ಕೊಂಡೆವೂರು ಮಠದಲ್ಲಿ ನವಗ್ರಹ ಪ್ರತಿಷ್ಠೆ ಮತ್ತು ಅಷ್ಟೋತ್ತರ ಸಹಸ್ರ ನವಗ್ರಹ ಯಾಗ

ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಮಠದಲ್ಲಿ ದಿ. 24.03.2024 ನೇ ರವಿವಾರ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳವರ ನೇತೃತ್ವದಲ್ಲಿ, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ಬ್ರಹ್ಮ ಶ್ರೀ ಅನಂತಪದ್ಮನಾಭ ಆಸ್ರಣ್ಣರ ನಿರ್ದೇಶನದೊಂದಿಗೆ ಮತ್ತು ಬ್ರಹ್ಮ ಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರವರ ಆಚಾರ್ಯತ್ವದಲ್ಲಿ ನವಗ್ರಹ ಪ್ರತಿಷ್ಠೆ ಮತ್ತು ಲೋಕ ಕಲ್ಯಾಣಾರ್ಥವಾಗಿ ‘‘ಅಷ್ಟೋತ್ತರ ಸಹಸ್ರ ನವಗ್ರಹ ಯಾಗ’’ ವು ಜರಗಲಿರುವುದು. ತಾರೀಕು 23.03.2024 ನೇ ಶನಿವಾರ, ಸಾಯಂಕಾಲ 4.00 ಕ್ಕೆ ಋತ್ವಿಜರ ಆಗಮನ ,4.30 ಕ್ಕೆ ಉಪ್ಪಳ ಪೇಟೇಯಿಂದ ಹೊರೆಕಾಣಿಕೆ ಮೆರವಣಿಗೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ, ಅದೇ ದಿನ ಸಾಯಂಕಾಲ 6.00 ಕ್ಕೆ ಪ್ರಾಸಾದ ಶುದ್ಧಿ, ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೆÆÃಘ್ನಹೋಮ, ಬಿಂಬ ಶಯ್ಯಾಧಿವಾಸ. ತಾರೀಕು 24.03.2024 ಆದಿತ್ಯವಾರ ಪ್ರಾತಃ 6.00 ಕ್ಕೆ ಪ್ರಾರ್ಥನೆ, ಪುಣ್ಯಾಹವಾಚನ, ಆಚಾರ್ಯವರಣ, 7.30 ಕ್ಕೆ ಅಷ್ಟೋತ್ತರ ಸಹಸ್ರ ನವಗ್ರಹ ಯಾಗ ಆರಂಭ, 9.58 ರ ವೃಷಭ ಲಗ್ನ ಸುಮುಹೂರ್ತದಲ್ಲಿ ನವಗ್ರಹ ಪ್ರತಿಷ್ಠೆ ನಡೆಯಲಿದೆ. 10.30 ಕ್ಕೆ ಯತಿಶ್ರೇಷ್ಠರಾದ ಪರಮ ಪೂಜ್ಯ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದಂಗಳವರು, ಅದಮಾರುಮಠ,ಉಡುಪಿ, ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಎಡನೀರು ಮಠ, ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ, ಮಾಣಿಲ,ಪರಮ ಪೂಜ್ಯ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕರಿಂಜೆ ಗಳವರಿಗೆ ಪೂರ್ಣಕುಂಭ ಸ್ವಾಗತ. ಮಧ್ಯಾಹ್ನ 11.00 ಕ್ಕೆ ಪರಮಪೂಜ್ಯ ಸ್ವಾಮೀಜಿಯವರಿಂದ ಅನುಗ್ರಹ ಸಂದೇಶ, 11.30 ಕ್ಕೆ ಪರಮ ಪೂಜ್ಯ ಯತಿವರ್ಯರುಗಳ ಸಾನ್ನಿದ್ಯದಲ್ಲಿ ಯಾಗದ ಪೂರ್ಣಾಹುತಿ ನಡೆಯಲಿರುವುದು. ಮಧ್ಯಾಹ್ನ 1.00 ಕ್ಕೆ ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿರುವುದು. ಈ ಸಂದರ್ಭದಲ್ಲಿ ಮಾನ್ಯ ಶ್ರೀ ಪಾದ ಯಸ್ಸೋ ನಾಯಕ್, ಪ್ರವಾಸೋದ್ಯಮ ಖಾತೆ(ಸ್ವತಂತ್ರ) ರಾಜ್ಯ ಸಚಿವರು, ಭಾರತ ಸರಕಾರ. ಶ್ರೀ ಕೆ. ನಾರಾಯಣ , ಮಾನ್ಯ ರಾಜ್ಯಸಭಾ ಸದಸ್ಯರು, (ಅಧ್ಯಕ್ಷರು, ಯಾಗ ಸಮಿತಿ)ಶ್ರೀ ಸದಾಶಿವ ಶೆಟ್ಟಿ ಕುಳೂರು, ಕನ್ಯಾನ(ಗೌರವಾಧ್ಯಕ್ಷರು ಯಾಗ ಸಮಿತಿ) ಶ್ರೀ ರಮೇಶ್ ರಾಜು, ಚೆಯರ್‌ಮನ್, ಆಕ್ಸಫರ್ಡ್ ವಿದ್ಯಾಸಂಸ್ಥೆಗಳು, ಬೆಂಗಳೂರು, ಶ್ರೀ ಡಾ. ಕೆ. ಸಿ. ರಾಮಮೂರ್ತಿ, ಐ.ಪಿ.ಎಸ್, ಮಾಜಿ ರಾಜ್ಯಸಭಾ ಸದಸ್ಯರು, ಬೆಂಗಳೂರು,ಶ್ರೀ ಡಾ. ಮೋಹನ್ ಆಳ್ವ, , ಶ್ರೀ ಕೆ ಕೆ ಶೆಟ್ಟಿ, ಡಾ. ಜಿ ರಮೇಶ್ , ನಿವೃತ್ತ ಐ.ಪಿ.ಎಸ್ ಅಧಿಕಾರಿ, ಬೆಂಗಳೂರು, ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ. ಎ.ಜೆ ಶೇಖರ್, ತೊಕ್ಕೊಟ್ಟು, ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.
ಅಪರಾಹ್ಣ 2.30 ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಜರಗಲಿರುವುದು. ಸಾಯಂಕಾಲ ಸೂರ್ಯಾಸ್ತ 6.39 ಕ್ಕೆ ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಂದ ಅಖಂಡ ಭಜನಾ ಸಪ್ತಾಹದ ದೀಪ ಪ್ರಜ್ವಲನೆ. ಬಳಿಕ ನಕ್ಷತ್ರವನದಲ್ಲಿ ದೀಪೋತ್ಸವ ಜರಗಲಿರುವುದು. ತಾ. 31.03.2024 ಆದಿತ್ಯವಾರದಂದು ಸಾಯಂಕಾಲ ಸೂರ್ಯಾಸ್ತ 6.40 ಕ್ಕೆ ‘ಭಜನಾ ಮಂಗಲಾಚರಣೆ’ ನಡೆಯಲಿರುವುದು. ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೇದಮಾತೆಗಾಯತ್ರೀ ದೇವಿಯ, ಭಗವಾನ್ ಶ್ರೀ ನಿತ್ಯಾನಂದ ಗುರುಗಳ ಹಾಗೂ ನವಗ್ರಹರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಮಠದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Related Posts

Leave a Reply

Your email address will not be published.