ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಉತ್ಪಾದನಾ ಘಟಕ
ಕಾರ್ಕಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಮಾನ್ಯ ನಾಡೋಜ ಡಾಕ್ಟರ್ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಮತ್ತು ಸಂಘಸಂಸ್ಥೆಗಳು ಮತ್ತು ದಾನಿಗಳ ಸಹಕಾರದಿಂದ ತಾಲೂಕು ಸರಕಾರಿ ಆಸ್ಪತ್ರೆ ಕಾರ್ಕಳ ಇಲ್ಲಿ ಇಂದು ಸುಮಾರು75 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ 300 ಎಲ್ಪಿಎಮ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವನ್ನು ಆಮ್ಲಜನಕ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರಥಮವಾದ ಆಮ್ಲಜನಕ ಉತ್ಪಾದನೆ ಘಟಕ ಇದಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನು ಕಾಲಕಾಲಕ್ಕೆ ತಕ್ಕಂತೆ ಉನ್ನತಿಕರಣ ಗೊಳಿಸುವಂಥ ಕೆಲಸ ಈಗಾಗಲೆ ನಡೆಯುತ್ತದೆ. ಕೋರೋಣ ಮೊದಲನೆಯ ಸಂದರ್ಭದಲ್ಲಿ ಹೊರರಾಜ್ಯದಿಂದ ಬಂದವರಿಗೆ ಅತ್ಯುತ್ತಮ ರೀತಿಯಲ್ಲಿ ಕೋರಂ ಟೈನ್ ಸಂದರ್ಭದಲ್ಲಿಉತ್ತಮ ಸೇವೆಯನ್ನು ನೀಡಿದ್ದು ರಾಜ್ಯದಲ್ಲಿ ಪ್ರಥಮವಾದ ಕಾರ್ಕಳ ವಾಗಿರುತ್ತದೆ. ಎರಡನೆಯ ಬಂದ ಸಂದರ್ಭದಲ್ಲಿ ಕಾರ್ಕಳದ ಎಲ್ಲಾ ಕಡೆ ಅತ್ಯುತ್ತಮವಾಗಿ ಲಸಿಕೆ ನೀಡುವಲ್ಲಿ ನಾವು ಸಫಲವಾಗಿ ದೇವೆ. ಕೊರುನ ಮೂರನೇ ಅಲೆ ಬರಬಹುದಾದ ಸಂದರ್ಭದಲ್ಲಿ ಅದನ್ನು ಯಶಸ್ವಿಯಾಗಿ ತಡೆಗಟ್ಟಲು ದಾನಿಗಳ ಸಹಾಯದಿಂದ ಆಮ್ಲ ಜನಕದ ಉತ್ಪಾದನೆ ಘಟಕವನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ತಾಲೂಕು ವೈದ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ ಅವರು ಮಾತನಾಡಿ ಮೊದಲೇ ಬಂದಾಗ ಜನರು ನಂಬಲಿಲ್ಲ ಎರಡನೇ ಬಂದಾಗ ಸಮಾಜದಲ್ಲಿ ಉಂಟಾದ ಸಾವು ನೋವು ಹಾಗೂ ಏರುಪೇರಿನಿಂದಾಗಿ ಎಲ್ಲರ ಅದರ ಅದರ ಪರಿಣಾಮ ಎದುರಿಸಿದರು ಇಂದು ನಮ್ಮ ಸಚಿವರು ಮುಂಬರುವ ಕೊರನಾ ಮೂರನೇ ಅಲೆ ಎದುರಿಸಲು ಅತಿಶೀಘ್ರವಾಗಿ ಮಹತ್ವದ ಹೆಜ್ಜೆ ಇಟ್ಟು ಉತ್ಪಾದನೆ ಘಟಕವನ್ನು ನಿರ್ಮಾಣ ಮಾಡಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರು ದಾನಿಗಳಿಗೆ ಸನ್ಮಾನಿಸಿ ಅಭಿನಂದಿಸಿದರು. ವೇದಿಕೆಯಲ್ಲಿ ಡಾಕ್ಟರ್ ಜಿ ಶಂಕರ್, ಸಂತೋಷ್ ಡಿಸಿಲ್ವಾ, ಕಡಾರಿ ರವೀಂದ್ರ ಪ್ರಭು, ಬೋಳ ದಾಮೋದರ್ ಕಾಮತ್, ಸುಮ ಕೇಶವ್, ಮನಿ ರಾಜ್ ಶೆಟ್ಟಿ, ರೂಪ ಶೆಟ್ಟಿ, ಆಡಳಿತ ವೈದ್ಯಾಧಿಕಾರಿಗಳಾದ ಡಾಕ್ಟರ್ ಕೆ ಸುಬ್ರಹ್ಮಣ್ಯ ರಾವ್ ಮುಂತಾದ ಉಪಸ್ಥಿತರಿದ್ದರು.