ಯೆಯ್ಯಾಡಿ : ಕಟ್ಟಡದ ಮೇಲೆ ಬಿದ್ದ ಬೃಹತ್ತಾಕಾರದ ಮರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಕೆಲವೆಡೆ ಹಾನಿ ಸಂಭವಿಸಿದೆ. ಮಂಗಳೂರಿನ ಯೆಯ್ಯಾಡಿ ಜಂಕ್ಷನ್‍ನಲ್ಲಿ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬವೊಂದು ವಾಣಿಜ್ಯ ಕಟ್ಟಡ ಬಿದ್ದಿದ್ದು, ಸಂಭಾವ್ಯ ಹಾನಿ ತಪ್ಪಿದೆ. ಯೆಯ್ಯಾಡಿಯಿಂದ ಶಕ್ತಿನಗರಕ್ಕೆ ಸಂಪರ್ಕಿಸುವ ರಸ್ತೆ ಇದ್ದಾಗಿದ್ದು, ಇಲ್ಲಿ ದಿನ ನಿತ್ಯ ವಾಹನ ಸಂಚಾರ ಕೂಡ ಇದ್ದು, ಪಾದಚಾರಿಗಳು ಈ ರಸ್ತೆಯನ್ನೆ ಅವಲಂಭಿಸಿದ್ದಾರೆ. ಮರ ಬಿದ್ದ ಪರಿಣಾಮ ದ್ವಿಚಕ್ರವಾಹನ ಜಖಂ ಆಗಿದೆ. ಜೊತೆಗೆ ವಿದ್ಯುತ್ ಕಂಬ ಕೂಡ ಹಾನಿಯಾಗಿದೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕೂಡ ಕಡಿತವಾಗಿದೆ.
