿಚಕ್ರ ವಾಹನ ಫ್ಯಾಷನ್ ಪ್ಲಸ್ ಜೂನ್ 21ರಂದು ಸಂಜೆ 4 ಗಂಟೆಗೆ ಕಂಕನಾಡಿಯಲ್ಲಿರುವ ವೆಸ್ಟ್ ಕೋಸ್ಟ್ ಶೋರೂಂನಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕದ್ರಿ ಪೋಲಿಸ್ ಸ್ಟೇಷನಿನ ಇನ್ಸ್‌ಪೆಕ್ಟರ್ ಗೋಪಾಲ ಕೃಷ್ಣ ಭಟ್ ಹಾಗೂ ದ.ಕ ಮತ್ತು ಉಡುಪಿ ಗ್ಯಾರೇಜ್ ಅಸೋಸಿಯೇಶನ್ ಅಧ್ಯಕ್ಷ ಕೇಶವ ಕಿಶೋರ್ ಅವರು ಭಾಗವಹಿಸಲಿದ್ದಾರೆ.
ಈ ನೂತನ ಫ್ಯಾಷನ್ ಪ್ಲಸ್ ಬೈಕ್ ಸ್ಟೈಲಿಶ್ ಗ್ರಾಫಿಕ್ಸ್‌ನೊಂದಿಗೆ ಸಾಂಪ್ರದಾಯಿಕ ವಿನ್ಯಾಸ, ಸುಂದರವಾದ ಕ್ರೋಮ್ ಅಲಂಕಾರ, ಡಿಜಿ – ಅನಲಾಗ್ ಕ್ಲಸ್ಟರ್, ಸಿಲ್ವರ್ ರಿಮ್ ಟೇಪ್ಸ್, ಸ್ಪೇಶಿಯಸ್ ಯುಟಿಲಿಟಿ ಕೇಸ್, ಸೈಡ್ ಸ್ಟ್ಯಾಂಡ್ ಸೂಚಕ, ಮೊಬೈಲ್ ಚಾರ್ಜರ್, ಅಗಲ ಮತ್ತು ಉದ್ದವಾದ ಆಸನವನ್ನು ಹೊಂದಿದೆ.
ಮಂಗಳೂರು, ಮುಡಿಪು ವಿಟ್ಲ, ಕೈಕಂಬ ಮತ್ತು ಉಜಿರೆಯಲ್ಲಿ ವೆಸ್ಟ್‌ಕೋಸ್ಟ್ ಶೋರೂಂ ಕಾರ್ಯಾಚರಿಸುತ್ತಿದೆ.