ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕಸ ಹೆಕ್ಕಲು ಬೀದಿಗೆ ಹೋದರೆ ಗ್ರಾ.ಪಂ. ನಲ್ಲಿ ಕಾರ್ಯ ನಿರ್ವಾಹಿಸುವವರು ಯಾರು : ಗ್ರಾ.ಪಂ. ಮಾಜಿ ಅಧ್ಯಕ್ಷ ಎಲ್ಲೂರು ಯಶವಂತ ಶೆಟ್ಟಿ ಪ್ರಶ್ನೆ

ಎಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸ್ಥರ ಕೆಲಸ ಕಾರ್ಯಗಳನ್ನು ನಿಭಾಯಿಸ ಬೇಕಾಗಿದ್ದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕಸ ಹೆಕ್ಕಲು ಬೀದಿಗೆ ಹೋದರೆ ಗ್ರಾ.ಪಂ. ನಲ್ಲಿ ಕಾರ್ಯ ನಿರ್ವಾಹಿಸುವವರು ಯಾರು ಎಂಬುದಾಗಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಲ್ಲೂರು ಯಶವಂತ ಶೆಟ್ಟಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಮಾದ್ಯಮದೊಂದಿಗೆ ಮಾತನಾಡಿದ ಯಶವಂತ ಶೆಟ್ಟಿ, ತಮ್ಮ ಕೆಲಸ ಕಾರ್ಯಗಳಿಗಾಗಿ ಜನರು ಗ್ರಾ.ಪಂ. ಮುಂದೆ ಕಾದು ಕಾದು ಸುಸ್ತು, ಕಾರಣ ಪಿಡಿಓ ರವರು ಸಿಬ್ಬಂದಿಗಳ ಸಹಿತ ರಸ್ತೆ ಬದಿಯ ಕಸ ಹೆಕ್ಕುವ ಕಾರ್ಯದಲ್ಲಿ ಬಿಜಿ. ಕಾರಣ ಕೇಳಿದರೆ ಪ್ರತೀ ಶನಿವಾರ ರಸ್ತೆಯಂಚಿನ ಕಸ ಹೆಕ್ಕುವಂತೆ ಮೇಲಾಧಿಕಾರಿಗಳು ಕಢಕ ಸಂದೇಶ ಹೊರಡಿಸಿದ್ದಾರೆ, ಆ ನಿಟ್ಟಿನಲ್ಲಿ ಸಿಬ್ಬಂದಿಗಳೊಂದಿಗೆ ಕಸ ಹೆಕ್ಕಲು ಬಂದಿದ್ದೇವೆ ಎನ್ನುತ್ತಾರೆ. ಇದನ್ನು ಕಛೇರಿ ಸಿಬ್ಬಂದಿಗಳೇ ನಡೆಸ ಬೇಕಾ ಎಸ್ ಎಲ್ ಆರ್ ಎಂ. ಘಟಕದ ಸಿಬ್ಬಂದಿಗಳು ಇದ್ದಾರಲ್ಲ ಎಂದಾಗ ಅವರಲ್ಲಿ ಉತ್ತರವಿಲ್ಲ. ಅಂದರೆ ಮೇಲಾಧಿಕಾರಿಗಳ ಆದೇಶ ಪಾಲಿಸುವ ಜವಾಬ್ದಾರಿಯನ್ನು ಪಿಡಿಓ ಪಾಲಿಸುತ್ತಾರೆ ಎಂದಾದರೆ.. ಪಿಡಿಓರವರ ನಿಯಂತ್ರದಲ್ಲಿರುವ ಎಸ್ ಎಲ್ ಆರ್ ಎಂ ಘಟಕ ಸಿಬ್ಬಂದಿಗಳು ಅವರು ಮಾತನ್ನು ಏಕೆ ಕೇಳುತ್ತಿಲ್ಲ..ಈ ಸಿಬ್ಬಂದಿಗಳನ್ನು ನಿಯಂತ್ರಿಸುತ್ತಿರುವ ಶಕ್ತಿ ಯಾವುದು.? ಅವರವರ ಕೆಲಸಗಳನ್ನು ಅವರವರೇ ನಿರ್ವಾಹಿಸುವ ಮೂಲಕ ಗ್ರಾ.ಪಂ. ನಲ್ಲಿ ಗ್ರಾಮದ ಜನರ ಕೆಲಸ ಕಾರ್ಯಗಳು ಕಾಲಕಾಲಕ್ಕೆ ನಡೆಯ ಬೇಕು ತಪ್ಪಿದ್ದಲ್ಲಿ ಹಕ್ಕಿಗಾಗಿ ಹೋರಾಟ ಅನಿವಾರ್ಯ ಎಂದರು.